ನಾನು ನಿವೃತ್ತನಾಗಿದ್ದು, ತೆರಿಗೆ ಪಾವತಿಸಬೇಕಾಗುವ ಪಿಂಚಣಿ ಆದಾಯ ಹೊಂದಿದ್ದೇನೆ. ನಾನು ನನ್ನ ಮನೆ ಮಾರಾಟ ಮಾಡಿ ಬಂದ ಹಣದಿಂದ ಒಂದು ಅಪಾರ್ಟ್ಮೆಂಟ್‌ನಲ್ಲಿ ಬಾಡಿಗೆ ಮನೆ ಪಡೆಯುವ ಅಂದಾಜು ಮಾಡಿದ್ದೇನೆ. ನಾನು ಉದ್ಯೋಗದಲ್ಲಿ ಇದ್ದಾಗ ಬಾಡಿಗೆ ಮನೆಗೆ ಸಂಬಂಧಿಸಿ ತೆರಿಗೆ ವಿನಾಯಿತಿ ಇತ್ತು. ಈಗಲೂ ಅದೇ ಬಗೆಯಲ್ಲಿ, ಬಾಡಿಗೆ ಮನೆಯಲ್ಲಿ ವಾಸ್ತವ್ಯ ಮಾಡಿದರೆ, ಮನೆ ಬಾಡಿಗೆ ಪಾವತಿಗೆ ಯಾವುದಾದರೂ ತೆರಿಗೆ ವಿನಾಯಿತಿ ಇದೆಯೇ?