ನಾನು ಆನ್‌ಲೈನ್ ಗೇಮ್‌ನಲ್ಲಿ ಬಹುಮಾನ ಗೆದ್ದಿದ್ದೇನೆ. ಇದಕ್ಕೆ ಶೇ 30ರಷ್ಟು ತೆರಿಗೆ ಕಡಿತಗೊಂಡು ಉಳಿದ ಮೊತ್ತ ನನ್ನ ಕೈಸೇರಿದೆ. ಇದು ಸರಿಯೇ? ಸ್ವಲ್ಪ ಹಣವನ್ನು ನನ್ನ ಕುಟುಂಬದ ಸದಸ್ಯರ ಖಾತೆಗೆ ವರ್ಗಾಯಿಸಬೇಕೆಂದು ಯೋಚಿಸಿದ್ದೇನೆ. ಉಳಿದ ಮೊತ್ತವನ್ನು ಹೂಡಿಕೆ ಮಾಡಬೇಕೆಂದು ಯೋಚಿಸಿದ್ದೇನೆ. ಈ ಬಗ್ಗೆ ಮಾಹಿತಿ ನೀಡಿ?
ಪ್ರ
ನಾನು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಪಿಎಫ್ ಸೌಲಭ್ಯ ಇದೆ. ಇದರ ಭಾಗವಾಗಿ ವೇತನದಿಂದ ₹4,320 ಪಿಎಫ್ ಬಾಬ್ತು ಕಡಿತವಾಗುತ್ತಿದೆ. ಅಷ್ಟೇ ಮೊತ್ತವನ್ನು ನನ್ನ ಕಂಪನಿಯವರೂ ನನ್ನ ಪಿಎಫ್ ಖಾತೆಯಲ್ಲಿ ಜಮೆ ಮಾಡುತ್ತಿದ್ದಾರೆ. ನಾನು ಈ ಹೂಡಿಕೆಯನ್ನು ಇನ್ನಷ್ಟು ಮಾಡಬೇಕೆಂದಿದ್ದೇನೆ. ನನ್ನ ತಿಂಗಳ ವೇತನ ಸುಮಾರು ₹60 ಸಾವಿರ. ಇದರಲ್ಲಿ ಶೇ 60ರಷ್ಟು ನನಗೆ ಮೂಲ ವೇತನ ಹಾಗೂ ಡಿ.ಎ ಸಿಗುತ್ತದೆ. ನನಗೆ ಇನ್ನೂ 25 ವರ್ಷ ಸೇವಾವಧಿ ಇದೆ. ನಾನು ಉಳಿತಾಯ ಹೆಚ್ಚಿಸುವ ಈ ಬಗೆ ಸೂಕ್ತವೇ ಅಥವಾ ಬೇರೆ ಮಾರ್ಗಗಳಿವೆಯೇ? ಒಂದು ವೇಳೆ ನಾನು ಹೆಚ್ಚುವರಿ ಪಿಎಫ್ ಹೂಡಿಕೆ ಮಾಡುವುದಿದ್ದರೆ ಗರಿಷ್ಠ ಎಷ್ಟು ಮೊತ್ತ ಹೂಡಿಕೆ ಮಾಡಬಹುದು?