ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಉದ್ದಿಮೆಗಳಿಗೆ ವಿಶ್ವ ಬ್ಯಾಂಕ್‌ ನೆರವು

Last Updated 1 ಜುಲೈ 2020, 15:38 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ 15 ಕೋಟಿ ಸಣ್ಣ ಉದ್ದಿಮೆಗಳಿಗೆ ₹ 5,625 ಕೋಟಿ ನೆರವು ನೀಡುವುದಾಗಿ ವಿಶ್ವ ಬ್ಯಾಂಕ್‌ ಹೇಳಿದೆ.

’ಆತ್ಮನಿರ್ಭರ ಭಾರತ್‌‘ ಹೆಸರಿನಲ್ಲಿ ಎಂಎಸ್‌ಎಂಇಗಳಿಗೆ ₹ 3.7 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್‌ ಘೋಷಿಸಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವಿಶ್ವ ಬ್ಯಾಂಕ್‌ ಮೆಚ್ಚುಗೆ ಸೂಚಿಸಿದೆ.

‘ಬ್ಯಾಂಕ್‌ ಅಥವಾ ಎಸ್‌ಐಡಿಬಿಐ ಮೂಲಕ ಮಾರುಕಟ್ಟೆಗೆ ನಗದು ಪೂರೈಕೆ ಮಾಡಲು ಆರ್‌ಬಿಐ ಸಹ ಕ್ರಮ ಕೈಗೊಂಡಿದೆ’ ಎಂದು ವಿಶ್ವ ಬ್ಯಾಂಕ್‌ನ ಭಾರತದ ನಿರ್ದೇಶಕ ಜುನೈದ್‌ ಅಹ್ಮದ್ ಹೇಳಿದ್ದಾರೆ.

ವಿಶ್ವ ಬ್ಯಾಂಕ್‌ ಈಗಾಗಲೇ ಸಾಮಾಜಿಕ ಮತ್ತು ಆರೋಗ್ಯ ವಲಯಕ್ಕೆ ₹ 15 ಸಾವಿರ ಕೋಟಿ ಮೊತ್ತದ ನೆರವು ಘೋಷಿಸಿದೆ. ಹೀಗಾಗಿ ಒಟ್ಟಾರೆ ನೆರವಿನ ಮೊತ್ತವು ₹20,625 ಕೋಟಿ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT