ಫೆಬ್ರುವರಿಯಲ್ಲಿ ಸಗಟು ಹಣದುಬ್ಬರ ಏರಿಕೆ

ಸೋಮವಾರ, ಮಾರ್ಚ್ 18, 2019
31 °C

ಫೆಬ್ರುವರಿಯಲ್ಲಿ ಸಗಟು ಹಣದುಬ್ಬರ ಏರಿಕೆ

Published:
Updated:

ನವದೆಹಲಿ: ಫೆಬ್ರುವರಿ ತಿಂಗಳಲ್ಲಿ ಸಗಟು ಬೆಲೆಗಳನ್ನು ಆಧರಿಸಿದ ಹಣದುಬ್ಬರವು ಶೇ 2.93ಕ್ಕೆ ಏರಿಕೆಯಾಗಿದೆ.

ಪ್ರಾಥಮಿಕ ಸರಕು, ಇಂಧನ, ವಿದ್ಯುತ್‌  ಬೆಲೆ ಹೆಚ್ಚಳದಿಂದ ಸಗಟು ಹಣದುಬ್ಬರವು (ಡಬ್ಲ್ಯುಪಿಐ) ಹೆಚ್ಚಳಗೊಂಡಿರುವುದು ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

ಈ ವರ್ಷದ ಜನವರಿ ತಿಂಗಳಲ್ಲಿನ ‘ಡಬ್ಲ್ಯುಪಿಐ‘ ಹಣದುಬ್ಬರವು ಶೇ 2.76ರಷ್ಟಿತ್ತು. 2018ರ ಫೆಬ್ರುವರಿಯಲ್ಲಿ ಇದು ಶೇ 2.74ರಷ್ಟು ದಾಖಲಾಗಿತ್ತು.

ಪ್ರಾಥಮಿಕ ಸರಕುಗಳೆಂದು ಪರಿಗಣಿಸುವ ಅಡುಗೆ ಮನೆ ಅಗತ್ಯಗಳಾದ ಆಲೂಗೆಡ್ಡೆ, ಈರುಳ್ಳಿ, ಹಣ್ಣು ಮತ್ತು ಹಾಲಿನ ಬೆಲೆಯು ಫೆಬ್ರುವರಿಯಲ್ಲಿ ಶೇ 4.84ಕ್ಕೆ ಏರಿಕೆಯಾಗಿತ್ತು. ಜನವರಿಯಲ್ಲಿ ಇದು ಶೇ 3.54ರಷ್ಟಿತ್ತು. ಇಂಧನ ಮತ್ತು ವಿದ್ಯುತ್‌ ಬೆಲೆ ಏರಿಕೆಯು ಕೂಡ ಜನವರಿಯಲ್ಲಿನ ಶೇ 1.85ಕ್ಕೆ ಹೋಲಿಸಿದರೆ ಶೇ 2.23ಕ್ಕೆ ಏರಿಕೆಯಾಗಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌, ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ನಿಗದಿಪಡಿಸಲು ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !