ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Sensex Hits All time high | ಸಾರ್ವಕಾಲಿಕ ಗರಿಷ್ಠ ಅಂಶ ದಾಖಲಿಸಿದ ಸೆನ್ಸೆಕ್ಸ್‌

Published 21 ಜೂನ್ 2023, 5:36 IST
Last Updated 21 ಜೂನ್ 2023, 5:36 IST
ಅಕ್ಷರ ಗಾತ್ರ

ಮುಂಬೈ: ಬಾಂಬೆ ಷೇರು ವಿನಿಮಯ ಕೇಂದ್ರದ (BSE) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಬುಧವಾರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತು. ಸೆನ್ಸೆಕ್ಸ್‌ 63,588.31 ಅಂಶಗಳಿಗೆ ಏರಿಕೆಯಾಗಿದೆ.

ಬುಧವಾರ ಆರಂಭಿಕ ಹಂತದ ವಹಿವಾಟಿನ ವೇಳೆ 146 ಅಂಶಗಳಷ್ಟು ಏರಿಕೆಯಾಗಿ 3,473.70ಕ್ಕೆ ತಲುಪಿತು. ಬಳಿಕ 260.61 ಅಂಶಗಳಷ್ಟು ಏರಿಕೆ ಕಂಡು 63,588.31ಕ್ಕೆ ತಲುಪಿ ಐತಿಹಾಸಿಕ ಗರಿಷ್ಠ ದಾಖಲಿಸಿತು.

ಕಳೆದ ವರ್ಷ ಡಿಸೆಂಬರ್‌ನಲ್ಲಿ 63,583.07 ಅಂಶಗಳಿಗೆ ಸೆನ್ಸೆಕ್ಸ್‌ ತಲುಪಿದ್ದು, ಈವರೆಗಿನ ದಾಖಲೆಯಾಗಿತ್ತು.

ಪವರ್ ಗ್ರಿಡ್‌, ಅಲ್ಟ್ರಾಟೆಕ್‌ ಸಿಮೆಂಟ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ವಿಪ್ರೋ, ಎಚ್‌ಡಿಎಫ್‌ಸಿ, ಹಿಂದುಸ್ತಾನ್‌ ಯುನಿಲಿವರ್‌, ಲಾರ್ಸೆನ್‌ ಆ್ಯಂಡ್ ಟರ್ಬೊ, ಟೆಕ್‌ ಮಹೀಂದ್ರಾ, ಬಜಾಜ್‌ ಫಿನ್‌ಸರ್ವ್, ಟೈಟನ್‌, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ ಹಾಗೂ ರಿಲಯನ್ಸ್‌ ಇಂಡಸ್ಟ್ರೀಸ್‌ನ ಷೇರುಗಳು ಹೆಚ್ಚು ಲಾಭ ಪಡೆದಿವೆ.

ಟಾಟಾ ಸ್ಟೀಲ್‌, ಎನ್‌ಟಿಪಿಸಿ, ಟಾಟಾ ಮೋಟಾರ್ಸ್‌, ಐಸಿಐಸಿಐ ಬ್ಯಾಂಕ್‌ ಹಾಗೂ ಏಷಿಯನ್‌ ಪೈಂಟ್ಸ್‌ನ ಷೇರುಗಳು ನಷ್ಟಕ್ಕೊಳಗಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT