ಬುಧವಾರ, ಜೂನ್ 3, 2020
27 °C
ಕ್ರೆಡಿವಾಚ್‌ನ ಆನ್‌ಲೈನ್‌ ವಿಚಾರಗೋಷ್ಠಿಯಲ್ಲಿ ವಿಶ್ಲೇಷಣೆ

ಉದ್ದಿಮೆಗಳಿಗೆ ₹4.72 ಲಕ್ಷ ಕೋಟಿ ಹೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಲಾಕ್‌ಡೌನ್‌ ಕಾರಣಕ್ಕೆ ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಕಂಪನಿಗಳು ಒಟ್ಟಾರೆ ₹ 4.72 ಲಕ್ಷ ಕೋಟಿ ನಷ್ಟಕ್ಕೆ ಗುರಿಯಾಗಲಿವೆ ಎಂದು ಬೆಂಗಳೂರಿನ ತಂತ್ರಜ್ಞಾನ ಹಣ ಕಾಸು ಸಂಸ್ಥೆ ಕ್ರೆಡಿವಾಚ್‌ ವಿಶ್ಲೇಷಿಸಿದೆ.

ಕ್ರೆಡಿವಾಚ್‌ ನಡೆಸಿದ ಆನ್‌ಲೈನ್‌ ವಿಚಾರಗೋಷ್ಠಿಯಲ್ಲಿ (ವೆಬಿನಾರ್‌) ದೇಶಿ ಉದ್ದಿಮೆಗಳ ಮೇಲಿನ ‘ಕೋವಿಡ್‌–19’ ಪರಿಣಾಮಗಳನ್ನು ಸಮಗ್ರವಾಗಿ ವಿಶ್ಲೇಷಿಸಲಾಗಿದೆ. ವೆಬಿ ನಾರ್‌ನಲ್ಲಿ ಕಂಪನಿಯ ವಹಿವಾಟು ಮುಖ್ಯಸ್ಥ ಗಣಪತಿ ಜಿಆರ್‌, ಉತ್ಪನ್ನಗಳ ಮುಖ್ಯಸ್ಥ ಹೇಮಂತ್‌ ಜಿಸಿ, ಡೇಟಾ ವಿಜ್ಞಾನಿ ರಾಜಾರಂ ಬಿಎಸ್‌ಆರ್‌ ಅವರು ಭಾಗವಹಿಸಿ, ಉದ್ದಿಮೆ ವಲಯ ಎದುರಿಸಲಿರುವ ಸಂಕಷ್ಟ ಮತ್ತು ಭವಿ ಷ್ಯದ ಮುನ್ನೋಟದ  ಒಳನೋಟ ನೀಡಿದ್ದಾರೆ.

‘ಕೋವಿಡ್‌ ಬಿಕ್ಕಟ್ಟು ಉದ್ದಿಮೆ ಮೇಲೆ ಬೀರುತ್ತಿರುವ ಅಗಾಧ ಪರಿಣಾ ಮದಿಂದ ಉದ್ಭವಿಸಿರುವ ಸಂಕೀರ್ಣ ಪರಿಸ್ಥಿತಿಯ ಸಮಗ್ರ ದತ್ತಾಂಶಗಳನ್ನು ವಿಶ್ಲೇಷಿಸಿ ಮುನ್ನೋಟ ಕಂಡುಕೊಳ್ಳಲಾಗಿದೆ’ ಎಂದು ಗಣಪತಿ ಹೇಳಿದ್ದಾರೆ.

‘ಬಿಕ್ಕಟ್ಟನ್ನು ಸಮರ್ಥವಾಗಿ ನಿರ್ವ ಹಿಸಲು ಹೊಸ ಮಾರ್ಗೋಪಾಯಗಳಿಂದ ಮಾತ್ರ ಸಾಧ್ಯವಾಗಲಿದೆ. ಉದ್ದಿಮೆ ಮುನ್ನಡೆಸಲು ಹೊಸ ಚಿಂತನೆ ರೂಢಿಸಿಕೊಳ್ಳುವುದು ಅನಿವಾರ್ಯವಾಗಲಿದೆ’ ಎಂದು ಹೇಮಂತ್‌ ಅಭಿಪ್ರಾಯಪಟ್ಟಿದ್ದಾರೆ.

‘ವಿವಿಧ ವಲಯಗಳ ಮೇಲೆ ಪಿಡು ಗಿನ ಪರಿಣಾಮವನ್ನು ಗರಿಷ್ಠ, ಮಧ್ಯಮ ಮತ್ತು ಕಡಿಮೆ – ಹೀಗೆ ಮೂರು ಬಗೆಯಲ್ಲಿ ವಿಂಗಡಿಸಬಹುದು’ ಎಂದು ರಾಜಾರಾಂ ವಿಶ್ಲೇಷಿಸಿದ್ದಾರೆ.

ಲಾಕ್‌ಡೌನ್‌ ಇನ್ನಷ್ಟು ದಿನ ಮುಂದುವರೆದರೆ ದೇಶಿ ಆರ್ಥಿಕತೆಗೆ ಆಗುವ ನಷ್ಟದ ಅಂದಾಜು ಕೂಡ ಪ್ರಮುಖವಾಗಿ ಚರ್ಚೆಗೆ ಒಳಗಾಗಿತ್ತು.  ಅಂತಹ ಪರಿಸ್ಥಿತಿಯಲ್ಲಿ ಉದ್ಯಮಗಳ ನಷ್ಟವು ₹ 12.88 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ಊಹಿಸಲಾಗಿದೆ.

ಉದ್ದಿಮೆ ವಹಿವಾಟಿನ ಸಂಸ್ಥೆಗಳು ಸಾಲಗಾರರು, ಹೂಡಿಕೆದಾರರು ಮತ್ತು ಸರಕು ಪೂರೈಸುವ ಪಾಲುದಾರರ ಜತೆಗೆ ಸ್ಪರ್ಧಾತ್ಮಕ ದರಗಳಲ್ಲಿ ಲಾಭ ಪಡೆಯಲು ಅವಕಾಶ ಇದೆ ಎಂದು ಚರ್ಚೆಯ ಕೊನೆಯಲ್ಲಿ ಅಭಿಪ್ರಾಯಕ್ಕೆ ಬರಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು