ಶನಿವಾರ, ಅಕ್ಟೋಬರ್ 31, 2020
24 °C

ರೆಡ್‌ಎಕ್ಸ್‌ ಪ್ರೀಮಿಯಂ ಯೋಜನೆ: ಟ್ರಾಯ್‌ ಆದೇಶಕ್ಕೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ವೊಡಾಫೋನ್‌ ಐಡಿಯಾ ಲಿಮಿಟೆಡ್ (ವಿಐಎಲ್‌) ಕಂಪನಿಯು ತನ್ನ ಚಂದಾದಾರರಿಗೆ ನೀಡುತ್ತಿದ್ದ ರೆಡ್‌ಎಕ್ಸ್‌ ಪ್ರೀಮಿಯಂ ಯೋಜನೆಯನ್ನು ತಡೆಹಿಡಿಯುವಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ನೀಡಿದ್ದ ಮಧ್ಯಂತರ ಆದೇಶಕ್ಕೆ ದೂರಸಂಪರ್ಕ ವ್ಯಾಜ್ಯಗಳ ಪರಿಹಾರ ಮತ್ತು ಮೇಲ್ಮನವಿ ನ್ಯಾಯಮಂಡಳಿಯು (ಟಿಡಿಸ್ಯಾಟ್‌) ತಡೆಯಾಜ್ಞೆ ನೀಡಿದೆ.

ಈ ಯೋಜನೆಯು ಬಳಕೆದಾರರಿಗೆ ಹೆಚ್ಚಿನ ವೇಗದ ಇಂಟರ್ನೆಟ್‌ ಸಂಪರ್ಕ ಹಾಗೂ ಕೆಲವು ಆದ್ಯತಾ ಸೇವೆಗಳನ್ನು ಒದಗಿಸುತ್ತದೆ ಎನ್ನುವುದು ಕಂಪನಿಯ ಹೇಳಿಕೆ. ‘ಟ್ರಾಯ್ ತನ್ನ ವಿಚಾರಣೆಯನ್ನು ಮುಂದುವರಿಸಬಹುದು. ಕಾನೂನಿಗೆ ಅನುಗುಣವಾಗಿ, ಸಹಜ ನ್ಯಾಯವನ್ನು ಪಾಲಿಸಿ ಆದಷ್ಟು ಬೇಗ ಆದೇಶ ಹೊರಡಿಸಬಹುದು’ ಎಂದು ನ್ಯಾಯಮಂಡಳಿ ಹೇಳಿದೆ.

ನ್ಯಾಯಮಂಡಳಿ ನೀಡಿರುವ ಈ ಆದೇಶ ಪರಿಣಾಮವಾಗಿ, ವಿಐಎಲ್‌ ಕಂಪನಿಯು ಈ ಯೋಜನೆಯನ್ನು ತನ್ನ ಗ್ರಾಹಕರಿಗೆ ಒದಗಿಸುವುದನ್ನು ಮುಂದುವರಿಸಬಹುದು. ಭಾರ್ತಿ ಏರ್‌ಟೆಲ್‌‌ ಕೂಡ ಇದೇ ಮಾದರಿಯ ಯೋಜನೆಯನ್ನು ಆರಂಭಿಸಿತ್ತು. ಹೀಗಾಗಿ, ನ್ಯಾಯಮಂಡಳಿಯ ಈ ಆದೇಶವು ಏರ್‌ಟೆಲ್‌ಗೂ ನೆರವಿಗೆ ಬರಬಹುದು ಎನ್ನಲಾಗಿದೆ.

ಏರ್‌ಟೆಲ್ ತನ್ನ ಪ್ಲಾಟಿನಮ್ ಯೋಜನೆಯನ್ನು ತಡೆಹಿಡಿಯುವಂತೆಯೂ ಟ್ರಾಯ್‌ ಸೂಚಿಸಿತ್ತು. ಇತರ ಯೋಜನೆಗಳ ಚಂದಾದಾರರಿಗೆ ಕಡಿಮೆ ಗುಣಮಟ್ಟದ ಸೇವೆ ನೀಡಿ, ಈ ಎರಡು ಯೋಜನೆಗಳ ಗ್ರಾಹಕರಿಗೆ ಹೆಚ್ಚಿನ ವೇಗದ ಇಂಟರ್ನೆಟ್ ಸೇವೆ ನೀಡಲಾಗುತ್ತಿದೆಯೇ ಎಂಬುದನ್ನು ವಿವರಿಸಿ ಎಂದು ಟ್ರಾಯ್‌ ಈ ಕಂಪನಿಗಳಿಗೆ ಸೂಚಿಸಿತ್ತು. ಟ್ರಾಯ್ ಆದೇಶವನ್ನು ಪ್ರಶ್ನಿಸಿ, ವಿಐಎಲ್‌ ನ್ಯಾಯಮಂಡಳಿಯ ಮೆಟ್ಟಿಲೇರಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು