ಬುಧವಾರ, ಜನವರಿ 29, 2020
30 °C

ಇನ್ಫೊಸಿಸ್ ಮಾಜಿ ಸಿಇಒ ವಿಶಾಲ್ ಸಿಕ್ಕಾ ಒರಾಕಲ್‌ ಆಡಳಿತ ಮಂಡಳಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಇನ್ಫೊಸಿಸ್‌ ಮಾಜಿ ಸಿಇಒ ವಿಶಾಲ್‌ ಸಿಕ್ಕಾ ಇದೀಗ ಸಾಫ್ಟವೇರ್‌ ಜಗತ್ತಿನ ಬೃಹತ್‌ ಸಂಸ್ಥೆ ಒರಾಕಲ್‌ನ ಆಡಳಿತ ಮಂಡಳಿಗೆ ನಾಮನಿರ್ದೇಶನಗೊಂಡಿದ್ದಾರೆ.

‘ಕೃತಕ ಬುದ್ಧಿಮತ್ತೆ ಮತ್ತು ಮಶೀನ್‌ ಲರ್ನಿಂಗ್‌ನಲ್ಲಿ ವಿಶ್ವದ ಮುಂಚೂಣಿ ತಜ್ಞರಾಗಿರುವ ಸಿಕ್ಕಾ ಮುಂದಿನ ದಿನಗಳಲ್ಲಿ ಒರಾಕಲ್‌ನ ಬದಲಾವಣೆ ಮತ್ತು ಅಭಿವೃದ್ಧಿಗೆ ಕೈಜೋಡಿಸಲಿದ್ದಾರೆ ಎಂದು ಕಂಪನಿಯ ಹೇಳಿಕೆ ತಿಳಿಸಿದೆ.

ವೈನೈ (Vianai) ಆರಂಭಿಸುವ ಮೊದಲು ಸಿಕ್ಕಾ ಅವರು ಸ್ಯಾಪ್‌ (SAP) ಸಂಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿದ್ದರು. ಇನ್ಫೊಸಿಸ್‌ ಸಿಇಒ ಆಗಿದ್ದರು.

ಇದನ್ನೂ ಓದಿ: ವಿಶಾಲ್‌ ಸಿಕ್ಕಾ ಬಗ್ಗೆ ನಿಮಗೆ ಗೊತ್ತಿಲ್ಲದ 10 ಸಂಗತಿಗಳು

‘ಇಂದು ಜಗತ್ತಿನಲ್ಲಿ ಎಂಟರ್‌ಪ್ರೈಸ್‌ ಅಪ್ಲಿಕೇಶನ್ ಸೂಟ್ಸ್‌ ಮತ್ತು ಸೆಕ್ಯುರ್‌ ಇನ್‌ಫ್ರಾಸ್ಟ್ರಕ್ಚರ್‌ಗಳನ್ನು ಬೆಸೆದು ಒಂದೇ ಆಗಿಸಿ ಒದಗಿಸುತ್ತಿರುವ ಜಗತ್ತಿನ ಮುಂಚೂಣಿ ನಾಲ್ಕು ಕಂಪನಿಗಳ ಪೈಕಿ ಒರಾಕಲ್‌ ಸಹ ಒಂದು. ಮುಂಬರುವ ದಿನಗಳಲ್ಲಿ ಕಂಪನಿಯ ಭವಿಷ್ಯ ಉಜ್ವಲವಾಗಿದೆ’ ಎಂದು ಸಿಕ್ಕಾ ತಮ್ಮ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ.

‘ಒರಾಕಲ್‌ ಆಡಳಿತ ಮಂಡಳಿಯ ಭಾಗವಾಗಲು ಮತ್ತು ಅದರ ಯಶಸ್ಸಿನ ಪಯಣದಲ್ಲಿ ಭಾಗಿಯಾಗಲು ಖುಷಿಯಾಗುತ್ತಿದೆ’ ಎಂದು ಸಿಕ್ಕಾ ಪ್ರತಿಕ್ರಿಯಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು