ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಮ್ಯಾಟೊ ಸಹ ಸಂಸ್ಥಾಪಕ ಮೋಹಿತ್ ಗುಪ್ತಾ ರಾಜೀನಾಮೆ

Last Updated 18 ನವೆಂಬರ್ 2022, 16:05 IST
ಅಕ್ಷರ ಗಾತ್ರ

ನವದೆಹಲಿ: ಆ್ಯಪ್ ಆಧಾರಿತ ಆಹಾರ ಪೂರೈಕೆ ಕಂಪನಿ ಜೊಮ್ಯಾಟೊದ ಸಹ ಸಂಸ್ಥಾಪಕ ಮೋಹಿತ್ ಗುಪ್ತಾ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ನಾಲ್ಕೂವರೆ ವರ್ಷಗಳ ಹಿಂದೆ ಜೊಮ್ಯಾಟೊ ಕಂಪನಿಗೆ ಸೇರ್ಪಡೆಯಾಗಿದ್ದ ಗುಪ್ತಾ ಸಿಇಒ ಆಗಿದ್ದರು. ನಂತರ 2020ರಲ್ಲಿ ಸಹ ಸಂಸ್ಥಾಪಕ ಗೌರವಕ್ಕೆ ಪಾತ್ರರಾಗಿದ್ದರು.

ಜೀವನದಲ್ಲಿ ಅಡ್ವೆಂಚರ್ಹುಡುಕುತ್ತಾ ಜೊಮ್ಯಾಟೊ ಬಿಟ್ಟು ಹೋಗಲು ನಿರ್ಧರಿಸಿರುವುದಾಗಿ ಗುಪ್ತಾ ನೀಡಿದ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಜೊಮ್ಯಾಟೊ ಕಂಪನಿ ತಿಳಿಸಿದೆ.

ಕಂಪನಿ ಕಾಯ್ದೆ 2013ರ ಅಡಿಯಲ್ಲಿ ಗುಪ್ತಾ ಅವರನ್ನು ಪ್ರಮುಖ ವ್ಯವಸ್ಥಾಪಕರಾಗಿ ನೇಮಿಸಿರಲಿಲ್ಲ ಎಂದೂ ಸಂಸ್ಥೆ ತಿಳಿಸಿದೆ.

ಆಗಸ್ಟ್ ತಿಂಗಳಲ್ಲಿ ಜೊಮ್ಯಾಟೊದ ಉಪ ಮುಖ್ಯ ಹಣಕಾಸು ಅಧಿಕಾರಿ ನಿತಿನ್ ಸವಾರಾ ರಾಜೀನಾಮೆ ನೀಡಿದ್ದರು.

ಕಳೆದ ವಾರ ಬಿಡುಗಡೆಯಾದ ಎರಡನೇ ತ್ರೈಮಾಸಿಕ ವರದಿಯಲ್ಲಿ ಜೊಮ್ಯಾಟೊ ನಷ್ಟ ಹೊಂದಿತ್ತು. ಆದರೆ ಆನ್ಲೈನ್ ಆರ್ಡರ್ ಮೌಲ್ಯದಲ್ಲಿ ವೃದ್ಧಿ ಸಾಧಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT