ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್‌ ರಿಟೇಲ್‌ನಲ್ಲಿ ₹ 7,500 ಕೋಟಿ ಹೂಡಿಕೆ ಮಾಡಲಿದೆ ಸಿಲ್ವರ್ ಲೇಕ್

Last Updated 9 ಸೆಪ್ಟೆಂಬರ್ 2020, 6:19 IST
ಅಕ್ಷರ ಗಾತ್ರ

ನವದೆಹಲಿ: ರಿಲಯನ್ಸ್ ರಿಟೇಲ್‌ನ ಶೇ 1.75ರಷ್ಟು ಬಂಡವಾಳವನ್ನು ಅಮೆರಿಕದ ಈಕ್ವಿಟಿ ಸಂಸ್ಥೆ ಸಿಲ್ವರ್ ಲೇಕ್ ಪಾರ್ಟ್‌ನರ್ಸ್‌ ₹ 7,500 ಕೋಟಿ ಮೊತ್ತಕ್ಕೆ ಖರೀದಿಸಲಿದೆ ಎಂದು ರಿಯಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ ಬುಧವಾರ ತಿಳಿಸಿದೆ.

ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಒಡೆತನದಲ್ಲಿರುವ ರಿಲಯನ್ಸ್, ಮುಂದಿನ ಕೆಲವು ತ್ರೈಮಾಸಿಕಗಳಲ್ಲಿ ಹೂಡಿಕೆದಾರರನ್ನು ಆಕರ್ಷಿಸುವ ಸಲುವಾಗಿ ತನ್ನ ರಿಟೇಲ್ ವ್ಯವಹಾರವನ್ನು ವೇಗವಾಗಿ ಅಭಿವೃದ್ಧಿಗೊಳಿಸುತ್ತಿದೆ.

ರಿಲಯನ್ಸ್ ಅಂಗಸಂಸ್ಥೆಯಲ್ಲಿ ಸಿಲ್ವರ್ ಲೇಕ್‌ನ ಎರಡನೇ ಅತಿದೊಡ್ಡ ಹೂಡಿಕೆ ಇದಾಗಿದೆ. ಈ ವರ್ಷ ಆರಂಭದಲ್ಲಿ ಜಿಯೊದಲ್ಲಿ ₹10,200 ಕೋಟಿ ಹೂಡಿಕೆ ಮಾಡುವುದಾಗಿ ಸಿಲ್ವರ್ ಲೇಕ್‌ ಘೋಷಿಸಿತ್ತು.

ರಿಟೇಲ್ ವ್ಯವಹಾರ ವೃದ್ಧಿಯ ಭಾಗವಾಗಿ ಇತ್ತೀಚೆಗಷ್ಟೇ ಫ್ಯೂಚರ್ ಗ್ರೂಪ್​ನ ಹಲವು ವ್ಯವಹಾರಗಳನ್ನು ರಿಲಯನ್ಸ್ ಖರೀದಿ ಮಾಡಿತ್ತು. ಆನ್‌ಲೈನ್‌ ಮೂಲಕ ಔಷಧ ಮಾರಾಟ ಮಾಡುವ ನೆಟ್‌ ಮೆಡ್ಸ್‌ ಕಂಪನಿಯಲ್ಲಿನ ಅತಿಹೆಚ್ಚಿನ ಷೇರುಪಾಲನ್ನೂ ತನ್ನದಾಗಿಸಿಕೊಂಡಿತ್ತು.

ಸಿಲ್ವರ್ ಲೇಕ್ ಜತೆಗಿನ ವ್ಯವಹಾರದ ಬಗ್ಗೆ ಕಂಪನಿಯು ಪ್ರಕಟಣೆ ಹೊರಡಿಸಿದ ಬೆನ್ನಲ್ಲೇ ಮುಂಬೈ ಷೇರುಮಾರುಕಟ್ಟೆಯಲ್ಲಿ ರಿಲಯನ್ಸ್‌ ಷೇರು ಮೌಲ್ಯದಲ್ಲಿ ಶೇ 1.5ರಷ್ಟು ಏರಿಕೆ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT