ಶನಿವಾರ, ಏಪ್ರಿಲ್ 1, 2023
23 °C

ಜೊಮಾಟೊ ಕಂಪನಿ ತೊರೆದ ಸಹ ಸಂಸ್ಥಾಪಕ ಗೌರವ್ ಗುಪ್ತಾ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಜನಪ್ರಿಯ ಆಹಾರ ಪೂರೈಕೆ ಸಂಸ್ಥೆಯಾದ ‘ಜೊಮಾಟೊ‘ದ ಸಹ ಸಂಸ್ಥಾಪಕ ಹಾಗೂ ಜೊಮಾಟೊ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಗೌರವ್ ಗುಪ್ತಾ ಕಂಪನಿ ತೊರೆದಿದ್ದಾರೆ.

ಕಂಪನಿ ಸಿಬ್ಬಂದಿಗೆ ಮಂಗಳವಾರ ಕಳಿಸಿರುವ ಮೇಲ್‌ನಲ್ಲಿ ಈ ವಿಷಯವನ್ನು ಗೌರವ್ ಗುಪ್ತಾ ತಿಳಿಸಿದ್ದಾರೆ. ಅವರು ಜೊಮಾಟೊದ ಪೂರೈಕೆ ವಿಭಾಗದ ಮುಖ್ಯಸ್ಥರಾಗಿದ್ದರು.

‘ನಾನು ನನ್ನ ಜೀವನದಲ್ಲಿ ಹೊಸ ತಿರುವು ತೆಗೆದುಕೊಳ್ಳುತ್ತಿದ್ದೇನೆ ಮತ್ತು ಇಲ್ಲಿಂದ ಹೊಸ ಅಧ್ಯಾಯವನ್ನು ಆರಂಭಿಸುತ್ತಿದ್ದೇನೆ. ಜೊಮಾಟೊದಲ್ಲಿ ಕಳೆದ 6 ವರ್ಷಗಳು ಅದ್ಭುತವಾಗಿದ್ದವು. ಜೊಮ್ಯಾಟೊವನ್ನು ಮುಂದಕ್ಕೆ ಕೊಂಡೊಯ್ಯಲು ನಮ್ಮಲ್ಲಿ ಈಗ ಉತ್ತಮ ತಂಡವಿದೆ‘ ಎಂದು ಗುಪ್ತಾ ಹೇಳಿದ್ದಾರೆ.

‘ನಾನು ಜೊಮಾಟೊವನ್ನು ಅತೀವವಾಗಿ ಪ್ರೀತಿಸುತ್ತಿದ್ದೇನೆ ಮತ್ತು ಯಾವಾಗಲೂ ಅದರೊಂದಿಗೆ ಇರುತ್ತೇನೆ. ಅದರೊಂದಿಗೆ ನನ್ನದು ಅದ್ಭುತ ಪ್ರಯಾಣವಾಗಿತ್ತು. ಭವಿಷ್ಯದಲ್ಲಿ ನಾವು ಏನನ್ನು ಸಾಧಿಸುತ್ತೇವೆ ಎನ್ನುವುದರ ಬಗ್ಗೆ ಇನ್ನಷ್ಟು ಹೆಮ್ಮೆ ಪಡುತ್ತೇನೆ‘ ಎಂದು ಗುಪ್ತಾ ಹೇಳಿದ್ದಾರೆ.

ಜೊಮಾಟೊ ಸಂಸ್ಥಾಪಕ ಹಾಗೂ ಸಿಇಓ ದೀಪಿಂದರ್ ಗೋಯಲ್ ಅವರಿಗೆ ವಿಶೇಷ ಧನ್ಯವಾದ ತಿಳಿಸಿರುವ ಗುಪ್ತಾ, ‘ನಿಮ್ಮ ಪ್ರಯಾಣದ ಭಾಗವಾಗಿಸಿದ್ದಕ್ಕಾಗಿ ಅನಂತ ಧನ್ಯವಾದಗಳು‘ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಗೋಯಲ್, ‘ನೀವಿಲ್ಲದ ಜೊಮಾಟೊ ಊಹಿಸಿಕೊಳ್ಳುವುದು ಕಷ್ಟ‘ ಎಂದಿದ್ದಾರೆ.

2019 ರಲ್ಲಿ ಗೌರವ್ ಗುಪ್ತಾ ಅವರನ್ನು ಅಧಿಕೃತವಾಗಿ ಜೊಮಾಟೊ ಸಹ ಸಂಸ್ಥಾಪಕ ಎಂದು ಘೋಷಿಸಲಾಗಿತ್ತು.

ಇದನ್ನೂ ಓದಿ: ಸೆಪ್ಟೆಂಬರ್‌ 17 ರಿಂದ ದಿನಸಿ ಪೂರೈಕೆ ಸೇವೆ ಸ್ಥಗಿತ: ಜೊಮ್ಯಾಟೊ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು