ಸೋಮವಾರ, ಸೆಪ್ಟೆಂಬರ್ 27, 2021
21 °C

ದುಡ್ಡನ್ನು ಹೇಗೆ ಖರ್ಚು ಮಾಡಬಾರದು ಎಂಬುದಕ್ಕೆ ಪಾಠವಿದು: ಆನಂದ್‌ ಮಹೀಂದ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Twitter

ನವದೆಹಲಿ: ಮಹೀಂದ್ರ ಗ್ರೂಪ್‌ನ ಮುಖ್ಯಸ್ಥ ಆನಂದ್‌ ಮಹೀಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದ ವಿಡಿಯೊ ಒಂದನ್ನು ಟ್ವೀಟ್‌ ಮಾಡಿದ್ದು, ಶ್ರೀಮಂತಿಕೆ ಇದ್ದಾಗ ದುಡ್ಡನ್ನು ಹೇಗೆ ಖರ್ಚು ಮಾಡಬಾರದು ಎಂಬುದಕ್ಕೆ ಇದೊಂದು ಪಾಠ ಎಂದಿದ್ದಾರೆ.

ಭಾರತೀಯ ಮೂಲದ ಅಮೆರಿಕದ ವ್ಯಕ್ತಿಯೊಬ್ಬ ಚಿನ್ನದಿಂದಲೇ ತಯಾರಿಸಲಾದ ಫೆರಾರಿ ಕಾರಿನ ವಿಡಿಯೊವನ್ನು ಹಂಚಿಕೊಂಡಿರುವ ಉದ್ಯಮಿ ಆನಂದ್‌ ಮಹೀಂದ್ರ ಅವರ ಅಭಿಪ್ರಾಯಕ್ಕೆ ನೆಟ್ಟಿಗರು ತಲೆದೂಗಿದ್ದಾರೆ.

ವಿಡಿಯೊದಲ್ಲಿ ಚಿನ್ನದ ಫೆರಾರಿ ಕಾರನ್ನು ಜನರು ಸುತ್ತಲೂ ನಿಂತು ನೋಡುತ್ತಿರುವ ದೃಶ್ಯವಿದೆ. 'ಅಪರಂಜಿ ಫೆರಾರಿ ಜೊತೆ ಭಾರತ-ಅಮೆರಿಕದ ಮಾಲೀಕ' ಎಂದು ಬರೆದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

'ಈ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಏಕೆ ಹರಿದಾಡುತ್ತಿದೆ ಎಂಬುದು ಗೊತ್ತಿಲ್ಲ. ಆದರೆ ಇದು ಶ್ರೀಮಂತರು ತಮ್ಮಲ್ಲಿರುವ ದುಡ್ಡನ್ನು ಹೇಗೆ ಖರ್ಚು ಮಾಡಬಾರದು ಎಂಬುದಕ್ಕೆ ಉತ್ತಮ ಪಾಠವಿದು' ಎಂದು ಆನಂದ ಮಹೀಂದ್ರ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು