ಬೆಂಗಳೂರು: ಟಿಟಿಕೆ ಪ್ರೆಸ್ಟೀಜ್ ಹೊಸ ಒಮೆಗಾ ಡೈ-ಕಾಸ್ಟ್ ಕುಕ್ವೇರ್ ಶ್ರೇಣಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಈ ಶ್ರೇಣಿಯು ಗಾಜಿನ ಮುಚ್ಚಳ ಹೊಂದಿರುವ ಕಡಾಯಿ, ಬಿಸಿಯಡಿಗೆ ಪಾತ್ರೆ, ಸ್ಕೇಯರ್ ಗ್ರಿಲ್ ಪ್ಯಾನ್, ಫ್ರೈ ಪ್ಯಾನ್ ಮತ್ತು ದೋಸೆ ತವಾವನ್ನು ಒಳಗೊಂಡಿದೆ. ಇದು ಟಿಟಿಕೆ ಪ್ರೆಸ್ಟೀಜ್ನ ನೆಕ್ಸ್ಟ್ಜನ್ ಹೈ-ಪರ್ಫಾರ್ಮೆನ್ಸ್ ಕುಕ್ವೇರ್ ಲೈನ್ಅಪ್ಗೆ ಹೊಸ ಸೇರ್ಪಡೆಯಾಗಿದೆ ಎಂದು ಕಂಪನಿ ತಿಳಿಸಿದೆ.

ಈ ಶ್ರೇಣಿಯ ಕುಕ್ವೇರ್ ಅಡುಗೆ ತಯಾರಿಸುವ ಹೊಸ ಅನುಭವವನ್ನು ಹೆಚ್ಚಿಸಲಿದೆ. ಬಾಳಿಕೆ ಬರುವ ಡೈ-ಕಾಸ್ಟ್ ಬಾಡಿಯೊಂದಿಗೆ ತಯಾರಿಸಲಾದ ಈ ಕುಕ್ವೇರ್ ಅಡುಗೆ ಮನೆಯಲ್ಲಿ ಸುದೀರ್ಘ ಕಾಲ ಬಾಳಿಕೆ ಬರುತ್ತದೆ. ಮೂರು ಪದರಿನ ಸುಲಭವಾಗಿ- ಬಿಡುವ ಕೋಟಿಂಗ್ ಒಳಗೊಂಡಿದೆ ಎಂದು ತಿಳಿಸಿದೆ.

ಈ ಉತ್ಪನ್ನವು ಕೂಲ್-ಟಚ್ ಹ್ಯಾಂಡಲ್ ಹೊಂದಿದೆ. ಬಿಸಿ ತಾಗಿ ಬೆರಳುಗಳು ಸುಡುವ ಸಮಸ್ಯೆಯಿಂದ ರಕ್ಷಣೆ ನೀಡುತ್ತದೆ. ಆ ಮೂಲಕ ಅಡುಗೆ ಮಾಡುವ ವೇಳೆ ಸುರಕ್ಷತೆ ನೀಡುತ್ತದೆ. ತ್ವರಿತವಾಗಿ ಬೇಯಿಸಲು ಅಥವಾ ತಳಮಳಿಸಿ ನಿಧಾನವಾಗಿ ಕುದಿಸಲು ಒಮೆಗಾ ಡೈ ಕ್ಯಾಸ್ಟ್ ಕುಕ್ವೇರ್ ಶ್ರೇಣಿಯ ಗ್ಯಾಸ್ ಸ್ಟೌಗಳಿಂದ ಇಂಡಕ್ಷನ್ವರೆಗೆ ಅಗತ್ಯಕ್ಕೆ ತಕ್ಕಂತೆ ಪರಿವರ್ತನೆಗೊಳ್ಳುವ ಸಾಮರ್ಥ್ಯವಿದೆ ಎಂದು ಕಂಪನಿ ತಿಳಿಸಿದೆ.

ಒಮೆಗಾ ಡೈ ಕಾಸ್ಟ್ ಕುಕ್ವೇರ್ ಶ್ರೇಣಿಯು ಪ್ರತಿ ಅಡುಗೆ ಮನೆಯ ಅಗತ್ಯವನ್ನು ಪೂರೈಸುತ್ತದೆ. ಶಾಖರೋಧ ಪಾತ್ರೆಯ ಹೊಸ ವಿನ್ಯಾಸವು ಅಗತ್ಯಕ್ಕೆ ತಕ್ಕಂತೆ ಶಾಖವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಸ್ಕ್ವೇರ್ ಗ್ರಿಲ್ ಪ್ಯಾನ್, ಫ್ರೈ ಪ್ಯಾನ್ ಮತ್ತು ದೋಸಾ ತವಾ ಗುಣಮಟ್ಟದ ಫಲಿತಾಂಶ ನೀಡುತ್ತವೆ ಎಂದು ತಿಳಿಸಿದೆ.

ಈ ಕುಕ್ವೇರ್ ಶ್ರೇಣಿಯು ಒಂದು ವರ್ಷದ ವಾರಂಟಿ ಹೊಂದಿದೆ.

ಟಿಟಿಕೆ ಪ್ರೆಸ್ಟೀಜ್ ಇಂಡಕ್ಷನ್ ಕುಕ್ಟಾಪ್ ಮತ್ತು ಟಿಟಿಕೆ ಪ್ರೆಸ್ಟೀಜ್ನ ಇತರೆ ನವೀನ ಕೊಡುಗೆಗಳ ಬಗ್ಗೆ ಹೆಚ್ಚಿನ ಮಾಹಿತಿ ಅರಿಯಲು ವೆಬ್ಸೈಟ್ www.ttkprestige.com ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.