ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Wipro Salary Cut | ಹೊಸ ಉದ್ಯೋಗಿಗಳ ವೇತನ ಶೇ 50 ರಷ್ಟು ಕಡಿತ ಮಾಡಿದ ವಿಪ್ರೊ

ನಿರೀಕ್ಷಿತ ಆರ್ಥಿಕ ಹಿಂಜರಿತದಿಂದ ಪಾರಾಗಲು ಕಂಪನಿಯ ಪ್ರಯತ್ನ
Last Updated 22 ಫೆಬ್ರುವರಿ 2023, 4:28 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮೂಲಕ ವಿಪ್ರೊ ಸಂಸ್ಥೆಯು ಹೊಸ ಉದ್ಯೋಗಿಗಳ ವೇತನವನ್ನು ಶೇ 50ರಷ್ಟು ಕಡಿತ ಮಾಡಿದೆ.

ನಿರೀಕ್ಷಿತ ಆರ್ಥಿಕ ಹಿಂಜರಿತದಿಂದಾಗಿ ವಿಪ್ರೊ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಕಂಪನಿಯ ಈ ನಿರ್ಧಾರಕ್ಕೆ ನೌಕರರ ಒಕ್ಕೂಟ NITES ವಿರೋಧಿಸಿದ್ದು, ಇದು ಅನ್ಯಾಯವಾಗಿದ್ದು, ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.

ಇತ್ತೀಚೆಗಷ್ಟೇ ನೇಮಕ ಮಾಡಲು ಉದ್ದೇಶಿಸಿದ್ದ ಹೊಸ ನೌಕಕರಿಗೆ ವಾರ್ಷಿಕವಾಗಿ ₹6.5 ಲಕ್ಷ ವೇತನ ನೀಡುವುದೆಂದು ವಾಗ್ದಾನ ಮಾಡಲಾಗಿತ್ತು. ಆದರೆ ಇದೀಗ ₹ 3.5 ಲಕ್ಷ ವಾರ್ಷಿಕ ವೇತನಕ್ಕೆ ಒ‍ಪ್ಪಿಕೊಳ್ಳಿ ಅಥವಾ ಕಾಯಿರಿ ಎನ್ನುವ ಸಂದೇಶವನ್ನು ನೌಕರರಿಗೆ ಕಂಪನಿ ರವಾನಿಸಿದೆ.

ಕಂಪನಿಯ ಈ ನಿರ್ಧಾರ ನ್ಯಾಯ ಮತ್ತು ಪಾರದರ್ಶಕತೆಗೆ ವಿರುದ್ಧ ಎಂದಿರುವ ನೌಕರರ ಒಕ್ಕೂಟ, ಈ ನಿರ್ಧಾರವನ್ನು ಮರುಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT