ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹750 ಕೋಟಿ ತೆರಿಗೆ ಬಾಕಿ: ಜೊಮಾಟೊ, ಸ್ವಿಗ್ಗಿಗೆ ನೋಟಿಸ್ ಜಾರಿ ಮಾಡಿದ ಡಿಜಿಜಿಐ

Published 22 ನವೆಂಬರ್ 2023, 13:27 IST
Last Updated 22 ನವೆಂಬರ್ 2023, 13:30 IST
ಅಕ್ಷರ ಗಾತ್ರ

ಬೆಂಗಳೂರು: ಆಹಾರ ವಿತರಣಾ ಕ್ಷೇತ್ರದ ಜೊಮಾಟೊ ಹಾಗೂ ಸ್ವಿಗ್ಗಿ ಕಂಪನಿಗಳು ಬಾಕಿ ಉಳಿಸಿಕೊಂಡ ₹750 ಕೋಟಿಯಷ್ಟು ಪರೋಕ್ಷ ತೆರಿಗೆಯನ್ನು ಪಾವತಿಸುವಂತೆ ಜಿಎಸ್‌ಟಿ ಗುಪ್ತದಳದ ಡೈರೆಕ್ಟರ್ ಜನರಲ್‌ (ಡಿಜಿಜಿಐ) ನೋಟಿಸ್ ಜಾರಿ ಮಾಡಿದೆ.

‘ಇದರಲ್ಲಿ ಜೊಮಾಟೊದಿಂದ ₹400 ಕೋಟಿ ಹಾಗೂ ಸ್ವಿಗ್ಗಿಯಿಂದ ₹350ಕೋಟಿ ತೆರಿಗೆ ಸರ್ಕಾರಕ್ಕೆ ಪಾವತಿಯಾಗಬೇಕಿದೆ’ ಎಂದು ಮೂಲಗಳು ತಿಳಿಸಿವೆ.

‘ಸೇವಾ ವಲಯದಲ್ಲಿರುವ ಜೊಮಾಟೊ ಮತ್ತು ಸ್ವಿಗ್ಗಿ ಕಂಪನಿಗಳು ಸರಕು ಮತ್ತು ಸೇವಾ ತೆರಿಗೆ ಪಾವತಿ ವ್ಯಾಪ್ತಿಗೆ ಒಳಪಡುತ್ತವೆ. ಈ ತೆರಿಗೆ ಬಾಕಿಯು 2017ರ ಜುಲೈನಿಂದ 2023ರ ಮಾರ್ಚ್‌ವರೆಗಿನದಾಗಿದೆ’ ಎಂದು ಸಿಎನ್‌ಬಿಸಿ–ಟಿವಿ18 ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯೆಗೆ ಜೊಮಾಟೊ ನಿರಾಕರಿಸಿದೆ. ಸ್ವಿಗ್ಗಿ ಮತ್ತು ಡಿಜಿಜಿಐ ತಕ್ಷಣಕ್ಕೆ ಪ್ರತಿಕ್ರಿಯಿಸಲಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT