ಬೆಂಗಳೂರು / ನವದೆಹಲಿ: ಅಮೆರಿಕದ ವಿದ್ಯುತ್ಚಾಲಿತ ವಾಹನಗಳ ತಯಾರಿಕಾ ಕಂಪನಿ ಟೆಸ್ಲಾ, ಮುಂದಿನ ವಾರ ಮುಂಬೈನಲ್ಲಿ ತನ್ನ ಮೊದಲ ಮಳಿಗೆಯನ್ನು ಆರಂಭಿಸಲಿದೆ.

ಜುಲೈ 15ರಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿ ಮಳಿಗೆಯನ್ನು ಉದ್ಘಾಟಿಸಲಾಗುವುದು. ಇದು ಭಾರತದಲ್ಲಿ ಆರಂಭಿಸುತ್ತಿರುವ ಮೊದಲ ಮಳಿಗೆ ಎಂದು ಟೆಸ್ಲಾ ಕಂಪನಿ ತಿಳಿಸಿದೆ.

₹8.58 ಕೋಟಿ (1 ಮಿಲಿಯನ್ ಡಾಲರ್) ಮೌಲ್ಯದ ಕಾರು ಮತ್ತು ಸರಕುಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಈ ಮೂಲಕ ಜಗತ್ತಿನ ಮೂರನೇ ಅತಿದೊಡ್ಡ ಕಾರಿನ ಮಾರುಕಟ್ಟೆಯನ್ನು ಪ್ರವೇಶಿಸಲಾಗುವುದು ಎಂದು ತಿಳಿಸಿದೆ.

ಕಾರುಗಳ ಆಮದಿನಿಂದ ಭಾರತದಲ್ಲಿ ಟೆಸ್ಲಾ, ಅಂದಾಜು ಕಾರಿನ ಶೇ 70ರಷ್ಟು ಆಮದು ಮತ್ತು ಇತರೆ ಸುಂಕ ಪಾವತಿಸಬೇಕಾಗುತ್ತದೆ.

ಕಳೆದ ತಿಂಗಳು ಟೆಸ್ಲಾ ಮುಂಬೈನ ಲೋಧಾ ಲಾಜಿಸ್ಟಿಕ್ಸ್ ಪಾರ್ಕ್ನಲ್ಲಿ 24,565 ಚದರ ಅಡಿ ಸ್ಥಳವನ್ನು ಐದು ವರ್ಷದ ಅವಧಿಗೆ ಗುತ್ತಿಗೆ ಪಡೆದುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.