ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹2,258 ಕೋಟಿ ಲಾಭ: ಅಲ್ಟ್ರಾಟೆಕ್‌ ಸಿಮೆಂಟ್‌‌

Published 29 ಏಪ್ರಿಲ್ 2024, 15:48 IST
Last Updated 29 ಏಪ್ರಿಲ್ 2024, 15:48 IST
ಅಕ್ಷರ ಗಾತ್ರ

ನವದೆಹಲಿ: ಅಲ್ಟ್ರಾಟೆಕ್‌ ಕಂಪನಿಯು 2023–24ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ₹2,258.58 ಕೋಟಿ ನಿವ್ವಳ ಲಾಭಗಳಿಸಿದೆ. ‘2022–23ನೇ ಆರ್ಥಿಕ ವರ್ಷದಲ್ಲಿ ಗಳಿಸಿದ ಲಾಭಕ್ಕೆ ಹೋಲಿಸಿದರೆ, ಶೇ 35.24ರಷ್ಟು (₹1,670.10 ಕೋಟಿ) ಏರಿಕೆಯಾಗಿದೆ’ ಎಂದು ಕಂಪನಿ ಸೋಮವಾರ ಮಾಹಿತಿ ನೀಡಿದೆ.

‘ನಮ್ಮ ಮಾರಾಟದ ಪ್ರಮಾಣವು ಏರಿಕೆಯಾಗಿದ್ದು, ನಾಲ್ಕನೇ ತ್ರೈಮಾಸಿಕದಲ್ಲಿ 3.50 ಕೋಟಿ ಟನ್‌ನಷ್ಟು ಸಿಮೆಂಟ್‌ ಮಾರಾಟವಾಗಿದೆ. 3.22 ಕೋಟಿ ಟನ್‌ನಷ್ಟು ಗ್ರೇ ಸಿಮೆಂಟ್‌ ಮಾರಾಟವಾಗಿದೆ. ದೇಶೀಯ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ 11ರಷ್ಟು ಏರಿಕೆಯಾಗಿದೆ’ ಎಂದು ಕಂಪನಿ ಹೇಳಿಕೊಂಡಿದೆ.

‘ಇದೇ ಜನವರಿ–ಮಾರ್ಚ್‌ ತ್ರೈಮಾಸಿಕದಲ್ಲಿ ಕಂಪನಿಯು ₹20,418.94 ಕೋಟಿ ಆದಾಯ ಗಳಿಸಿದೆ. 2022–23ರ ಆರ್ಥಿಕ ವರ್ಷದ ಇದೇ ತ್ರೈಮಾಸಿಕದ ಆದಾಯವು ₹18,662.38 ಕೋಟಿ ಇತ್ತು. ಅಂದರೆ, ಕಂಪನಿಯ ಆದಾಯವು ಶೇ 9.41ರಷ್ಟು ಏರಿಕೆಯಾಗಿದೆ. 2023–24ನೇ ಆರ್ಥಿಕ ವರ್ಷದಲ್ಲಿ ಕಂಪನಿಯ ಆದಾಯವು ₹71,525.09 ಕೋಟಿಯಷ್ಟಾಗಿದೆ’ ಎಂದು ಕಂಪನಿಯು ಹೇಳಿದೆ.

ಬಿಎಸ್‌ಇಯಲ್ಲಿ ಕಂಪನಿಯ ಷೇರಿನ ಮೌಲ್ಯ ಸೋಮವಾರ ಶೇ 2.93ರಷ್ಟು ಏರಿಕೆಯಾಗಿ, ಪ್ರತಿ ಷೇರಿನ ಬೆಲೆ ₹9,984ಕ್ಕೆ ಮುಟ್ಟಿದೆ.

₹5,073.40 ಕೋಟಿ; 2022-23ನೇ ಸಾಲಿನ ನಿವ್ವಳ ಲಾಭ‌

₹7,003.96 ಕೋಟಿ; 2023-24ನೇ ಸಾಲಿನ ನಿವ್ವಳ ಲಾಭ‌

38.05%; ನಿವ್ವಳ ಲಾಭದ ಏರಿಕೆ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT