ಶನಿವಾರ, ಮೇ 15, 2021
29 °C

ಫೋಬ್ಸ್‌ ಪಟ್ಟಿಯಲ್ಲಿ ಬೆಂಗಳೂರಿನ ವಿಭಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಫೋಬ್ಸ್‌ ಪತ್ರಿಕೆ ಬಿಡುಗಡೆ ಮಾಡಿರುವ, 30 ವರ್ಷ ವಯಸ್ಸಿನೊಳಗಿನ ಏಷ್ಯಾದ ಸಾಧಕರ ಪಟ್ಟಿಯಲ್ಲಿ ಬೆಂಗಳೂರಿನ ಯುವ ಉದ್ಯಮಿ ವಿಭಾ ಹರೀಶ್ ಅವರು ಸ್ಥಾನ ಪಡೆದಿದ್ದಾರೆ.

ವಿಭಾ ಅವರು ಬೆಂಗಳೂರಿನಲ್ಲಿ ‘ಕಾಸ್ಮಿಕ್ಸ್‌’ ಹೆಸರಿನ ನವೋದ್ಯಮವೊಂದನ್ನು ನಡೆಸುತ್ತಿದ್ದಾರೆ. ಇದು ಹಣ್ಣು, ಗಿಡಮೂಲಿಕೆಗಳು ಹಾಗೂ ಬೇರುಗಳನ್ನು ಬಳಸಿ ಪೌಷ್ಟಿಕಾಂಶ ಇರುವ ಪುಡಿಗಳನ್ನು ಸಿದ್ಧಪಡಿಸುತ್ತಿದೆ. ‘ಇವುಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಜಾಸ್ತಿ ಆಗುತ್ತದೆ’ ಎಂದು ಕಂಪನಿ ಹೇಳಿಕೊಂಡಿದೆ.

ಏಷ್ಯಾದ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದಿರುವವರು ದೀರ್ಘಾವಧಿಯ ಲಾಕ್‌ಡೌನ್‌ಅನ್ನು ತಾಳಿಕೊಂಡಿದ್ದಾರೆ, ಎಲ್ಲ ಕ್ಷೇತ್ರಗಳಲ್ಲೂ ಸೃಷ್ಟಿಯಾಗಿರುವ ಅನಿಶ್ಚಿತ ವಾತಾವರಣವನ್ನು ಎದುರಿಸಿ ನಿಂತಿದ್ದಾರೆ ಎಂದು ಫೋಬ್ಸ್‌ ಪ್ರಶಂಸಿಸಿದೆ. ಕೋವಿಡ್–19 ಸಾಂಕ್ರಾಮಿಕ ತಂದ ಬದಲಾವಣೆಗಳ ನಡುವೆಯೇ ಇವರು ತಮ್ಮ ಉದ್ಯಮಗಳನ್ನು ಬೆಳೆಸಿದ್ದಾರೆ ಎಂದೂ ಪತ್ರಿಕೆಯು ಮೆಚ್ಚುಗೆ ಮಾತು ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು