ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿವಿಎಸ್‌, ಹೀರೊ, ಬಜಾಜ್‌ ದ್ವಿಚಕ್ರ ವಾಹನ ಮಾರಾಟ ಕುಸಿತ; ಏರಿಕೆ ಕಂಡ ಸುಜುಕಿ

Last Updated 2 ಡಿಸೆಂಬರ್ 2019, 10:55 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಇನ್ನೂ ಚೇತರಿಕೆ ಕಂಡಿಲ್ಲ. ನವೆಂಬರ್‌ನ ಒಟ್ಟು ಮಾರಾಟದಲ್ಲಿ ಟಿವಿಎಸ್‌ ಮೋಟಾರ್‌ ಕಂಪವಿ ಶೇ 16.64 ಹಾಗೂ ಹೀರೊ ಮೋಟೊಕಾರ್ಪ್ಶೇ 15.31 ಕುಸಿತ ಕಂಡಿವೆ.

ದ್ವಿಚಕ್ರ ವಾಹನಗಳ ಮಾರಾಟ ವರದಿ ಸೋಮವಾರ ಹೊರಬಂದಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಟಿವಿಎಸ್‌ 1,91,222 ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ನವೆಂಬರ್‌ನಲ್ಲಿ 2,60,253 ದ್ವಿಚಕ್ರ ವಾಹನಗಳು ಮಾರಾಟ ಕಂಡಿದ್ದವು. ಈ ಮೂಲಕ ಶೇ 26.52ರಷ್ಟು ವ್ಯತ್ಯಾಸ ಉಂಟಾಗಿದೆ. ವಾಹನಗಳ ರಫ್ತು ಪ್ರಮಾಣದಲ್ಲಿ ಶೇ 27ರಷ್ಟು ಏರಿಕೆಯಾಗಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ 6,10,252 ವಾಹನಗಳನ್ನು ಮಾರಾಟ ಮಾಡಿದ್ದ ಹೀರೊ ಮೊಟೊಕಾರ್ಪ್, ಕಳೆದ ತಿಂಗಳು5,16,775 ವಾಹನಗಳನ್ನು ಮಾರಾಟ ಮಾಡಿದ್ದು ಶೇ 15.31ರಷ್ಟು ಇಳಿಕೆ ದಾಖಲಾಗಿದೆ. ಆದರೆ, ವಾಹನಗಳ ರಫ್ತು ಪ್ರಮಾಣ ಶೇ 17ರಷ್ಟು ಏರಿಕೆ ಕಂಡಿದೆ.

ಹೀರೊ ಮೊಟೊಕಾರ್ಪ್ಈಗಾಗಲೇ ಬಿಎಸ್‌–4 ಗುಣಮಟ್ಟದ 50 ಮಾದರಿ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದು, ಬಿಎಸ್‌–6 ಇಂಜಿನ್‌ ಹೊಂದಿರುವ ವಾಹನಗಳ ಉತ್ಪಾದನೆಗೆ ಕ್ರಮವಹಿಸಿದೆ. ಕಳೆದ ತಿಂಗಳು ಬಿಎಸ್–6 ಗುಣಮಟ್ಟದ 'ಸ್ಪ್ಲೆಂಡರ್‌ ಐಸ್ಮಾರ್ಟ್‌' ಬೈಕ್‌ಗಳನ್ನು ಅನಾವರಣಗೊಳಿಸಿದೆ.

ದೇಶೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷ ನವೆಂಬರ್‌ನಲ್ಲಿ2,34,818 ವಾಹನಗಳನ್ನು ಮಾರಾಟ ಮಾಡಿದ್ದ ಬಜಾಜ್‌ ಆಟೊ, ಕಳೆದ ತಿಂಗಳು 2,07,775 ವಾಹನಗಳ ಮಾರಾಟ ದಾಖಲಿಸಿದೆ. ಈ ಮೂಲಕ ಶೇ 11.5ರಷ್ಟು ಮಾರಾಟ ಕುಸಿದಿದೆ. ಆದರೆ, ಕಂಪನಿ ಒಟ್ಟು 3,43,446 ವಾಹನಗಳನ್ನು ಮಾರಾಟ ಮಾಡುವ ಮೂಲಕ ಶೇ 0.8 ಇಳಿಕೆ ಕಂಡಿದೆ.

ಮಾರಾಟ ಹೆಚ್ಚಿಸಿಕೊಂಡ ಸುಜುಕಿ!

ಸುಜುಕಿ ಮೋಟಾರ್‌ಸೈಕಲ್‌ ಇಂಡಿಯಾ ಪ್ರೈ ಲಿ., ಒಟ್ಟು 69,755 ವಾಹನಗಳ ಮಾರಾಟ ಮಾಡುವ ಮೂಲಕ ಶೇ 23.39ರಷ್ಟು ಹೆಚ್ಚಳ ಕಂಡಿದೆ. ಕಳೆದ ವರ್ಷ 56,531 ವಾಹನಗಳ ಮಾರಾಟ ಮಾಡಿತ್ತು.ಸುಜುಕಿಯ ಬಳಸಿದ ವಾಹನಗಳಿಗೆ ಬೇಡಿಕೆ ಇರುವುದನ್ನು ಗಮನಿಸಿ ಕಂಪನಿಯು ಬೆಂಗಳೂರಿನಲ್ಲಿ 'ಬೆಸ್ಟ್‌ ವ್ಯಾಲ್ಯೂ' ಷೋರೂಂಗಳನ್ನು ಪ್ರಾರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT