ನವದೆಹಲಿ: ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ಪ್ರಮಾಣವು ಮಾರ್ಚ್ ತಿಂಗಳಲ್ಲಿ, 29 ತಿಂಗಳ ಕನಿಷ್ಠ ಮಟ್ಟವಾದ ಶೇಕಡ 1.34ಕ್ಕೆ ತಲುಪಿದೆ. ತಯಾರಿಸಿದ ಉತ್ಪನ್ನಗಳು ಮತ್ತು ಇಂಧನ ಉತ್ಪನ್ನಗಳ ಬೆಲೆ ಏರಿಕೆ ಪ್ರಮಾಣ ಕಡಿಮೆ ಆಗಿದ್ದು ಈ ಇಳಿಕೆಗೆ ಕಾರಣ.

ಮಾರ್ಚ್ ತಿಂಗಳನ್ನು ಪರಿಗಣಿಸಿದರೆ, ಸಗಟು ಹಣದುಬ್ಬರ ಪ್ರಮಾಣವು ಸತತ ಹತ್ತು ತಿಂಗಳುಗಳಿಂದ ಕಡಿಮೆ ಆಗುತ್ತಿದೆ. ಫೆಬ್ರುವರಿಯಲ್ಲಿ ಸಗಟು ಹಣದುಬ್ಬರ ಪ್ರಮಾಣವು ಶೇ 3.85 ಆಗಿತ್ತು. ಇದು ಹಿಂದಿನ ವರ್ಷದ ಮಾರ್ಚ್ ತಿಂಗಳಲ್ಲಿ ಶೇ 14.3ರಷ್ಟು ಇತ್ತು.

‘ಮೂಲ ಲೋಹಗಳು, ಆಹಾರ ಉತ್ಪನ್ನಗಳು, ಜವಳಿ, ಆಹಾರೇತರ ವಸ್ತುಗಳು, ಖನಿಜಗಳು, ರಬ್ಬರ್ ಮತ್ತು ಪ್ಲಾಸ್ಟಿಕ್ ಉತ್ಪನ್ನಗಳು, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಕಾಗದ ಮತ್ತು ಕಾಗದದ ಉತ್ಪನ್ನಗಳ ಬೆಲೆ ಇಳಿಕೆಯು ಸಗಟು ಹಣದುಬ್ಬರ ಇಳಿಕೆಗೆ ಕೊಡುಗೆ ನೀಡಿವೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಹೇಳಿದೆ.

2020ರ ಅಕ್ಟೋಬರ್‌ನಲ್ಲಿ ಸಗಟು ಹಣದುಬ್ಬರ ಪ್ರಮಾಣವು ಶೇ 1.31ರಷ್ಟು ಇತ್ತು. ಈ ತಿಂಗಳ ನಂತರದ ಅತ್ಯಂತ ಕನಿಷ್ಠ ಪ್ರಮಾಣದ ಸಗಟು ಹಣದುಬ್ಬರವು ಈಗ ಮಾರ್ಚ್‌ನಲ್ಲಿ ದಾಖಲಾಗಿದೆ.

‘ಆಹಾರ ವಸ್ತುಗಳ ಬೆಲೆ ಹೆಚ್ಚಾಗುತ್ತಿರುವುದು ತುಸು ಸಮಸ್ಯೆ ಉಂಟುಮಾಡಬಹುದು. ಗೋಧಿಯನ್ನು ಹೊರತುಪಡಿಸಿದರೆ, ಸಜ್ಜೆ, ಜೋಳ ಮತ್ತು ಬಾರ್ಲಿಯ ಬೆಲೆಯು ಇನ್ನಷ್ಟೇ ಕಡಿಮೆ ಆಗಬೇಕಿದೆ. ದ್ವಿದಳ ಧಾನ್ಯಗಳು, ಹಾಲು, ತರಕಾರಿಗಳು, ಹಣ್ಣುಗಳು, ಮಸಾಲೆ ಪದಾರ್ಥಗಳ ಬೆಲೆಯು ತಿಂಗಳಿನಿಂದ ತಿಂಗಳಿಗೆ ಹೆಚ್ಚಾಗುತ್ತಿದೆ. ಇದರ ಅರ್ಥ, ಏಕದಳ ಧಾನ್ಯಗಳನ್ನು ಹೊರತುಪಡಿಸಿದ ಆಹಾರ ಧಾನ್ಯಗಳ ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ನಿಯಂತ್ರಿಸುವುದು ಸವಾಲಿನ ಕೆಲಸ ಆಗಬಹುದು’ ಎಂದು ಎಕ್ವಿರಸ್ ಸೆಕ್ಯುರಿಟೀಸ್ ಹೇಳಿದೆ.

ಮಾರ್ಚ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ದರ ಕೂಡ ಕಡಿಮೆ ಆಗಿದೆ. ಸಗಟು ಹಣದುಬ್ಬರ ಪ್ರಮಾಣವು ಕಡಿಮೆ ಆಗಿರುವುದು ಅದಕ್ಕೆ ಪೂರಕವಾಗಿದೆ. ಚಿಲ್ಲರೆ ಹಣದುಬ್ಬರ ಪ್ರಮಾಣವು ಮಾರ್ಚ್ ತಿಂಗಳಲ್ಲಿ ಶೇ 5.66ಕ್ಕೆ ಇಳಿಕೆ ಆಗಿದೆ. ಇದು 15 ತಿಂಗಳ ಕನಿಷ್ಠ ಮಟ್ಟ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ರೆಪೊ ದರವನ್ನು ನಿರ್ಧರಿಸುವಾಗ ಚಿಲ್ಲರೆ ಹಣದುಬ್ಬರ ದರವನ್ನು ಪರಿಗಣಿಸುತ್ತದೆ. ಹಣದುಬ್ಬರ ಪ್ರಮಾಣವು ಮುಂದಿನ ದಿನಗಳಲ್ಲಿ ಯಾವ ಮಟ್ಟಕ್ಕೆ ತಲುಪಬಹುದು ಎಂಬುದರ ಮೇಲೆ ಹವಾಮಾನ ಪರಿಸ್ಥಿತಿಯು ಹೆಚ್ಚಿನ ಪರಿಣಾಮ ಬೀರಲಿದೆ. ಬೇಸಿಗೆಯಲ್ಲಿ ಹಾಲಿನ ದರವು ಕಡಿಮೆ ಆಗುವ ಸಾಧ್ಯತೆ ಇಲ್ಲ ಎಂದು ಅಂದಾಜು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.