ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್‌ಲಾಕ್‌: ರಿಟೇಲ್‌ ಉದ್ಯಮ ಚೇತರಿಕೆ

Last Updated 19 ನವೆಂಬರ್ 2020, 20:55 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌–19 ಸಾಂಕ್ರಾಮಿಕದ ಸಂದರ್ಭದಲ್ಲಿ ರಿಟೇಲ್‌ ಉದ್ಯಮವು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಲಾಕ್‌ಡೌನ್‌ ಸಡಿಲಿಸಲು ಆರಂಭಿಸುತ್ತಿದ್ದಂತೆಯೇ ಮಾರಾಟದಲ್ಲಿ ಚೇತರಿಕೆ ಕಾಣುತ್ತಿದೆ. ಗ್ರಾಹಕರ ಖರೀದಿ ಮನೋಧರ್ಮದಲ್ಲಿಯೂ ಬದಲಾವಣೆ ಕಂಡುಬಂದಿದೆ ಎಂದು ರಿಟೇಲ್‌ ವಲಯದ ಪ್ರಮುಖ ಕಂಪನಿಗಳು ತಿಳಿಸಿವೆ.

‘ಲಾಕ್‌ಡೌನ್‌ ಘೋಷಣೆಯಾದ ಎರಡು ತಿಂಗಳು ರೆಸ್ಟೋರೆಂಟ್‌ ವಹಿವಾಟಿಗೆ ಬಹಳಷ್ಟು ಕಷ್ಟವಾಯಿತು. ವಹಿವಾಟು ನಡೆಸಲು ಸ್ವಿಗ್ಗಿಯನ್ನೇ ಅಲವಂಬಿಸಬೇಕಾಯಿತು. ಲಾಕ್‌ಡೌನ್‌, ವಹಿವಾಟಿಗಾಗಿ ಹೊಸ ಮಾರ್ಗಗಳನ್ನು ಕಂಡುಕೊಳ್ಳುವಂತೆ ಮಾಡಿದೆ. ಆನ್‌ಲೈನ್‌ ಮಾರಾಟದ ಮಹತ್ವವನ್ನು ತಿಳಿಸಿಕೊಟ್ಟಿದೆ. ಆಗಸ್ಟ್‌ನಿಂದ ಮಾರಾಟವು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.
ಕುಟುಂಬಗಳು ರೆಸ್ಟೋರೆಂಟ್‌ಗೆ ಬರಲಾರಂಭಿಸಿವೆ’ ಎಂದು ಎಂಟಿಆರ್‌ ರೆಸ್ಟೋರೆಂಟ್ಸ್‌ನ ಮ್ಯಾನೇಜಿಂಗ್ ಪಾರ್ಟ್ನರ್ ಹೇಮಮಾಲಿನಿ ಮಯ್ಯ ಮಾಹಿತಿ ನೀಡಿದರು.

‘ಕಳೆದ ವರ್ಷವೂ ರಿಟೇಲ್‌ ವಹಿವಾಟು ಅಷ್ಟೇನೂ ಉತ್ತಮವಾಗಿರಲಿಲ್ಲ.ಕೋವಿಡ್‌–19ನಿಂದ ಮತ್ತಷ್ಟು ಸಮಸ್ಯೆ ಎದುರಿಸಬೇಕಾಯಿತು. ಹಿಂದಿನ ವರ್ಷದಇದೇ ಅವಧಿಗೆ ಹೋಲಿಸಿದರೆ ಲಾಕ್‌ಡೌನ್‌ ಸಡಿಲಿಕೆ ಆದ ಬಳಿಕ ಶೇ 60–65ರಷ್ಟು ಮಾರಾಟ ನಡೆಯುತ್ತಿದೆ’ ಎಂದು ಪ್ರೆಸ್ಟೀಜ್‌ ರಿಟೇಲ್‌ನ ಸಿಇಒ ಸುರೇಶ್‌ ಸಿಂಗರ್ ತಿಳಿಸಿದರು.

‘ಜನರ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಲಾಕ್‌ಡೌನ್‌ಗೂ ಮೊದಲೇ ನಮ್ಮೆಲ್ಲಾ ಮಳಿಗೆಗಳನ್ನು ಮುಚ್ಚಲಾಯಿತು. ಈ ವೇಳೆಯಲ್ಲಿ ಜನರು ಡಿಜಿಟಲ್‌ ಮಾರ್ಗದ ಮೊರೆ ಹೋಗಿದ್ದು ಮೆಚ್ಚುವಂಥದ್ದು. ನಿರ್ಬಂಧಗಳನ್ನು ಸಡಿಲಿಸುವ ಪ್ರಕ್ರಿಯೆ ಆರಂಭವಾದ ಮೇಲೆ ಆನ್‌ಲೈನ್‌ ಮೂಲಕ ಬೇಡಿಕೆ ಹೆಚ್ಚಾಗತೊಡಗಿತು’ ಎಂದು ಪೀಠೋಪಕರಣಗಳ ರಿಟೇಲ್‌ ಮಾರಾಟ ಕಂಪನಿ ಐಕೆಇಎನ ವ್ಯವಸ್ಥಾಪಕ ನಿರ್ದೇಶಕ ಪೀಟರ್ ಜರ್ಗನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT