ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ ಇಲ್ಲಿದೆ..

ಪ್ರಶ್ನೆ: ನಾನು ಪ್ರಸ್ತುತ ಹಳೆಯ ತೆರಿಗೆ ಪದ್ಧತಿಯ ಅಡಿ ಆದಾಯ ತೆರಿಗೆ ಪಾವತಿಸುತ್ತಿದ್ದೇನೆ. ಸರ್ಕಾರ ಏಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾನೂನನ್ನು ಜಾರಿ ಮಾಡಲಿರುವುದರಿಂದ ಸಾಮಾನ್ಯ ತೆರಿಗೆ ಪಾವತಿದಾರನಾಗಿ ನಾನು ಈ ಹೊಸ ನಿಯಮಗಳ ಅಡಿ ಯಾವ ತೆರಿಗೆ ವಿವರದ ನಮೂನೆ (ರಿಟರ್ನ್ಸ್ ಫಾರಂ) ಸಲ್ಲಿಕೆ ಮಾಡಬೇಕಾಗುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಬೇಕಾಗಿದೆ. ಮುಂದಿನ ಜುಲೈ 31ರೊಳಗೆ ವಿವರ ಸಲ್ಲಿಸಬೇಕಾಗಿರುವುದರಿಂದ ಹೊಸ ನಮೂನೆ ಅನ್ವಯಿಸುತ್ತದೆಯೇ ಅಥವಾ ಈ ಹಿಂದೆ ನಾವು ಬಳಸುತ್ತಿದ್ದ ಐಟಿಆರ್ ಬಳಸಬಹುದೇ?

ಇದಲ್ಲದೆ, ನಮಗೆ ಮುಂದೆ ಅನ್ವಯವಾಗುವ ಯಾವೆಲ್ಲ ತೆರಿಗೆ ಬದಲಾವಣೆಗಳನ್ನು ತಿಳಿದುಕೊಳ್ಳಬೇಕು. ನಾನು ಮನೆ ಬಾಡಿಗೆ ಭತ್ಯೆ, ಕಾರಿನ ಉಪಯೋಗಕ್ಕೆ ಸಂಬಂಧಿಸಿ ಕೆಲವು ಅಲ್ಪ ಪ್ರಮಾಣದ ತೆರಿಗೆ, ಗೃಹ ಸಾಲದ ಮೇಲಿನ ಬಡ್ಡಿ, ಮಕ್ಕಳ ಶಿಕ್ಷಣ, ಎನ್ಪಿಎಸ್ ಹೆಚ್ಚುವರಿ ಹೂಡಿಕೆ ಮೊತ್ತದ ಮೇಲಣ ವಿನಾಯಿತಿಯನ್ನೂ ಪಡೆಯುತ್ತಿದ್ದೇನೆ. ಹೀಗಿರುವಾಗ ಮುಂದೆ ಈ ಹೊಸ ನಿಯಮಗಳಡಿ ಅವೂ ಮುಂದುವರಿಯಲಿವೆಯೇ?

–ಸುರೇಶ್ ಕುಮಾರ್, ಮಲ್ಲೇಶ್ವರ, ಬೆಂಗಳೂರು

ಉತ್ತರ: ಆರು ದಶಕಗಳಿಗಿಂತ ಹೆಚ್ಚಿನ ಕಾಲದಿಂದ ಜಾರಿಯಲ್ಲಿರುವ ಆದಾಯ ತೆರಿಗೆ ಕಾನೂನಿನ ಅನೇಕ ತೆರಿಗೆ ಉಳಿತಾಯ ಯೋಜನೆಗಳು ತೆರಿಗೆದಾರರಿಗೆ ಚಿರಪರಿಚಿತ. ಬಹುತೇಕ ಮಂದಿ, ತಮಗೆ ಸಂಬಂಧಿಸಿದ ಸೆಕ್ಷನ್ಗಳ ಹಾಗೂ ನಮೂನೆಗಳ ಬಗ್ಗೆ ಮಾಹಿತಿ ಹೊಂದಿರುವುದು ಉತ್ತಮ ವಿಚಾರ. ಉದಾಹರಣೆಗೆ, ಈಗ ಜಾರಿಯಲ್ಲಿರುವ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಉಳಿತಾಯ ಹೂಡಿಕೆಗಳಿಗೆ, 80ಡಿ ಆರೋಗ್ಯ ವಿಮೆಗೆ, ಸೆಕ್ಷನ್ 10 ಬಾಡಿಗೆ ಭತ್ಯೆ ಮತ್ತು ರಜಾ ಪ್ರವಾಸ ಭತ್ಯೆ ಮುಂತಾದ ವಿನಾಯಿತಿಗಳಿಗೆ, ಸೆಕ್ಷನ್ 24(ಬಿ) ಗೃಹ ಸಾಲದ ಬಡ್ಡಿಗೆ ಸಂಬಂಧಿಸಿವೆ ಮತ್ತು ಸೆಕ್ಷನ್ 115ಬಿಎಸಿ ಹೊಸ ತೆರಿಗೆ ಪದ್ಧತಿಗೆ ಸಂಬಂಧಿಸಿದೆ ಎಂಬುದು ಹೆಚ್ಚಿನವರಿಗೆ ಗೊತ್ತಿದೆ. ಆದರೆ ಏಪ್ರಿಲ್ 1ರಿಂದ ಜಾರಿಗೆ ಬರುವ ಹೊಸ ಆದಾಯ ತೆರಿಗೆ ಕಾಯ್ದೆ ಅಡಿ ಇದೇ ಪ್ರಯೋಜನಗಳಲ್ಲಿ ತುಸು ಬದಲಾವಣೆ ಇದ್ದರೂ ಮೂಲ ಆಶಯದಲ್ಲಿ ಹೆಚ್ಚೇನೂ ಬದಲಾವಣೆಯಾಗಿಲ್ಲ. ಸಂಬಂಧಿಸಿದ ಸೆಕ್ಷನ್ ಸಂಖ್ಯೆಗಳ ಕ್ರಮಾಂಕವನ್ನು ಬದಲಾಯಿಸಲಾಗಿದೆ.

ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಹಳೆಯ ತೆರಿಗೆ ಪದ್ಧತಿ ಮತ್ತು ಹೊಸ ಪದ್ಧತಿಯ ನಡುವೆ ಆಯ್ಕೆ ಮಾಡುವ ಅವಕಾಶವನ್ನು ಪ್ರಸ್ತುತ ಕಾಯ್ದೆಯ ಸೆಕ್ಷನ್ 115ಬಿಎಸಿ ಅಡಿ ಕಲ್ಪಿಸಲಾಗಿದೆ. ಇದೇ ಅಂಶವನ್ನು 2025ರ ನೂತನ ಕಾಯ್ದೆಯ ಸೆಕ್ಷನ್ 202 ಅಡಿಯಲ್ಲಿ ಮುಂದುವರಿಸಲಾಗಿದೆ. ಇದರಂತೆ ಎಲ್ಲ ವಯೋಮಾನದವರಿಗೆ ₹4 ಲಕ್ಷದ ಮೂಲ ಆದಾಯ ವಿನಾಯಿತಿ ಹಾಗೂ ₹12 ಲಕ್ಷದ ತನಕದ ಆದಾಯ ಇರುವವರಿಗೆ ಸೆಕ್ಷನ್ 156 ಅಡಿ ಒಟ್ಟು ತೆರಿಗೆ ರಿಬೇಟ್ ಲಭ್ಯ. ಆದರೆ, ಮುಂದಿನ 2026-27ರ ಆದಾಯ ವರ್ಷಕ್ಕೆ ಸಂಬಂಧಿಸಿ, ಹಳೆಯ ತೆರಿಗೆ ಪದ್ಧತಿ ಕಾನೂನಿನ ಅಡಿ ಮುಂದುವರಿಯುತ್ತಿದ್ದರೂ, ಅದರ ಆಯ್ಕೆ ಒಟ್ಟಾರೆ ಲಾಭದಾಯಕವಾಗಲಿದೆಯೇ ಎನ್ನುವ ಬಗ್ಗೆ ನಿಖರವಾಗಿ ವಿಮರ್ಶಿಸಿ. ಕಾರಣ, ಪ್ರಸ್ತುತ ಇರುವ ಅದೇ ವಿನಾಯಿತಿ ಯೋಜನೆಗಳು ಮೊತ್ತ ಬದಲಾವಣೆಯೊಂದಿಗೆ ಮುಂದುವರಿಯಲಿವೆ. ಉದಾಹರಣೆಗೆ, ಈ ತನಕ ಬೆಂಗಳೂರು ನಗರದವರಿಗೆ ಮನೆ ಬಾಡಿಗೆ ಭತ್ಯೆ ವಿನಾಯಿತಿ ಲೆಕ್ಕ ಹಾಕುವಾಗ ಈಗಾಗಲೇ ಮೆಟ್ರೊ ನಗರಗಳೆಂದು ಪರಿಗಣಿಸಲ್ಪಟ್ಟ ದೆಹಲಿ, ಮುಂಬೈ, ಕೋಲ್ಕತ್ತ ಹಾಗೂ ಚೆನ್ನೈ ನಗರಗಳಿಗೆ ಅನ್ವಯಿಸುವಂತೆ, ಭತ್ಯೆಯ ಮೇಲೆ ಶೇ 40ರ ಬದಲು ಶೇ 50ಕ್ಕೆ ರಿಯಾಯಿತಿಯನ್ನು ಹೆಚ್ಚಿಸಲಾಗಿದೆ. ಹೊಸ ತೆರಿಗೆ ಪದ್ಧತಿ ಎಲ್ಲರಿಗೆ ಅನ್ವಯಿಸುವ ತೆರಿಗೆ ಪದ್ಧತಿ. ಇದರ ಬದಲು, ಹಳೆಯ ತೆರಿಗೆ ಪದ್ಧತಿಯನ್ನೇ ಆಯ್ಕೆ ಮಾಡುವುದಿದ್ದರೆ, ಅದನ್ನು ನಮ್ಮ ಆಯ್ಕೆಯಾಗಿ ವಿವರ ಸಲ್ಲಿಕೆ ಸಮಯದಲ್ಲಿ ಘೋಷಿಸಬೇಕಾಗುತ್ತದೆ.

ಇನ್ನು ಕಾರಿಗೆ ಸಂಬಂಧಿಸಿ - ಉಪಯೋಗಿಸುವ ಕಾರಿನ ಗಾತ್ರಕ್ಕೆ ಅನುಗುಣವಾಗಿ ಮಾಸಿಕ ₹8 ಸಾವಿರ ಅಥವಾ ₹10 ಸಾವಿರದ ತನಕ, ವೇತನದೊಡನೆ ತೆರಿಗೆಗೊಳಪಡಿಸುವ ವಿಶೇಷ ಸೌಲಭ್ಯಗಳ ಮೌಲ್ಯವನ್ನು ಹೆಚ್ಚಿಸಲಾಗಿದೆ. ಅದೇ ರೀತಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿ ವಸತಿ ಭತ್ಯೆ ₹9 ಸಾವಿರ ಹಾಗೂ ಶಿಕ್ಷಣ ಭತ್ಯೆಯನ್ನು ₹3 ಸಾವಿರ ಎಂದು ವಿನಾಯಿತಿ ನಿಗದಿ ಮಾಡಲಾಗಿದೆ.

ನೀವು ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡ ಕಾರಣ ಸೆಕ್ಷನ್ 80ಸಿ, 80ಡಿ, 80ಸಿಸಿಡಿ (1ಬಿ) ಇತ್ಯಾದಿ ಪ್ರಸ್ತುತ ಸೆಕ್ಷನ್ಗಳಿಗೆ ಬದಲಾಗಿ ಹೊಸ ನಿಯಮದ ಸೆಕ್ಷನ್ 123, 124, 126 ಇವನ್ನು ನೋಡಬೇಕಾಗುತ್ತದೆ. ಬಹುತೇಕ ಪ್ರಸ್ತುತ ಮಿತಿಯನ್ನೇ ಮುಂದುವರಿಸಲಾಗಿದೆ.

ತೆರಿಗೆದಾರರ ವಾರ್ಷಿಕ ವೇತನಕ್ಕೆ ಸಂಬಂಧಿಸಿದ ದಾಖಲೆಯಾದ ಫಾರಂ 16 ಇನ್ನು ಮುಂದೆ ಫಾರಂ 130 ಎಂದೂ, ಫಾರಂ 26 ಎಎಸ್ ಬದಲು ಫಾರಂ 168 ಎಂದೂ ಬದಲಾಗಿದೆ. ಹೊಸ ಕಾಯ್ದೆಯಡಿ ಅನ್ವಯವಾಗುವ ವಿವರ ಸಲ್ಲಿಕೆ ಸಂಬಂಧಿತ ಕರಡು ಫಾರ್ಮ್ಗಳನ್ನು ಕೇಂದ್ರ ನೇರ ತೆರಿಗೆ ಮಂಡಳಿ ಈಗಾಗಲೇ ಪ್ರಕಟಿಸಿದ್ದು ಸಾರ್ವಜನಿಕರ ಪ್ರತಿಕ್ರಿಯೆಗೆ ಬಿಡುಗಡೆ ಮಾಡಲಾಗಿದೆ. ಇದರೊಡನೆ ಹೊಸ ನಿಯಮಾವಳಿಗಳೂ ಮುಂದಿನ ಆರ್ಥಿಕ ವರ್ಷ 2026–27ರ ಆದಾಯಕ್ಕೆ ಅನ್ವಯಿಸುವಂತೆ ಹಾಗೂ ನಂತರ ಸಲ್ಲಿಸುವ ವಿವರಗಳಿಗೆ ಅನ್ವಯವಾಗಲಿದೆ. ಹೀಗಾಗಿ 2026ರ ಜುಲೈನಲ್ಲಿ ನೀವು ಪ್ರಸ್ತುತ ಜಾರಿಯಲ್ಲಿ ಇರುವ ಐಟಿಆರ್ ಫಾರ್ಮ್ಗಳನ್ನೇ ಬಳಸಿಕೊಳ್ಳಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.