ಬುಧವಾರ, ಮೇ 27, 2020
27 °C

ಬ್ಯಾಂಕ್ ವಿಲೀನ: ಸೇವೆಗೆ ಹೆಚ್ಚುವರಿ ಶುಲ್ಕ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಾದ ಕಾರ್ಪೋರೇಷನ್ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕ್‌ಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜೊತೆಗೆ ವಿಲೀನಗೊಂಡಿವೆ.

ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಗ್ರಾಹಕರು ಈ ಮೂರೂ ಬ್ಯಾಂಕಿನ ಎಟಿಎಂ ಬಳಸಿ ಹಣ ವಿತ್‌ ಡ್ರಾ ಮಾಡಿಕೊಳ್ಳಬಹುದು. ಈ ಮೂರೂ ಬ್ಯಾಂಕ್‌ಗಳು  13,500 ಕ್ಕೂ ಹೆಚ್ಚು ಎಟಿಎಂ ಹಾಗೂ 9,500 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿವೆ.

ಗ್ರಾಹಕರ ಮೂಲ ಬ್ಯಾಂಕಿನ  ಖಾತೆ ಸಂಖ್ಯೆ, ಐಎಫ್ಎಸ್‌ಸಿ ಕೋಡ್‌ಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಗ್ರಾಹಕರು ತಮ್ಮ ಹಳೆಯ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನೇ ಬಳಸಿ ಹಣ ವಿತ್‌ ಡ್ರಾ ಮಾಡಿಕೊಳ್ಳಬಹುದು. ಇಂಟರ್‌ನೆಟ್‌ ಹಾಗೂ ಮೊಬೈಲ್ ಬ್ಯಾಂಕಿಂಗ್‌ನಲ್ಲಿಯೂ ಯಾವುದೇ ಬದಲಾವಣೆ ಇರುವುದಿಲ್ಲ.

‘ಈ ವಿಲೀನದಿಂದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದೇಶದ 5ನೇ ಅತಿದೊಡ್ಡ  ಬ್ಯಾಂಕ್‌ ಆಗಲಿದೆ‘ ಎಂದು  ಬ್ಯಾಂಕ್‌ನ ಸಿಇಒ ರಾಜ್‌ಕಿರಣ್ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು