ಮುಂಬೈ: ಐದನೇ ವಹಿವಾಟಿನ ದಿನವೂ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಏರಿಕೆ ದಾಖಲಿಸಿದೆ.

ಮಂಗಳವಾರದ ವಹಿವಾಟು ತೀವ್ರ ಏರಿಳಿತದಿಂದ ಕೂಡಿತ್ತು. ಹಣಕಾಸು ಕಂಪನಿಗಳ ಷೇರುಗಳಲ್ಲಿನ ಗಳಿಕೆಯ ಫಲವಾಗಿ ಸೂಚ್ಯಂಕವು ಅಂತಿಮವಾಗಿ 187 ಅಂಶ ಏರಿಕೆ ಕಂಡು 36,674 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ 36 ಅಂಶ ಏರಿಕೆ ಕಂಡು 10,799 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ಬಜಾಜ್ ಫೈನಾನ್ಸ್ ಗರಿಷ್ಠ ಗಳಿಕೆ (ಶೇ 8) ಕಂಡಿತು. ಇಂಡಸ್ ಇಂಡ್ ಬ್ಯಾಂಕ್, ಇನ್ಫೊಸಿಸ್, ಐಸಿಐಸಿಐ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್ ಷೇರುಗಳು ಬೆಲೆ ಏರಿಕೆಯಲ್ಲಿ ನಂತರದ ಸ್ಥಾನದಲ್ಲಿದ್ದವು.

ಜಾಗತಿಕ ಮಾರುಕಟ್ಟೆಗಳಲ್ಲಿನ ನಿರುತ್ಸಾಹದಿಂದ ದೇಶಿ ಹೂಡಿಕೆದಾರರು ವಿಚಲಿತರಾಗಿಲ್ಲ. ವಿದೇಶಿ ನಿಧಿಗಳ ನಿರಂತರ ಹರಿವು ಮತ್ತು ಉತ್ತಮ ಮುಂಗಾರು ಮಳೆಯಂತಹ ಸಕಾರಾತ್ಮಕ ವಿದ್ಯಮಾನಗಳತ್ತ ಅವರು ಗಮನ ಹರಿಸಿದ್ದಾರೆ ಎಂದು ವಹಿವಾಟುದಾರರು ತಿಳಿಸಿದ್ದಾರೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೋಮವಾರ ₹ 348.35 ಕೋಟಿ ಮೊತ್ತದ ಷೇರುಗಳನ್ನು ಖರೀದಿಸಿದ್ದಾರೆ. ಷೇರುಪೇಟೆಯಲ್ಲಿನ ಗಳಿಕೆಗೆ ಕೋವಿಡ್ ಪ್ರಕರಣಗಳಲ್ಲಿನ ಹೆಚ್ಚಳವು ಕೆಲಮಟ್ಟಿಗೆ ಕಡಿವಾಣ ವಿಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.