ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಜ್ರಗಳ ಪರೀಕ್ಷೆಗೆ ವಿಬಿಜೆ ಸೌಲಭ್ಯ

Last Updated 12 ಸೆಪ್ಟೆಂಬರ್ 2018, 17:39 IST
ಅಕ್ಷರ ಗಾತ್ರ

ಬೆಂಗಳೂರು: ಆಭರಣ ತಯಾರಿಕಾ ಸಂಸ್ಥೆ ವುಮ್ಮಿಡಿ ಬಂಗಾರು ಜುವೆಲ್ಲರ್ಸ್, ವಜ್ರಗಳ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಸಿಂಥ್ ಡಿಟೆಕ್ಟ್ ಹೆಸರಿನ ಸಾಧನವನ್ನು ಜಯನಗರದಲ್ಲಿರುವ ಮಳಿಗೆಯಲ್ಲಿ ಅಳವಡಿಸಿದೆ.

ಈ ಯಂತ್ರದ ನೆರವಿನಿಂದ, ನೈಸರ್ಗಿಕ ಮತ್ತು ಪ್ರಯೋಗಾಲಯಗಳಲ್ಲಿ ತಯಾರಾದ ವಜ್ರಗಳ ಮೂಲ ಯಾವುದು ಎಂಬುದನ್ನು ತಿಳಿಯಬಹುದು. ಈ ಸೌಲಭ್ಯವನ್ನು ಸಂಸ್ಥೆಯು ಉಚಿತವಾಗಿ ಕಲ್ಪಿಸುತ್ತಿದೆ. ಗ್ರಾಹಕರು ಇಲ್ಲಿಗೆ ಬಂದು ತಮ್ಮಲ್ಲಿರುವ ವಜ್ರಗಳು ಮತ್ತು ವಜ್ರಾಭರಣಗಳನ್ನು ಪರೀಕ್ಷಿಸಿಕೊಳ್ಳಬಹುದು.

‘ದೇಶದಲ್ಲಿ ವಜ್ರಗಳಿಗೆ ಮತ್ತು ವಜ್ರಾಭರಣಗಳಿಗೆ ಹೆಚ್ಚು ಬೇಡಿಕೆ ಇದೆ. ಆದರೆ, ಹಲವು ಮಾರಾಟಗಾರರು ಪ್ರಯೋಗಾಲಯಗಳಲ್ಲಿ ತಯಾರಾದ ಕೃತಕ ವಜ್ರಗಳನ್ನೇ ನೈಸರ್ಗಿಕವಾದ ವಜ್ರಗಳೆಂದು ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ. ಬಹುತೇಕರಿಗೆ ವಜ್ರಗಳ ಗುಣಮಟ್ಟ ಗೊತ್ತಾಗುವುದಿಲ್ಲ. ಹೀಗಾಗಿ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ನಮ್ಮ ಸಂಸ್ಥೆ ಈ ಕ್ರಮ ಕೈಗೊಂಡಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿತೇಂದ್ರ ವುಮ್ಮಿಡಿ ಹೇಳಿದರು.

‘ಈ ಸಾಧನದ ಮೂಲಕ ಕೇವಲ ವಜ್ರಗಳನ್ನಷ್ಟೇ ಅಲ್ಲದೇ, ಆಭರಣಗಳಲ್ಲಿರುವ ವಜ್ರಗಳನ್ನೂ ಪರೀಕ್ಷಿಸಬಹುದು. ನೈಸರ್ಗಿಕ ವಜ್ರಗಳ ಬೆಲೆಗೆ ಕೃತಕ ವಜ್ರಗಳನ್ನು ಖರೀದಿಸಿ ಗ್ರಾಹಕರು ಮೋಸಹೋಗಬಾರದು ಎಂಬುದಷ್ಟೇ ನಮ್ಮ ಆಶಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT