ಶುಕ್ರವಾರ, ಜನವರಿ 27, 2023
21 °C

ಟೊಯೋಟ ಇನೋವಾ ಹೈಕ್ರಾಸ್‌ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಟೊಯೋಟ ಕಿರ್ಲೋಸ್ಕರ್‌ ಮೋಟರ್‌ ಕಂಪನಿಯು ಹೊಸ ಹೈಬ್ರಿಡ್‌ ವಾಹನ ‘ಇನೋವಾ ಹೈಕ್ರಾಸ್‌’ ಅನಾವರಣ ಮಾಡಿದೆ.

ಟೊಯೋಟ ನ್ಯೂ ಗ್ಲೋಬಲ್‌ ಆರ್ಕಿಟೆಕ್ಚರ್‌ (ಟಿಎನ್‌ಜಿಎ) ಆಧಾರಿತ 5ನೇ ಪೀಳಿಗೆಯ ಸೆಲ್ಫ್‌ ಚಾರ್ಜಿಂಗ್‌ ಹೈಬ್ರಿಡ್‌ ಎಲೆಕ್ಟ್ರಿಕ್‌ ವ್ಯವಸ್ಥೆಯನ್ನು ಇದು ಹೊಂದಿದೆ. 2.0 ಲೀಟರ್‌ 4 ಸಿಲಿಂಡರ್‌ ಗ್ಯಾಸೊಲಿನ್‌ ಎಂಜಿನ್‌ ಒಳಗೊಂಡಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

6 ಎಸ್‌ಆರ್‌ಎಸ್‌ ಏರ್‌ಬ್ಯಾಗ್‌, ರಿಯರ್‌ ಡಿಸ್ಕ್‌ ಬ್ರೇಕ್ಸ್‌, ಹಿಲ್‌ ಸ್ಟಾರ್ಟ್‌ ಅಸಿಸ್ಟ್‌, ಎಲೆಕ್ಟ್ರಾನಿಕ್‌ ಪಾರ್ಕಿಂಗ್ ಬ್ರೇಕ್‌ (ಇಪಿಬಿ) ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಭಾರತದಲ್ಲಿ  25 ವರ್ಷದ ಸಂಭ್ರಮದಲ್ಲಿ ಇರುವ ಕಂಪನಿಗೆ ಇದೊಂದು ಅದ್ಭುತ ವರ್ಷವಾಗಿದೆ. ಇಂಗಾಲದ ಹೊರಸೂಸುವಿಕೆಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುವ ಗುರಿಯೊಂದಿಗೆ, ಶುದ್ಧ ಮತ್ತು ಹಸಿರು ಇಂಧನ ಬಳಕೆಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸಲು ಸೂಕ್ತ ಸಮಯ ಇದು ಎಂದು ಟೊಯೋಟ ಕಂಪನಿಯ ಉಪಾಧ್ಯಕ್ಷ ವಿಕ್ರಂ ಕಿರ್ಲೋಸ್ಕರ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು