ಕಲಬುರಗಿ: ತೊಗರಿ ಕಣಜ ಕಲಬುರಗಿಯಲ್ಲಿ ಬರದಿಂದಾಗಿ ತೊಗರಿ ಬೆಳೆ ನಾಶವಾಗಿದ್ದು ಆವಕ ಗಣನೀಯವಾಗಿ ಕಡಿಮೆಯಾಗಿದೆ. ಹೀಗಾಗಿ ದರವೂ ಏರಿಕೆ ಆಗುತ್ತಿದೆ. ತಿಂಗಳ ಹಿಂದೆ ಕೆ.ಜಿಗೆ ₹ 180ರಂತೆ ಮಾರಾಟವಾಗುತ್ತಿದ್ದ ತೊಗರಿಬೇಳೆ ಸದ್ಯ ಕೆ.ಜಿಗೆ ₹185 ರಿಂದ ₹190ರವರೆಗೆ ಏರಿಕೆಯಾಗಿದೆ.

‘ಗುಣಮಟ್ಟದ ಒಂದು ಕೆ.ಜಿ. ತೊಗರಿ ಬೇಳೆ ₹185ರಿಂದ ₹190ರವರೆಗೆ ಮಾರಾಟ ಆಗುತ್ತಿದೆ. ಸಾಧಾರಣ ಗುಣಮಟ್ಟದ ಕೆ.ಜಿ ತೊಗರಿ ಬೇಳೆ ಬೆಲೆ ಈ ಹಿಂದೆ ಇದು ₹160 ಇತ್ತು, ಸದ್ಯ ₹170ರಂತೆ ಮಾರಾಟ ಆಗುತ್ತಿದೆ’ ಎಂದು ಕಲಬುರಗಿ ಕಿರಾಣಿ ಅಂಗಡಿಯೊಂದರ ಮಾಲೀಕ ಶ್ರವಣ್ ತಿಳಿಸಿದರು.

ಬಿಳಿ ಜೋಳದ ಬೆಲೆ ದುಪ್ಪಟ್ಟು: ಬಿಳಿ ಜೋಳದ ದರವು ದುಪ್ಪಟ್ಟಾಗಿದೆ. ಗುಣಮಟ್ಟದ ಒಂದು ಕೆ.ಜಿ. ದರ ₹35 ಇದ್ದದ್ದು ಈಗ ₹ 75ಕ್ಕೆ ತಲುಪಿದೆ. ಒಂದು ಕ್ವಿಟಂಲ್ ದರ ₹5,000ಯಿಂದ ₹7,000 ಆಗಿದೆ. ಸಾಧಾರಣ ಜೋಳದ ದರ ₹20ರಿಂದ ₹30 ಇತ್ತು. ಈಗ ₹ 60ಕ್ಕೆ ತಲುಪಿದೆ. ಒಂದು ಕ್ವಿಂಟಲ್ ದರ ₹ 3,500ರಿಂದ ₹6,000ಕ್ಕೆ ಏರಿಕೆಯಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.