ಮಂಗಳವಾರ, ಜೂನ್ 2, 2020
27 °C

ಪ್ರಶ್ನೋತ್ತರ: ವಾರ್ಷಿಕ ಸಂಬಳ ₹10 ಲಕ್ಷ. ಐ.ಟಿ ರಿಟರ್ನ್ಸ್‌ ಬಗ್ಗೆ ತಿಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

- ಶೈಲಜಾ, ಬೆಂಗಳೂರು

ನಾನು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವೀಧರೆ. ನನ್ನ ವಾರ್ಷಿಕ ಸಂಬಳ ₹ 10 ಲಕ್ಷ. ನನಗೆ ಆದಾಯ ತೆರಿಗೆ ಉಳಿತಾಯ ವಿಚಾರದಲ್ಲಿ ಏನೂ ಅನುಭವ ಇಲ್ಲ. ಐ.ಟಿ ರಿಟರ್ನ್ಸ್‌ ತುಂಬುವ ವಿಚಾರ ಕೂಡಾ ತಿಳಿಸಿ. ಪ್ಯಾನ್‌ ಕಾರ್ಡ್‌ ಇದೆ.

ಉತ್ತರ: ನಿಮ್ಮ ವಾರ್ಷಿಕ ಸಂಬಳ ₹ 10 ಲಕ್ಷ ಇರುವುದರಿಂದ ಈ ಆದಾಯಕ್ಕೆ ತೆರಿಗೆ ಬರುತ್ತದೆ. ತೆರಿಗೆ ಉಳಿಸಲು ನೀವು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌) ಖಾತೆಯನ್ನು ಅಂಚೆ ಕಚೇರಿ ಅಥವಾ ಆಯ್ದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪ್ರಾರಂಭಿಸಿ. ವಾರ್ಷಿಕವಾಗಿ ₹ 1 ಲಕ್ಷ ತುಂಬಿ. ಇದೇ ವೇಳೆ ‘ಎಲ್‌ಐಸಿ’ಯ ಜೀವನ ಆನಂದ ಪಾಲಿಸಿ ಮಾಡಿಸಿ ವಾರ್ಷಿಕವಾಗಿ ₹ 50 ಸಾವಿರ ತುಂಬಿ. ಈ ಎರಡೂ ಮಾರ್ಗಗಳಿಂದ ಸೆಕ್ಷನ್‌ 80ಸಿ ಹೊರತುಪಡಿಸಿ ಸೆಕ್ಷನ್‌ 80ಸಿಸಿಡಿ (1ಬಿ) ಆಧಾರದ ಮೇಲೆ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ₹ 50 ಸಾವಿರ ವಾರ್ಷಿಕವಾಗಿ ತೊಡಗಿಸಿ. ಒಟ್ಟಿನಲ್ಲಿ 80 ಸಿ + 80ಸಿಸಿಡಿ (1ಬಿ) ₹ 2 ಲಕ್ಷ ಉಳಿಸಿ. ಇದನ್ನು ನಿಮ್ಮ ಒಟ್ಟು ವಾರ್ಷಿಕ ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ಇನ್ನು ಐ.ಟಿ ರಿಟರ್ನ್ಸ್‌ ಬಗ್ಗೆ– ನೀವು ಪ್ರತಿ ವರ್ಷ ಜುಲೈ 31ರ ಒಳಗೆ ಸಲ್ಲಿಸಬೇಕು. ನೀವು ನಿಮ್ಮ ಮನೆ ಸಮೀಪದ ಇಲ್ಲವೇ ಪರಿಚಯದ ಚಾರ್ಟರ್ಡ್‌ ಅಕೌಂಟೆಂಟ್‌ ಮೂಖಾಂತರ ಸಲ್ಲಿಸಿರಿ. ನಿಮ್ಮ ಮುಂದಿನ ಭವಿಷ್ಯಕ್ಕಾಗಿ 5 ವರ್ಷಗಳವರೆಗೆ ಪ್ರತಿ ತಿಂಗಳೂ ಗರಿಷ್ಠ ಮೊತ್ತದ ಆರ್‌.ಡಿ. ಮಾಡಿ.

***

- ಸಜ್ಜನ್‌ ಕೆ.ಸಿ. ಧಾರವಾಡ

ನನ್ನ ಬಾವ ಸರ್ಕಾರಿ ನೌಕರಿಯಿಂದ ನಿವೃತ್ತರಾಗಲಿದ್ದಾರೆ. ನಿವೃತ್ತಿಯಿಂದ ₹ 50 ಲಕ್ಷ ಬರಲಿದೆ. ಇದಕ್ಕೆ ತೆರಿಗೆ ಇದೆಯೇ. ಇದ್ದರೆ ತೆರಿಗೆ ಉಳಿಸಲು ಮಾರ್ಗದರ್ಶನ ಮಾಡಿ.

ಉತ್ತರ: ರಜಾ ಸಂಬಳ ನಗದೀಕರಿಸಿದಾಗ ಸೆಕ್ಷನ್‌ 10 (10ಎಎ) ಆಧಾರದ ಮೇಲೆ ಗರಿಷ್ಠ ₹ 3 ಲಕ್ಷ ವಿನಾಯ್ತಿ ಪಡೆಯಬಹುದು. ಉಳಿದ ರಜಾ ಸಂಬಳದ ಹಣಕ್ಕೆ ಆದಾಯ ತೆರಿಗೆ ಕೊಡಬೇಕಾಗುತ್ತದೆ. ಇದೇ ವೇಳೆ ನಿವೃತ್ತಿಯಿಂದ ಬರುವ ಇತರೆ ಆದಾಯ ಎಲ್ಲವೂ ತೆರಿಗೆ ರಹಿತವಾಗಿದೆ. ಉದಾಹರಣೆಗೆ ಗ್ರಾಚ್ಯುಟಿ ಸೆಕ್ಷನ್ 10(10), ಪಿಎಫ್‌ ಸೆಕ್ಷನ್‌ 10 (II), ಕಮ್ಯುಟೇಷನ್‌ ಸೆಕ್ಷನ್‌ 10 (10) (I).  ನಿವೃತ್ತಿಯಿಂದ ಬರುವ ದೊಡ್ಡ ಮೊತ್ತವನ್ನು  ಮನೆಗೆ ಸಮೀಪದ ಬ್ಯಾಂಕ್‌ನಲ್ಲಿ ಠೇವಣಿ ಇರಿಸಲು ನಿಮ್ಮ ಬಾವನಿಗೆ ಹೇಳಿ. 5 ವರ್ಷಗಳಲ್ಲಿ ದ್ವಿಗುಣ, ಹೆಚ್ಚಿನ ಬಡ್ಡಿದರ, ದೀರ್ಘಾವಧಿ ಬಂಡವಾಳವೃದ್ಧಿ ಹೀಗೆ ಹತ್ತು ಹಲವು ಆಸೆ ತೋರಿಸಿ ಅವರನ್ನು ತಪ್ಪು ದಾರಿಗೆ ಎಳೆಯುವವರಿದ್ದಾರೆ ಜೋಕೆ.

ತಿದ್ದುಪಡಿ: ಕಳೆದವಾರ ಪ್ರಕಟವಾಗಿದ್ದ ಗೀತಾ ಕಾರವಾರ ಇವರ ಉತ್ತರದಲ್ಲಿ ಸೆಕ್ಷನ್‌ 16 ಸ್ಟ್ಯಾಂಡರ್ಡ್‌ ಡಿಡಕ್ಷನ್‌ ₹ 50 ಸಾವಿರ ಹಾಗೂ ಸೆಕ್ಷನ್‌ 80ಟಿಟಿಬಿ Interest and deposits ₹50 ಸಾವಿರ ವಿನಾಯ್ತಿ ಪಡೆದುದನ್ನು ನಮೂದಿಸಿರಲಿಲ್ಲ. ಓದುಗರು ಗಮನಿಸಬೇಕಾಗಿ ವಿನಂತಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು