ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಹೊಸ ವಿಳಾಸ ಹುಡುಕುತ್ತಿದೆ ಫ್ಲಿಪ್‌ ಕಾರ್ಟ್‌?

Last Updated 17 ಜನವರಿ 2020, 10:36 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮೂಲದ ಇ–ಕಾಮರ್ಸ್‌ ದಿಗ್ಗಜ ಫ್ಲಿಪ್‌ಕಾರ್ಟ್‌ ತನ್ನೆಲ್ಲ ಕಾರ್ಯನಿರ್ವಹಣೆಗಾಗಿ ಬೆಂಗಳೂರಿನಲ್ಲಿ ಸೂಕ್ತ, ವಿಶಾಲವಾದ ಸ್ಥಳವೊಂದನ್ನು ಹುಡುಕುತ್ತಿದೆ.

ಈ ಕುರಿತು ಉನ್ನತ ಮೂಲಗಳ ಮಾಹಿತಿ ಉಲ್ಲೇಖಿಸಿ ‘ಡೆಕ್ಕನ್‌ ಹೆರಾಲ್ಡ್‌’ ವರದಿ ಮಾಡಿದೆ.

ಸದ್ಯ ಫ್ಲಿಪ್‌ಕಾರ್ಟ್‌ ತನ್ನ ಕಾರ್ಯ ಚಟುವಟಿಕೆಗಾಗಿ ಬೆಂಗಳೂರು ಹೊರ ವಲಯದ ರಿಂಗ್‌ ರಸ್ತೆಯಲ್ಲಿರುವ ‘ಎಂಬಸಿ ಟೆಕ್‌ ವಿಲೇಜ್‌’ನಲ್ಲಿ 8 ಲಕ್ಷ ಚದರಡಿಯ ವಿಶಾಲವಾದ ಕಚೇರಿಯನ್ನು ಹೊಂದಿದೆ. ಇಲ್ಲಿ 8 ಸಾವಿರ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇ ಕಾಮರ್ಸ್‌ ಕ್ಷೇತ್ರ ಬೆಳೆದಂತೆಲ್ಲ ತನ್ನ ಸಾಮರ್ಥ್ಯ ಹಿಗ್ಗಿಸಿಕೊಳ್ಳುತ್ತಿರುವ ಫ್ಲಿಪ್‌ಕಾರ್ಟ್‌ ಸದ್ಯ ಬೆಂಗಳೂರು ಹೊರವಲಯದಲ್ಲಿ 110 ಎಕರೆಯಷ್ಟು ದೊಡ್ಡ ಜಾಗವನ್ನು ಅರಸುತ್ತಿದೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಫ್ಲಿಪ್‌ ಕಾರ್ಟ್‌ನ ವಕ್ತರಾರನ್ನು ಸಂಪರ್ಕಿಸಲಾಯಿತಾದರೂ, ಅವರು ಏನನ್ನೂ ಹೇಳಲು ನಿರಾಕರಿಸಿದರು. ಆದರೆ, ವಾಣಿಜ್ಯ ಮತ್ತು ಉದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಂಗತಿಯನ್ನು ಖಚಿತಪಡಿಸಿದ್ದಾರೆ. ಜಾಗಕ್ಕಾಗಿ ಫ್ಲಿಪ್‌ಕಾರ್ಟ್‌ ಇನ್ನಷ್ಟೇ ಪ್ರಸ್ತಾವನೆ ಸಲ್ಲಿಸಬೇಕಿದೆ ಎಂದು ಹೇಳಿದ್ದಾರೆ.

‘ದೇವನಹಳ್ಳಿ ಮತ್ತು ಸುತ್ತಲ ಪ್ರದೇಶದಲ್ಲಿ ಬೃಹತ್‌ ಜಾಗಕ್ಕಾಗಿ ಫ್ಲಿಪ್‌ಕಾರ್ಟ್‌ ಹುಡುಕಾಟ ಆರಂಭಿಸಿದೆ. ಈಗಾಗಲೇ ಹಲವು ಜಾಗಗಳ ಬಗ್ಗೆ ಫ್ಲಿಪ್‌ಕಾರ್ಟ್‌ಗೆ ತಿಳಿಸಿದ್ದೇವೆ. ಜಾಗ ಗುರುತು ಮಾಡಿಕೊಂಡ ನಂತರ ಅವರು ಸರ್ಕಾರಕ್ಕೆ ಔಪಚಾರಿಕ ಪ್ರಸ್ತಾವನೆ ಸಲ್ಲಿಸಲಿದ್ದಾರೆ,‘ ಎಂದು ವಾಣಿಜ್ಯ ಮತ್ತು ಉದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತ ಅವರು ತಿಳಿಸಿದ್ದಾರೆ.

ಅಮೆರಿಕ ಮೂಲದ ಇ–ಕಾಮರ್ಸ್‌ ದೈತ್ಯ ವಾಲ್‌ಮಾರ್ಟ್‌ ಎರಡು ವರ್ಷಗಳ ಹಿಂದಷ್ಟೇ ಫ್ಲಿಪ್‌ಕಾರ್ಟ್‌ ಅನ್ನು 16 ಶತಕೋಟಿ ಡಾಲರ್‌ಗೆ ಖರೀದಿಸಿದೆ. ಆಗಿನಿಂದಲೂ ಫ್ಲಿಪ್‌ ಕಾರ್ಟ್‌ ಭಾರತದಲ್ಲಿ ತನ್ನ ವಹಿವಾಟನ್ನು ಹೆಚ್ಚಿಸಿಕೊಳ್ಳಲು ಸತತ ಪ್ರಯತ್ನ ನಡೆಸುತ್ತಿದೆ. ದೇಶದ ಹಲವೆಡೆಗಳಲ್ಲಿ ಗೋದಾಮು, ಲಾಜಿಸ್ಟಿಕ್‌ ಪಾರ್ಕ್‌ಗಳ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT