ಶನಿವಾರ, ಜುಲೈ 24, 2021
27 °C

ಓಂಕಾರ್ 108 ಪ್ಲಸ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಸಂಕೇಶ್ವರ ಬೆವೆರೇಜಸ್‌ ವತಿಯಿಂದ ಕ್ಷಾರೀಯ (ಅಲ್ಕ್‌ಲೈನ್) ಶಕ್ತಿ ಹೊಂದಿರುವ ಶುದ್ಧ ಕುಡಿಯುವ ನೀರಿನ ‘ಓಂಕಾರ್‌ 108 ಪ್ಲಸ್‌’ ಎಂಬ ಹೊಸ ಬ್ರ್ಯಾಂಡ್‌‌ ಬಿಡುಗಡೆ ಮಾಡಲಾಗಿದೆ.

‘ರೋಗ ನಿರೋಧಕ ಶಕ್ತಿ ಹಾಗೂ ಜೀರ್ಣ ಕ್ರಿಯೆಯನ್ನು ಈ ನೀರು ಹೆಚ್ಚಿಸುತ್ತದೆ’ ಎಂದು ಬೆವೆರೇಜಸ್‌ನ ಮಾಲೀಕ ರವೀಂದ್ರ ಸಂಕೇಶ್ವರ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ನೀರಿನ ಸರಬರಾಜಿಗಾಗಿ ‘ಓಂಕಾರ್‌ ಡೆಲಿವರಿ’ ಆ್ಯಪ್‌ ಅಭಿವೃದ್ಧಿ ಪಡಿಸಲಾಗಿದೆ. ಆ್ಯಪ್‌ ಮೂಲಕ ಬೇಡಿಕೆ ಸಲ್ಲಿಸಿದ ಹುಬ್ಬಳ್ಳಿಯ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುವುದು. ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ನಗರಗಳಲ್ಲಿಯೂ ಈ ಸೌಲಭ್ಯ ಕಲ್ಪಿಸಲಾಗುವುದು’ ಎಂದರು. ಉಪಾದ್ಯಕ್ಷ  ಸಂತೋಷ ಭಾವಿಕಟ್ಟಿ, ವಿಲಾಸ ಸೋಗಿಕರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.