ಆನೆ ನಡೆದದ್ದೇ ದಾರಿ. ಸೂಚ್ಯಂಕ ತಲುಪಿದ್ದೇ ಗುರಿ ಎಂಬಂತೆ ಭಾರತೀಯ ಷೇರುಪೇಟೆಯ ಹೆಗ್ಗುರುತಾದ ಸಂವೇದಿ ಸೂಚ್ಯಂಕವು ಸರ್ವಕಾಲೀನ ದಾಖಲೆ ಮಟ್ಟವಾದ 21,960 ಅಂಶಗಳನ್ನು ಶುಕ್ರವಾರ ದಿನದ ಮಧ್ಯಾಂತರದಲ್ಲಿ ತಲುಪಿತು. 21,919 ಅಂಶಗಳ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ದಿನದ ಅಂತ್ಯ ಕಂಡಿದೆ.

ವಿಚಿತ್ರವೆಂದರೆ ಸಂವೇದಿ ಸೂಚ್ಯಂಕದ ಎಲ್ಲಾ 30 ಕಂಪೆನಿಗಳು ಒಂದೇ ದಿಕ್ಕಿನಲ್ಲಿ ಸಾಮೂಹಿಕ ವಾಗಿ ಚಲಿಸದೆ ವೈವಿಧ್ಯತೆ ಪ್ರದರ್ಶಿಸುತ್ತಿವೆ. ಈವರೆಗೂ ರಫ್ತು ವಲಯದ ಕಂಪೆನಿಗಳಾದ ಇನ್ಫೊಸಿಸ್, ವಿಪ್ರೊ, ಟಿ.ಸಿ.ಎಸ್, ಟೆಕ್ ಮಹೀಂದ್ರಾ, ಫಾರ್ಮಾ ವಲಯದ ಅರವಿಂದೊ ಫಾರ್ಮಾ, ದಿವೀಸ್ ಲ್ಯಾಬ್, ಡಾಕ್ಟರ್ ರೆಡ್ಡಿ ಲ್ಯಾಬ್, ಗ್ಲೆನ್ ಮಾರ್ಕ್ ಫಾರ್ಮಾ ಕಂಪೆನಿಗಳ ಷೇರು ವಾರದುದ್ದಕ್ಕೂ ಏರಿಕೆ ಕಂಡು ವಿಜೃಂಭಿಸಿ ದವು. ಬ್ಯಾಂಕಿಂಗ್ ಕ್ಷೇತ್ರದ ಷೇರುಗಳು ‘ಎನ್.ಪಿ.ಎ’ ಎಂಬ ನಕಾರಾತ್ಮಕ ಅಂಶದ ಪ್ರಭಾವ ದಿಂದ ಕುಸಿಯುತ್ತಿದ್ದು, ನಿರ್ಲಕ್ಷ್ಯಕ್ಕೊಳಗಾಗಿದ್ದವು.

ಆದರೆ ಶುಕ್ರವಾರ ಐ.ಟಿ ವಲಯ ಮತ್ತು ಫಾರ್ಮಾ ವಲಯದ ಷೇರುಗಳು ಹೆಚ್ಚಿನ ಏರಿಕೆ ಕಂಡಿದ್ದ ಕಾರಣ ಬೃಹತ್ ಪ್ರಮಾಣದ ನಗದೀಕರಣಕ್ಕೊಳಗಾದವು. ಪರ್ಯಾಯವಾಗಿ ಬ್ಯಾಂಕಿಂಗ್ ಹಾಗೂ ಸಾರ್ವಜನಿಕ ವಲಯದ ಕಂಪೆನಿಗಳ ಷೇರು ಒಂದೇ ದಿನದಲ್ಲಿ ಬೃಹತ್ ಏರಿಕೆಯಿಂದ ವಿಜೃಂಭಿಸಿದವು. ಮುಂಬೈ ಷೇರು ವಿನಿಮಯ ಕೇಂದ್ರದ(ಬಿಎಸ್ಇ) ಬ್ಯಾಂಕೆಕ್ಸ್ 689 ಅಂಶಗಳ ಏರಿಕೆ ಪಡೆದರೆ, ಪಿ.ಎಸ್.ಯು ವಲಯದ ಸೂಚ್ಯಂಕ 126 ಅಂಶ ಹಾಗೂ ತೈಲ ಮತ್ತು ಅನಿಲ ವಲಯದ ಸೂಚ್ಯಂಕ 319 ಅಂಶಗಳ ಏರಿಕೆ ಪಡೆಯಿತು. ಇದರಲ್ಲಿ ರಿಲಯನ್್ಸ ಇಂಡಸ್ಟ್ರೀಸ್ ಕಂಪೆನಿಯ ಕೊಡುಗೆಯೂ ಅಪಾರ.

ಪರಿಣಾಮಕಾರಿ ಬೆಳವಣಿಗೆಗಳೇನೂ ಇಲ್ಲದಿ ದ್ದರೂ ಐ.ಸಿ.ಐ.ಸಿ.ಐ ಬ್ಯಾಂಕ್, ಒಂದೇ ವಾರದಲ್ಲಿ ₨200ಕ್ಕೂ ಹೆಚ್ಚಿನ (ಒಂದೇ ದಿನದಲ್ಲಿ ₨67ರಷ್ಟು) ಏರಿಕೆ ಕಂಡಿದೆ. ಆಕ್ಸಿಸ್ ಬ್ಯಾಂಕ್ ವಾರದಲ್ಲಿ ₨175ರಷ್ಟು (ಒಂದೇ ದಿನ ₨ 78) ಮುನ್ನಡೆಗೆ ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡ, ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಖಾಸಗಿ ವಲಯದ ಎಸ್ ಬ್ಯಾಂಕ್, ಕೋಟಕ್ ಬ್ಯಾಂಕ್, ಐ.ಎನ್.ಜಿ ವೈಶ್ಯ, ಎಚ್.ಡಿ.ಎಫ್.ಸಿ ಬ್ಯಾಂಕ್ಗಳ ಸಾಮೂಹಿಕ ಏರಿಕೆ ಅಸಹಜ ಎಂದೆನಿಸಿದೆ.

ಆದರೂ ಪೇಟೆಯು ಅವಕಾಶ ನೀಡಿದಾಗ ಉಪಯೋಗಿಸಿಕೊಳ್ಳಬೇಕೆ ಹೊರತು ಮುಂದೆ ಬರುವ ಸಮಯಕ್ಕಾಗಿ ಕಾಯುತ್ತಾ ಕೂರುವುದು ಸರಿಯಲ್ಲ. ಬೃಹತ್ ಏರಿಕೆ ಕಂಡಾಗ ಪೂರ್ಣವಾಗಿ ಅಲ್ಲದಿದ್ದರೂ ಭಾಗಶಃ ಲಾಭದ ನಗದೀಕರಣ ಮಾಡಿಕೊಂಡು ಬಂಡವಾಳ ಸುರಕ್ಷತೆಗೆ ಆದ್ಯತೆ ನೀಡುವುದು ಸೂಕ್ತ. ಅವಕಾಶಗಳು ತಾತ್ಕಾಲಿಕ. ಮತ್ತೆ ಮತ್ತೆ ಲಭಿಸುತ್ತವೆ ಎನ್ನುವುದಕ್ಕೆ ಐಟಿ, ಫಾರ್ಮಾವಲಯದ ಏರಿಕೆ–ಇಳಿಕೆ, ಬ್ಯಾಂಕಿಂಗ್ ವಲಯದ ಇಳಿಕೆ–ಏರಿಕೆ ಪ್ರಕ್ರಿಯೆ ಉತ್ತಮ ಉದಾಹರಣೆಯಾಗಿವೆ.

ಸಂವೇದಿ ಸೂಚ್ಯಂಕವು ವಾರಾಂತ್ಯದಲ್ಲಿ 21,919ರ ಗರಿಷ್ಠ ಮಟ್ಟದ ಅಂತ್ಯ ಕಂಡು ಪೇಟೆಯ ಬಂಡವಾಳೀಕರಣ ಮೌಲ್ಯವನ್ನು ₨71.33 ಲಕ್ಷ ಕೋಟಿಗೆ ತಲುಪಿಸಿದೆ. ಆದರೂ 2008ರ ಜನವರಿ 10ರಂದು 21,206ರ ದಾಖಲೆ ನಿರ್ಮಿಸಿದ್ದ ಸಂವೇದಿ ಸೂಚ್ಯಂಕ, ಆಗ ಇದ್ದ ₨71.41 ಲಕ್ಷ ಕೋಟಿ ಬಂಡವಾಳೀಕರಣ ಮೌಲ್ಯದ ಮಟ್ಟವನ್ನು ತಲುಪಲು ಈಗ ಅಸಾಧ್ಯ ವಾಗಿದೆ. ಇದಕ್ಕೆ ಮುಖ್ಯ ಕಾರಣ 2008ರಲ್ಲಿ ಎಲ್ಲಾ ವಲಯದ ಕಂಪೆನಿ ಷೇರುಗಳು ಚಟುವಟಿಕೆ ಯಿಂದ ಉತ್ತುಂಗದಲ್ಲಿದ್ದವು. ಆದರೆ ಈಗ ಚಟುವಟಿಕೆ ಕೆಲವೇ ಷೇರುಗಳಿಗೆ ಸೀಮಿತವಾಗಿದೆ.

ಒಟ್ಟಿನಲ್ಲಿ ವಾರದಲ್ಲಿ 799 ಅಂಶಗಳ ಏರಿಕೆ ಕಂಡ ಸಂವೇದಿ ಸೂಚ್ಯಂಕದ ಹಿಂದೆ ವಿದೇಶೀ ವಿತ್ತೀಯ ಸಂಸ್ಥೆಗಳು ಹರಿಸಿದ ₨4,971 ಕೋಟಿ ಹಣದ ಒಳಹರಿವು ಮೂಲ ಕಾರಣವಾಗಿದೆ. ಆದರೆ, ಸ್ವದೇಶಿ ವಿತ್ತೀಯ ಸಂಸ್ಥೆಗಳು ₨216 ಕೋಟಿಯಷ್ಟು ಮೌಲ್ಯದ ಷೇರುಗಳನ್ನು ಮಾರಾಟ ಮಾಡಿವೆ. ಇದರಿಂದಾಗಿ ಪೇಟೆಯ ಬಂಡವಾಳ ₨ 68.93 ಲಕ್ಷ ಕೋಟಿಯಿಂದ ₨ 71.33 ಲಕ್ಷ ಕೋಟಿಗೆ ಹೆಚ್ಚಿದೆ.

ಹೊಸ ಷೇರಿನ ವಿಚಾರ
*ಲೋಹಾ ಇಸ್ಪಾಟ್ ಲಿಮಿಟೆಡ್ ಕಂಪೆನಿಯು ಮಾರ್ಚ್ 11ರಿಂದ 20ರವರೆಗೂ ಪ್ರತಿ ಷೇರಿಗೆ ₨77ರಿಂದ ₨ 80ರ ಅಂತರದಲ್ಲಿ ಷೇರುಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಿದೆ. ಷೇರುಗಳಿಗೆ 175 ಹಾಗೂ ಅವುಗಳ ಗುಣಕದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

*ಕೊಲ್ಕತ್ತ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿರುವ ಶ್ರೀ ಹನುಮಾನ್ ಷುಗರ್ ಅಂಡ್ ಇಂಡಸ್ಟ್ರೀಸ್ ಲಿ., ಮಾ. 12ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್ಇ) ‘ಟಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆ ಯಾಗಲಿದೆ.

*ದೆಹಲಿ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿರುವ ಇಟಿಟಿ ಲಿ., ಕಂಪೆನಿಯು ಮಾ. 12ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ‘ಟಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆ ಯಾಗಲಿದೆ.

*ಸಿ. ವಿ. ಷಿಪ್ಪಿಂಗ್ ಕಾರ್ಪೊರೇಷನ್ ಲಿ. ಇತ್ತೀಚೆಗೆ ಪ್ರತಿ ಷೇರಿಗೆ ₨25ರಂತೆ ಸಾರ್ವಜನಿಕ ಷೇರು ವಿತರಣೆ ಮಾಡಿದ್ದು, ಈ ಷೇರುಗಳು ಮಾ. 6ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ‘ಎಂ.ಟಿ’ ವಿಭಾಗದಲ್ಲಿ ಆರು ಸಾವಿರ ಷೇರುಗಳ ವಹಿವಾಟು ಗುಚ್ಚದೊಂದಿಗೆ ವ್ಯವಹಾರಕ್ಕೆ ನೋಂದಾಯಿಸಿಕೊಂಡಿವೆ.

ಲಾಭಾಂಶ ವಿಚಾರ
*ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರತಿ ಷೇರಿಗೆ ₨15 ಲಾಭಾಂಶ ಘೋಷಿಸಲಿದೆ. (ನಿ.ದಿ. 13.3.14).
*ಹ್ಯಾವೆಲ್್ಸ ಇಂಡಿಯಾ ಮಾ. 14 ರಂದು ಪರಿಶೀಲಿಸಲಿರುವ ಲಾಭಾಂಶಕ್ಕೆ ಮಾರ್ಚ್ 20 ನಿಗದಿತ ದಿನವಾಗಿದೆ.
*ಸುಂದರಂ ಫಾಸ್್ಟನರ್್ಸ ಲಿ. 18 ರಂದು ಲಾಭಾಂಶ ವಿತರಣೆ ಪರಿಶೀಲಿಸಲಿದ್ದು ಮಾ. 25 ನಿಗದಿತ ದಿನವಾಗಿದೆ.
ಬೋನಸ್ ಷೇರು ವಿಚಾರ

ಪ್ರೀತಿ ಮರ್ಕಂಟೈಲ್ ಕಂಪೆನಿ ಲಿ., ಮಧ್ಯಮ ಶ್ರೇಯಾಂಕದ ಕಂಪೆನಿ, ವಿತರಿಸಲಿರುವ 8:10ರ ಅನುಪಾತದ ಬೋನಸ್ಗೆ ಮಾರ್ಚ್ 15 ನಿಗದಿತ ದಿನವಾಗಿದೆ. ಈ ಕಂಪೆನಿಯ ಬೆಲೆ ಒಂದು ವರ್ಷದಲ್ಲಿ ₨99.55ರಿಂದ ಈಗಿನ ₨790ರ ಗರಿಷ್ಠ ಬೆಲೆ ತಲುಪಿದೆ. ಲಾಭದ ನಗದೀಕರಣಕ್ಕೆ ಉತ್ತಮ ಅವಕಾಶ ಕಲ್ಪಿಸಿದೆ.

ಹಕ್ಕಿನ ಷೇರು ವಿಚಾರ
*ಐಎಲ್ ಅಂಡ್ ಎಫ್ಎಸ್ ಟ್ರಾನ್್ಸಪೋ ರ್ಟೇಷನ್ ನೆಟ್ವರ್ಕ್ಸ್ ಕಂಪೆನಿ 27:100 ಅನುಪಾತದಲ್ಲಿ ಷೇರು ವಿತರಿಸಲಿದೆ. ಪ್ರತಿ ಷೇರಿಗೆ ₨100ರಂತೆ ವಿತರಿಸಲಿರುವ ಈ ಹಕ್ಕಿನ ಷೇರಿಗೆ ಮಾರ್ಚ್ 14 ನಿಗದಿತ ದಿನವಾಗಿದೆ.
*ಟಾಟಾ ಪವರ್ ಲಿ., ಕಂಪೆನಿ ಮಾ. 8ರಂದು ಹಕ್ಕಿನ ಷೇರು ವಿತರಣೆ ಪರಿಶೀಲಿಸಲಿದೆ.

22ನೇ ಶನಿವಾರ ವಿಶೇಷ
ಷೇರು ವಿನಿಮಯ ಕೇಂದ್ರದ ಸಂಪೂರ್ಣ ಮಾಹಿತಿಯನ್ನು ಸಮಾನಾಂತರವಾಗಿ ಆಪತ್ಕಾಲ ದಲ್ಲಿ ಮಾಹಿತಿಗಳನ್ನು ಮತ್ತೆ ಪಡೆಯಲು ಸ್ಥಾಪಿತ ವಾಗಿರುವ ತಾಣದಿಂದ, ಎಲ್ಲವೂ ಸರಿಯಾಗಿದೆ ಎಂದು ಖಾತ್ರಿಪಡಿಸಲೋಸುಗ ಇದೇ ತಿಂಗಳ 22ರ ಶನಿವಾರದಂದು ಮುಂಜಾನೆ 11 ರಿಂದ ಮಧ್ಯಾಹ್ನ 1.05ರವರೆಗೆ ವಹಿವಾಟು ನಡೆಸಲು ನಿರ್ಧರಿಸಲಾಗಿದೆ. ಈ ದಿನದ ವಹಿವಾಟನ್ನು ಪ್ರತ್ಯೇಕ ಚುಕ್ತಾ ಚಕ್ರದಲ್ಲಿ ಚುಕ್ತಾ ಮಾಡಲಾ ಗುವುದು.

ಎಸ್ಸಿ ಬ್ಯಾಂಕ್ ಐಡಿಆರ್
ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ನ ‘ಇಂಡಿ ಯನ್ ಡೆಪಾಜಿಟರಿ ರೆಸಿಟ್’ಗಳಿಗೆ (ಐಡಿಆರ್) ಲಂಡನ್ನಲ್ಲಿ ಪ್ರಕಟವಾಗಿರುವ ಲಾಭಾಂಶ (ಅಂತಿಮ) ಪ್ರತಿ ಷೇರಿಗೆ 57.20 ಅಮೆರಿಕನ್ ಡಾಲರ್ನ ಶೇ 10ರಷ್ಟನ್ನು ಪಡೆಯಲು 14ನೇ ಮಾರ್ಚ್ ನಿಗದಿತ ದಿನವಾಗಿದೆ. ಐಡಿಆರ್ ಹೊಂದಿರುವವರಿಗೆ 15ನೇ ಮೇ ಒಳಗೆ ಲಾಭಾಂಶ ಸಂದಾಯವಾಗಲಿದೆ. 10 ಐಡಿಆರ್ ಒಂದು ಷೇರಿಗೆ ಸಮಾನವಾಗಿದೆ.

ವಾರದ ವಿಶೇಷ
ಸಣ್ಣ ಹೂಡಿಕೆಯಾಗಿ ಷೇರುಗಳ ‘ಎಸ್ಐಪಿ’
ಭಾರತೀಯ ಷೇರುಪೇಟೆಗಳು ಹೆಚ್ಚು ಏರಿಳಿತದ ಪ್ರಭಾವಕ್ಕೆ ಒಳಪಟ್ಟಿವೆ. ಇದರ ಹಿಂದೆ ಎರಡು ಪ್ರಮುಖವಾದ ಕಾರಣಗಳಿವೆ. ಮೊದಲನೆಯದು, ವಿಶ್ವದೆಲ್ಲೆಡೆ ಷೇರುಪೇಟೆಗಳು ಅಸ್ಥಿರತೆಯಿಂದ ಕೂಡಿರುವ ಕಾರಣ ಅದರ ಪ್ರಭಾವವೂ ಸಹ ಭಾರತೀಯ ಷೇರುಪೇಟೆಗಳಲ್ಲಿ ಬಿಂಬಿತವಾಗಿದೆ.

ಮತ್ತೊಂದು ಪ್ರಮುಖ ಕಾರಣವೆಂದರೆ ವಿತ್ತೀಯ ಸಂಸ್ಥೆಗಳೇ ಚಟುವಟಿಕೆಯಲ್ಲಿ ಹೆಚ್ಚಾಗಿ ಭಾಗವಹಿಸುತ್ತಿರುವುದು. ಇವು ಷೇರು ಖರೀದಿ ಮಾಡಿದರೆ, ಕೊಳ್ಳುವ ಗಾತ್ರದ ಕಾರಣ ಅಥವಾ ಮಾರಾಟ ಮಾಡಿದರೆ ಆ ಗಾತ್ರದ ಕಾರಣದಿಂದಾಗಿಯೂ ಪೇಟೆಗಳು ಏರಿಳಿತದ ಒತ್ತಡಕ್ಕೆ ಒಳಗಾಗುತ್ತವೆ. ಮತ್ತು ಪೇಟೆಯಲ್ಲಿನ ಷೇರುಗಳು, ಸಣ್ಣ ಹೂಡಿಕೆದಾರರ ಅಭಾವದ ಕಾರಣ ಹೆಚ್ಚು ಹರಿದಾಡುವುದೂ ಹೆಚ್ಚಿನ ಏರಿಳಿತಕ್ಕೆ ಕಾರಣವಾಗಿದೆ.

ಇಂತಹ ವಾತಾವರಣದಲ್ಲಿ ದೀರ್ಘಕಾಲೀನ ಅವಧಿಯ ಹೂಡಿಕೆ ಗುಚ್ಛವನ್ನು ಹೇಗೆ ನಿರ್ಮಿಸುವುದೆಂಬುದು ಸಾಮಾನ್ಯ ಹೂಡಿಕೆದಾರರ ಮುಂದಿರುವ ಪ್ರಶ್ನೆಯಾಗಿದೆ. ಈ ದಿಸೆಯಲ್ಲಿ ಮ್ಯುಚುವಲ್ ಫಂಡ್ಗಳ ‘ಎಸ್ಐಪಿ’ (ಸಿಪ್) ಮಾದರಿಯಲ್ಲಿ ಷೇರುಗಳನ್ನು ಖರೀದಿಸಿ ಹೂಡಿಕೆ ಗುಚ್ಚವನ್ನು ಸಮೃದ್ಧವಾಗಿ ಬೆಳೆಸಬಹುದಾಗಿದೆ.

ಇದಕ್ಕೆ ಅನುಸರಿಸಬಹುದಾದ ರೀತಿ ಇಂತಿದೆ;
ಮೊದಲು ಹೂಡಿಕೆ ಮಾಡಬಹುದಾದ ಮಾಸಿಕ ಕಂತನ್ನು ನಿಗದಿಪಡಿಸಿಕೊಳ್ಳಬೇಕು. ನಂತರ ಮಾಸಿಕ ಹಣಕ್ಕನುಗುಣವಾಗಿ 5ರಿಂದ 10 ಸುಭದ್ರ ಕಂಪೆನಿಗಳ ಸಮೂಹ ಪಟ್ಟಿ ಸಿದ್ದಪಡಿಸಿಕೊಳ್ಳಿರಿ. ಈ ಕಂಪೆನಿಗಳು ಸುಭದ್ರ ಮೂಲಭೂತಗಳನ್ನು ಹೊಂದಿರಬೇಕು. ಹೂಡಿಕೆದಾರ ಸ್ನೇಹಿಯಾಗಿರಬೇಕು. ಉತ್ತಮ ಲಾಭಾಂಶ ಹಾಗೂ ಷೇರುಪೇಟೆಯಲ್ಲಿ ಚಟುವಟಿಕೆ ಭರಿತವಾದ ಬೃಹತ್ ಕಂಪೆನಿಗಳಾಗಿರಬೇಕು.

ವೈವಿಧ್ಯಮಯವಾದ ವಿಭಿನ್ನ ವಲಯಗಳಲ್ಲಿರಬೇಕು. ಪ್ರತಿ ತಿಂಗಳು ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವಾಗ ಈ 5 ಅಥವಾ 10 ಕಂಪೆನಿಗಳಲ್ಲಿ ಹಿಂದಿನ ತಿಂಗಳ ಬೆಲೆಗಿಂತ ಹೆಚ್ಚು ಕುಸಿತ ಕಂಡಿರುವ ಕಂಪೆನಿಯನ್ನು ಆಯ್ಕೆ ಮಾಡಿಕೊಂಡು ಆ ಕಂಪೆನಿಯಲ್ಲಿ ಯಾವುದೇ ನಕಾರಾತ್ಮಕ ಬೆಳವಣಿಗೆ ಇಲ್ಲವೆಂದು ದೃಢಪಡಿಸಿಕೊಂಡು; ಒಂದೆರಡು ಕಂಪೆನಿಗಳ ಷೇರುಗಳನ್ನು ಖರೀದಿಸಬೇಕು. ಇದೇ ರೀತಿ ಪ್ರತಿ ತಿಂಗಳೂ ಈ ಸಮೂಹ ಕಂಪೆನಿಗಳಲ್ಲಿ ಇಳಿಕೆ ಕಂಡಿರುವ ಷೇರುಗಳನ್ನು ವ್ಯವಸ್ಥಿತವಾಗಿ ಖರೀದಿಸುವಂತಹ ಹೂಡಿಕೆಯಿಂದ ನಿಮ್ಮ ಹೂಡಿಕೆಯ ಗುಚ್ಛವನ್ನು ಮೌಲ್ಯಭರಿತವಾಗಿಸಿ ಬೆಳೆಸಬಹುದು.

98863&13380
(ಮಧ್ಯಾಹ್ನ 4.30ರ ನಂತರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.