ಬೆಂಗಳೂರು: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಭಾರತದ ಷೇರುಪೇಟೆಗಳಲ್ಲಿ ಲಾಭ ಗಳಿಕೆಗೆ ಹೆಚ್ಚು ಗಮನ ಹರಿಸಿದ್ದಾರೆ. ಹೀಗಾಗಿ ಬಂಡವಾಳ ಹೊರಹರಿವು ಹೆಚ್ಚಾಗುತ್ತಲೇ ಇದೆ.

ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್‌ನಲ್ಲಿ ಇರುವ ಮಾಹಿತಿಯ ಪ್ರಕಾರ, ಜನವರಿ 2 ರಿಂದ 27ರವರೆಗಿನ ಅವಧಿಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹29,232 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

‘ಮಾರುಕಟ್ಟೆ ಮೌಲ್ಯ ಕಡಿಮೆ ಇರುವ ಚೀನಾ, ಹಾಂಗ್‌ಕಾಂಗ್, ದಕ್ಷಿಣ ಕೊರಿಯಾ ಮತ್ತು ಥಾಯ್ಲೆಂಡ್ ಷೇರುಪೇಟೆಗಳಲ್ಲಿ ಬಂಡವಾಳ ಹೂಡಿಕೆ ಮಾಡುವುದನ್ನು ವಿದೇಶಿ ಹೂಡಿಕೆದಾರರು ಮುಂದುವರಿಸಿದ್ದಾರೆ. ಅದಾನಿ ಸಮೂಹದ ವಿರುದ್ಧದ ವರದಿಯು ಷೇರುಪೇಟೆಯಲ್ಲಿ ನಕಾರಾತ್ಮಕ ವಹಿವಾಟಿಗೆ ಕಾರಣವಾಗುತ್ತಿದೆ. ಇದರಿಂದಾಗಿ ಜನವರಿ 27ರಂದು ಒಂದೇ ದಿನ ₹5,977 ಕೋಟಿಗೂ ಅಧಿಕ ಮೊತ್ತದ ಷೇರುಗಳನ್ನು ಅವರು ಮಾರಾಟ ಮಾಡಿದ್ದಾರೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ದೇಶಿ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ನಿರಂತರವಾಗಿ ಷೇರುಗಳನ್ನು ಖರೀದಿಸುತ್ತಿದ್ದು, ಷೇರುಪೇಟೆಯನ್ನು ಹೆಚ್ಚಿನ ಕುಸಿತ ಕಾಣದಂತೆ ತಡೆಯುತ್ತಿದ್ದಾರೆ.

ಜನವರಿ 2 ರಿಂದ 27ರವರೆಗಿನ ವಹಿವಾಟು ಅವಧಿಯಲ್ಲಿ ₹23,390 ಕೋಟಿ ಮೌಲ್ಯದ ಷೇರುಗಳನ್ನು ಖರೀದಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.