ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹184 ಕೋಟಿ ಸೇವಾ ತೆರಿಗೆ ಬಾಕಿ: ಜೊಮಾಟೊಗೆ ನೋಟಿಸ್‌

Published 2 ಏಪ್ರಿಲ್ 2024, 15:15 IST
Last Updated 2 ಏಪ್ರಿಲ್ 2024, 15:15 IST
ಅಕ್ಷರ ಗಾತ್ರ

ನವದೆಹಲಿ: ಆನ್‌ಲೈನ್‌ನಲ್ಲಿ ಆಹಾರ ವಿತರಿಸುವ ಸಂಸ್ಥೆಯಾದ ಜೊಮಾಟೊಗೆ ಸೇವಾ ತೆರಿಗೆ ಮತ್ತು ದಂಡ ಸೇರಿ ಒಟ್ಟು ₹184 ಕೋಟಿ ಪಾವತಿಸುವಂತೆ ನವದೆಹಲಿಯ ಕೇಂದ್ರ ತೆರಿಗೆ ಇಲಾಖೆಯು ನೋಟಿಸ್‌ ನೀಡಿದೆ.

ವಿದೇಶಗಳಲ್ಲಿ ಇರುವ ತನ್ನ ಅಂಗಸಂಸ್ಥೆಗಳು ಮತ್ತು ಶಾಖೆಗಳಿಂದ ಆಹಾರ ಪದಾರ್ಥಗಳನ್ನು ಮಾರಾಟ ಮಾಡಿರುವುದಕ್ಕೆ ಸಂಬಂಧಿಸಿದ ಸೇವಾ ತೆರಿಗೆ ಇದಾಗಿದೆ. 2014ರ ಅಕ್ಟೋಬರ್‌ನಿಂದ 2017ರ ಜೂನ್‌ ನಡುವಿನ ಅವಧಿಗೆ ಇಷ್ಟು ಮೊತ್ತದ ತೆರಿಗೆ ಪಾವತಿಸುವಂತೆ ಸೂಚಿಸಿದೆ ಎಂದು ಕಂಪನಿಯು, ಷೇರುಪೇಟೆಗೆ ಮಾಹಿತಿ ನೀಡಿದೆ.

ತೆರಿಗೆ ಇಲಾಖೆಯು ನೀಡಿದ್ದ ಷೋಕಾಸ್‌ ನೋಟಿಸ್‌ಗೆ ಕಾನೂನು ಪ್ರಕಾರವಾಗಿಯೇ ಸೂಕ್ತ ದಾಖಲೆಗಳ ಸಮೇತ ಉತ್ತರಿಸಲಾಗಿತ್ತು. ಆದರೆ, ಇದನ್ನು ಇಲಾಖೆಯು ಒಪ್ಪಿಕೊಂಡಿಲ್ಲ. ಹಾಗಾಗಿ, ಆದೇಶ ಪ್ರಶ್ನಿಸಿ ಸಕ್ಷಮ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT