ನವದೆಹಲಿ: ಭಾರತದ ಸರಕುಗಳ ಮೇಲೆ ಅಮೆರಿಕವು ವಿಧಿಸಿರುವ ಸುಂಕವು ಭಾರತದ ಆರ್ಥಿಕ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುವುದಿಲ್ಲ ಎಂದು ಜಾಗತಿಕ ರೇಟಿಂಗ್ಸ್ ಸಂಸ್ಥೆ ಎಸ್ ಆ್ಯಂಡ್ ಪಿ ಹೇಳಿದೆ.

‘ಭಾರತವು ಬಾಹ್ಯ ವ್ಯಾಪಾರವನ್ನು ಆಧರಿಸಿರುವ ಅರ್ಥ ವ್ಯವಸ್ಥೆಯನ್ನು ಹೊಂದಿಲ್ಲ. ಭಾರತದ ರೇಟಿಂಗ್ ಮುನ್ನೋಟ ಕೂಡ ಸಕಾರಾತ್ಮಕವಾಗಿಯೇ ಇರಲಿದೆ’ ಎಂದು ಎಸ್ ಆ್ಯಂಡ್ ಪಿ ಸಂಸ್ಥೆಯ ಜಾಗತಿಕ ರೇಟಿಂಗ್ಸ್ ವಿಭಾಗದ ನಿರ್ದೇಶಕ ಯೀಫಾರ್ನ್ ಪೂಆ ಹೇಳಿದ್ದಾರೆ.

ಕಳೆದ ವರ್ಷದ ಮೇ ತಿಂಗಳಲ್ಲಿ ಎಸ್ ಆ್ಯಂಡ್ ಪಿ ಸಂಸ್ಥೆಯು ಭಾರತದ ರೇಟಿಂಗ್ ಮುನ್ನೋಟ ‘ಬಿಬಿಬಿ–’ ಇದ್ದಿದ್ದನ್ನು ‘ಧನಾತ್ಮಕ’ ಎಂದು ಪರಿಷ್ಕರಿಸಿದೆ. ದೇಶದ ಆರ್ಥಿಕ ಬೆಳವಣಿಗೆಯು ಚೆನ್ನಾಗಿ ಇರುವುದನ್ನು ಗಮನಿಸಿ ಅದು ಈ ರೇಟಿಂಗ್ ಪರಿಷ್ಕರಣೆ ಮಾಡಿದೆ.

ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶೇ 25ರಷ್ಟು ಸುಂಕ ವಿಧಿಸಿರುವುದಲ್ಲದೆ, ಹೆಚ್ಚುವರಿಯಾಗಿ ಶೇ 25ರಷ್ಟು ಸುಂಕ ಹೇರಿದ್ದಾರೆ. ಹೆಚ್ಚುವರಿ ಸುಂಕವು ಆಗಸ್ಟ್ 27ರಿಂದ ಅನ್ವಯ ಆಗಲಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರವು ಶೇ 6.5ರಷ್ಟು ಇರಲಿದೆ ಎಂದು ಎಸ್ ಆ್ಯಂಡ್ ಪಿ ಅಂದಾಜು ಮಾಡಿದೆ. ಔಷಧ ಹಾಗೂ ಗ್ರಾಹಕ ಬಳಕೆಯ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಅಮೆರಿಕವು ಹೆಚ್ಚಿನ ಸುಂಕದ ವ್ಯಾಪ್ತಿಯಿಂದ ಹೊರಗೆ ಇರಿಸಿದೆ ಎಂದು ಯೀಫಾರ್ನ್ ಹೇಳಿದ್ದಾರೆ.

‘ಹೆಚ್ಚಿನ ಸುಂಕವು ದೀರ್ಘಾವಧಿಯಲ್ಲಿ ಭಾರತದ ಅರ್ಥ ವ್ಯವಸ್ಥೆಗೆ ಏಟು ನೀಡುತ್ತದೆ ಎಂದು ನಾವು ಭಾವಿಸಿಲ್ಲ. ಹೀಗಾಗಿ, ಭಾರತದ ಕುರಿತ ಧನಾತ್ಮಕ ಮುನ್ನೋಟವು ಮುಂದುವರಿಯಲಿದೆ’ ಎಂದು ಅವರು ಏಷ್ಯಾ–ಪೆಸಿಫಿಕ್ ದೇಶಗಳ ರೇಟಿಂಗ್ ಕುರಿತ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಹೆಚ್ಚಿನ ಪ್ರಮಾಣದ ಸುಂಕವು ಭಾರತಕ್ಕೆ ವಿದೇಶಿ ಬಂಡವಾಳದ ಹರಿವಿನ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಲಿದೆಯೇ ಎಂಬ ಪ್ರಶ್ನೆಗೆ ಅವರು, ‘ಚೀನಾ ಜೊತೆ ಇನ್ನೂ ಒಂದು ದೇಶದಲ್ಲಿ ತಯಾರಿಕಾ ಘಟಕ ಆರಂಭಿಸುವ ಕಾರ್ಯತಂತ್ರವು ಕೆಲವು ವರ್ಷಗಳಿಂದ ಚಾಲ್ತಿಯಲ್ಲಿ ಇದೆ. ಕಂಪನಿಗಳು ಭಾರತದ ಆಂತರಿಕ ಬೇಡಿಕೆಗಳನ್ನು ಪೂರೈಸಲು ಭಾರತದಲ್ಲೇ ಘಟಕಗಳನ್ನು ತೆರೆಯುತ್ತಿವೆ’ ಎಂದು ವಿವರಣೆ ನೀಡಿದ್ದಾರೆ.

‘ಹಲವು ಉದ್ದಿಮೆಗಳು ಭಾರತದಲ್ಲಿ ಘಟಕ ಆರಂಭಿಸುತ್ತಿರುವುದು ಅಮೆರಿಕಕ್ಕೆ ಉತ್ಪನ್ನ ರಫ್ತು ಮಾಡುವ ಒಂದೇ ಉದ್ದೇಶದಿಂದ ಅಲ್ಲ. ಭಾರತದಲ್ಲಿನ ದೊಡ್ಡ ಮಾರುಕಟ್ಟೆಯನ್ನೂ ಗಮನಿಸಿ ಅವು ಘಟಕ ಆರಂಭಿಸುತ್ತಿವೆ. ಭಾರತದಲ್ಲಿನ ಮಧ್ಯಮ ವರ್ಗವು ಬೆಳೆಯುತ್ತಿದೆ. ಹೀಗಾಗಿ, ಭಾರತದಲ್ಲಿ ಹೂಡಿಕೆ ಮಾಡಲು, ರಫ್ತು ಮಾಡಲು ಅವಕಾಶ ಅರಸುತ್ತಿರುವವರಿಗೆ ಅಮೆರಿಕವೊಂದೇ ಗಮ್ಯವಾಗಿರಬೇಕು ಎಂದೇನೂ ಇಲ್ಲ’ ಎಂದು ಉತ್ತರ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.