ಪಿಸಿಬಿಎಲ್ ಕೆಮಿಕಲ್ ಕಂಪನಿಯ ಷೇರುಮೌಲ್ಯವು ₹474ಕ್ಕೆ ತಲುಪಬಹುದು ಎಂದು ಪ್ರಭುದಾಸ್ ಲೀಲಾಧರ್ ಕ್ಯಾಪಿಟಲ್ ಬ್ರೋಕರೇಕ್ ಕಂಪನಿ ಅಂದಾಜು ಮಾಡಿದೆ. ಕಂಪನಿಯು ಈಚೆಗೆ ತನ್ನ ‘ಹೂಡಿಕೆದಾರರ ದಿನ’ವನ್ನು ಆಯೋಜಿಸಿತ್ತು. ಅಲ್ಲಿ ಕಂಪನಿಯ ಆಡಳಿತದ ಚುಕ್ಕಾಣಿ ಹಿಡಿದವರು, 2029–30ರವರೆಗಿನ ಕಾರ್ಯತಂತ್ರಗಳ ನೀಲನಕ್ಷೆಯನ್ನು ಹೂಡಿಕೆದಾರರ ಮುಂದಿರಿಸಿದ್ದಾರೆ.

ಕಂಪನಿಯು ತನ್ನ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುವ ಬಗ್ಗೆ ವಿವರ ನೀಡಿದೆ. ನ್ಯಾನೊ ಸಿಲಿಕಾನ್ ಹಾಗೂ ಇತರ ಕೆಲವು ಹೆಚ್ಚಿನ ಮೌಲ್ಯದ ಉತ್ಪನ್ನಗಳ ತಯಾರಿಕೆಗೆ ಕಂಪನಿಯು ಕೈಹಾಕಲಿದೆ. ಇದು ಕಂಪನಿಯ ಬೆಳವಣಿಗೆಗೆ ಪ್ರಮುಖವಾಗಿ ನೆರವಿಗೆ ಬರಲಿದೆ ಎಂದು ಪ್ರಭುದಾಸ್ ಲೀಲಾಧರ್ ಅಂದಾಜು ಮಾಡಿದೆ.

ಕಂಪನಿಯು ತನ್ನ ವರಮಾನವನ್ನು ದುಪ್ಪಟ್ಟು ಮಾಡಿಕೊಳ್ಳುವ ಗುರಿಯನ್ನು ಹೊಂದಿದೆ, ತೆರಿಗೆ ನಂತರದ ಲಾಭವನ್ನು (ಪಿಎಟಿ) ಐದು ಪಟ್ಟು ಹೆಚ್ಚು ಮಾಡಿಕೊಳ್ಳುವ ಗುರಿಯನ್ನು ಕೂಡ ಹೊಂದಿದೆ. ಸ್ಪೆಷಾಲಿಟಿ ಕೆಮಿಕಲ್ಗಳಿಂದ ಬರುವ ವರಮಾನದ ಪಾಕು 2024–25ರಲ್ಲಿ ಶೇ 28ರಷ್ಟು ಇರುವುದನ್ನು ಶೇ 45ಕ್ಕೆ ಹೆಚ್ಚಿಸುವ ಗುರಿಯನ್ನು ಅದು ಹೊಂದಿದೆ ಎಂದು ಪ್ರಭುದಾಸ್ ಲೀಲಾಧರ್ ಸಿದ್ಧಪಡಿಸಿರುವ ವರದಿಯಲ್ಲಿ ವಿವರಿಸಲಾಗಿದೆ.

ಕಂಪನಿಯು ತನ್ನ ಸ್ಪೆಷಾಲಿಟಿ ಕೆಮಿಕಲ್ ಉತ್ಪನ್ನಗಳ ವ್ಯಾಪ್ತಿಯನ್ನು ಹಿಗ್ಗಿಸುತ್ತಿದೆ, ಹೆಚ್ಚಿನ ಲಾಭ ಸಿಗುವ ನ್ಯಾನೊ ಸಿಲಿಕಾನ್ನಂತಹ ಉತ್ಪನ್ನಗಳನ್ನು ಕೂಡ ಕಂಪನಿಯು ತಯಾರಿಸಲಿದೆ. ಈ ಎಲ್ಲ ಕ್ರಮಗಳು ಮುಂದಿನ ತಲೆಮಾರಿನ ವಿಶೇಷ ಉತ್ಪನ್ನಗಳ ಕಡೆ ಕಂಪನಿಯು ಮುಖ ಮಾಡಿರುವುದನ್ನು ಹೇಳುತ್ತಿವೆ ಎಂದು ವರದಿಯು ವಿವರಿಸಿದೆ. ಬುಧವಾರದ ವಹಿವಾಟಿನ ಅಂತ್ಯಕ್ಕೆ ಕಂಪನಿಯ ಷೇರುಮೌಲ್ಯವು ₹388 ಆಗಿತ್ತು.

(ಬ್ರೋಕರೇಜ್ ಕಂಪನಿಗಳು ನೀಡುವ ವಿವರ, ಮಾಹಿತಿಗೆ ಪತ್ರಿಕೆ ಹೊಣೆಯಲ್ಲ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.