ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Vi ಹೀರೊ ಅನ್‌ಲಿಮಿಟೆಡ್: ಡೇಟಾ ಡಿಲೈಟ್ ಪ್ಯಾಕ್ ಪರಿಚಯಿಸಿದ ವೊಡಾಪೋನ್ ಐಡಿಯಾ

ಅಕ್ಷರ ಗಾತ್ರ

ಬೆಂಗಳೂರು: ವೊಡಾಫೋನ್–ಐಡಿಯಾ ‘ವಿ‘ ಗ್ರಾಹಕರಿಗಾಗಿ ಡೇಟಾ ಡಿಲೈಟ್ ಕೊಡುಗೆಗಳನ್ನು ಸಂಸ್ಥೆ ಪರಿಚಯಿಸಿದೆ.

ಪ್ರತಿ ತಿಂಗಳು ವಿ ಗ್ರಾಹಕರು, ದಿನದ ಡೇಟಾ ಮಿತಿ ಹೊರತಾಗಿಯೂ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆಯೇ, 2 ಜಿಬಿ ಡೇಟಾ ಪಡೆಯಬಹುದಾಗಿದೆ.

ಜತೆಗೆ, 121249 ಗೆ ಕರೆ ಮಾಡುವ ಮೂಲಕ ಇಲ್ಲವೇ ವಿ ಆ್ಯಪ್ ಮೂಲಕ ಗ್ರಾಹಕರು ಡೇಟಾ ಡಿಲೈಟ್ ಕೊಡುಗೆಗಳ ಪ್ರಯೋಜನ ಪಡೆಯಬಹುದು ಎಂದು ಕಂಪನಿ ಹೇಳಿದೆ.

ವಿ ಹೀರೋ ಅನ್‌ಲಿಮಿಟೆಡ್ ಕೊಡುಗೆಗಳನ್ನು ಕಂಪನಿ ನೀಡುತ್ತಿದ್ದು, ಅದರ ಮೂಲಕ ರಾತ್ರಿ 12 ಗಂಟೆಯಿಂದ ಬೆಳಗಿನ 6 ಗಂಟೆಯವರೆಗೆ ಹೈ ಸ್ಪೀಡ್ ಅನ್‌ಲಿಮಿಟೆಡ್ ಡೇಟಾವನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆಯೇ ಗ್ರಾಹಕರು ಪಡೆಯಬಹುದು.

ದಿನದ ಡೇಟಾ ಮಿತಿಯಲ್ಲಿ ಉಳಿಕೆಯಾದ ಹೆಚ್ಚುವರಿ ಡೇಟಾವನ್ನು ವೀಕೆಂಡ್ ಡೇಟಾ ರೋಲ್‌ಓವರ್ ಮೂಲಕ ವಾರದ ಕೊನೆಯಲ್ಲಿ ಹೆಚ್ಚುವರಿ ಶುಲ್ಕವಿಲ್ಲದೆ ಪಡೆಯಬಹುದು.

ವಿ ಹೀರೋ ಅನ್‌ಲಿಮಿಟೆಡ್ ಪ್ಯಾಕ್ ಕೊಡುಗೆಗಳ ಪ್ಲ್ಯಾನ್ ದರ ₹299ರಿಂದ ಆರಂಭವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT