ಮುಂಬೈ,: ಚೀನಾ ಹೊರತುಪಡಿಸಿ ಇತರ ದೇಶಗಳ ಆಮದುಗಳ ಮೇಲೆ ವಿಧಿಸಲಾಗಿರುವ ಪ್ರತೀಕಾರ ಸುಂಕಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಜುಲೈ 9ರವರೆಗೆ 90 ದಿನಗಳ ವಿರಾಮ ಘೋಷಿಸಿದ ಬಳಿಕ ಭಾರತೀಯ ಷೇರುಪೇಟೆ ಚೇತರಿಕೆ ಕಂಡಿದೆ.

ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ಕಂಡವು.

30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 1,210 ಅಂಶಗಳಷ್ಟು ಜಿಗಿದು 75,057ಕ್ಕೆ ತಲುಪಿತ್ತು. ಎನ್ಎಸ್ಇ ನಿಫ್ಟಿ 388.35 ಅಂಶ ಜಿಗಿದು 22,787ಕ್ಕೆ ತಲುಪಿತ್ತು.

ಶ್ವೇತಭವನದ ಕಾರ್ಯಕಾರಿ ಆದೇಶಗಳ ಪ್ರಕಾರ, ಈ ವರ್ಷದ ಜುಲೈ 9ರವರೆಗೆ ಭಾರತದ ಮೇಲಿನ ಹೆಚ್ಚುವರಿ ಸುಂಕಗಳನ್ನು 90 ದಿನಗಳವರೆಗೆ ಸ್ಥಗಿತಗೊಳಿಸುವುದಾಗಿ ಅಮೆರಿಕ ಘೋಷಿಸಿದೆ.

ಏಪ್ರಿಲ್ 2ರಂದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕಕ್ಕೆ ಸರಕುಗಳನ್ನು ರಫ್ತು ಮಾಡುವ ಸುಮಾರು 60 ದೇಶಗಳ ಮೇಲೆ ಪ್ರತೀಕಾರ ಸುಂಕಗಳನ್ನು ವಿಧಿಸಿದ್ದರು.

ಸೆನ್ಸೆಕ್ಸ್ ಗುಚ್ಛದ ಟಾಟಾ ಮೋಟಾರ್ಸ್, ಸನ್ ಫಾರ್ಮಾ, ಟಾಟಾ ಸ್ಟೀಲ್, ಎಚ್ಸಿಎಲ್ ಟೆಕ್, ಟೆಕ್ ಮಹೀಂದ್ರ, ಬಜಾಜ್ ಫಿನ್ಸರ್ವ್, ಅದಾನಿ ಪೋರ್ಟ್ಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಾಭ ಗಳಿಸಿವೆ.

ಏಷ್ಯನ್ ಪೇಂಟ್ಸ್ ಮತ್ತು ನೆಸ್ಲೆ ಮಾತ್ರ ಹಿನ್ನಡೆ ಅನುಭವಿಸಿವೆ.

ಏಷ್ಯಾ ಮಾರುಕಟ್ಟೆಗಳ ಪೈಕಿ ಟೋಕಿಯೊದ ನಿಕ್ಕಿ 225 ಸೂಚ್ಯಂಕ ಮತ್ತು ದಕ್ಷಿಣ ಕೊರಿಯಾದ ಕೋಸ್ಪಿ ಕುಸಿತದೊಂದಿಗೆ ವಹಿವಾಟು ನಡೆಸಿದರೆ, ಶಾಂಘೈ ಎಸ್ಎಸ್ಇ ಕಾಂಪೋಸಿಟ್ ಸೂಚ್ಯಂಕ ಮತ್ತು ಹಾಂಗ್ ಕಾಂಗ್ನ ಹ್ಯಾಂಗ್ ಸೆಂಗ್ ಸ್ವಲ್ಪ ಏರಿಕೆಯಾಗಿವೆ. ಟೋಕಿಯೊದ ನಿಕ್ಕಿ 225 ಸೂಚ್ಯಂಕವು ಶೇ 4ರಷ್ಟು ಕುಸಿದಿದೆ.

ಗುರುವಾರ ಅಮೆರಿಕದ ಷೇರುಪೇಟೆಯಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ನಾಸ್ಡಾಕ್ ಕಾಂಪೋಸಿಟ್ ಶೇ 4.31, ಎಸ್ ಅಂಡ್ ಪಿ 500 ಶೇ 3.46 ಮತ್ತು ಡೌ ಜೋನ್ಸ್ ಇಂಡಸ್ಟ್ರಿಯಲ್ ಸರಾಸರಿ ಶೇ 2.50ರಷ್ಟು ಕುಸಿತ ಕಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.