ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಿಂದ ಆಮದಾಗುತ್ತಿದ್ದ ಸೇಬು ಮೇಲಿನ ಆಮದು ಸುಂಕ ರದ್ದು

Published 21 ಫೆಬ್ರುವರಿ 2024, 16:25 IST
Last Updated 21 ಫೆಬ್ರುವರಿ 2024, 16:25 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದಿಂದ ಆಮದಾಗುತ್ತಿದ್ದ ಸೇಬು ಸೇರಿದಂತೆ ಹಲವು ಸರಕುಗಳ ಮೇಲೆ 2019ರಲ್ಲಿ ವಿಧಿಸಿದ್ದ ಶೇ 20ರಷ್ಟು ಹೆಚ್ಚುವರಿ ಕಸ್ಟಮ್ಸ್‌ ಸುಂಕವನ್ನು ಭಾರತ ಹಿಂಪಡೆದಿದೆ. 

ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಸಂತಸಗೊಂಡ ಅಮೆರಿಕದ ಸಂಸದರು ಹಾಗೂ ಸೇಬು ಬೆಳೆಗಾರರು  ಸಿಯಾಟಲ್ ಬಂದರಿನಲ್ಲಿ ಮಂಗಳವಾರ ಸಂಭ್ರಮಾಚರಣೆ ನಡೆಸಿದ್ದಾರೆ.   

ಭಾರತವು ಆಮದು ಸುಂಕವನ್ನು ಹಿಂಪಡೆದಿದೆ. ಹಾಗಾಗಿ, ವಾಷಿಂಗ್ಟನ್‌ ರಾಜ್ಯದಿಂದ ಈ ಋತುವಿನಲ್ಲಿ ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಭಾರತಕ್ಕೆ ಸೇಬು ರವಾನೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. 

ಸುಂಕ ಹೆಚ್ಚಳವು ವಾಷಿಂಗ್ಟನ್‌ ಸೇಬು ಮಾರುಕಟ್ಟೆಗೆ ದೊಡ್ಡ ಪೆಟ್ಟು ನೀಡಿತ್ತು. ಸುಂಕ ಜಾರಿಗೂ ಮೊದಲು ಇಲ್ಲಿನ ಮಾರುಕಟ್ಟೆಯಿಂದ ವಾರ್ಷಿಕ ₹995 ಕೋಟಿ ಮೌಲ್ಯದ ಸೇಬುಗಳನ್ನು ರಫ್ತು ಮಾಡಲಾಗುತ್ತಿತ್ತು. ಆದೇಶ ಜಾರಿಯಾದ ಬಳಿಕ ರಫ್ತು ವಹಿವಾಟು ₹8 ಕೋಟಿಗೆ ಇಳಿಕೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT