ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಷೇರುಪೇಟೆ: ಸೆನ್ಸೆಕ್ಸ್‌, ನಿಫ್ಟಿ ಕುಸಿತ

Published 20 ಜನವರಿ 2024, 15:44 IST
Last Updated 20 ಜನವರಿ 2024, 15:44 IST
ಅಕ್ಷರ ಗಾತ್ರ

ಮುಂಬೈ: ಎಫ್‌ಎಂಸಿಜಿ ಹಾಗೂ ಐ.ಟಿ ಷೇರುಗಳ ಕುಸಿತದಿಂದಾಗಿ ಷೇರುಪೇಟೆಯಲ್ಲಿ ಶನಿವಾರ ಸೂಚ್ಯಂಕಗಳು  ಇಳಿಕೆಯ ಹಾದಿ ಹಿಡಿದವು. 

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 259 ಅಂಶ ಕುಸಿತ ಕಂಡು 71,423 ಅಂಶಗಳಲ್ಲಿ ವಹಿವಾಟನ್ನು ಮುಕ್ತಾಯಗೊಳಿಸಿತು. ಸೆನ್ಸೆಕ್ಸ್‌ ಗುಚ್ಛದಲ್ಲಿ ಒಟ್ಟು 24 ಕಂಪನಿಗಳ ಷೇರುಗಳು ಕುಸಿದಿವೆ.  

50 ಅಂಶ ಇಳಿಕೆ ಕಂಡ ನಿಫ್ಟಿ 21,571 ಅಂಶಗಳಲ್ಲಿ ವಹಿವಾಟನ್ನು ಅಂತ್ಯಗೊಳಿಸಿತು. 

ಕೋಟಕ್‌ ಬ್ಯಾಂಕ್‌, ಪವರ್‌ಗ್ರಿಡ್‌, ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ ಬ್ಯಾಂಕ್‌ ಷೇರುಗಳು ಲಾಭ ಕಂಡಿವೆ. ಎಚ್‌ಯುಎಲ್‌, ಟಿಸಿಎಸ್‌, ಇಂಡಸ್‌ಇಂಡ್‌ ಬ್ಯಾಂಕ್‌, ಎಚ್‌ಸಿಎಲ್‌ ಷೇರುಗಳು ನಷ್ಟ ಕಂಡಿವೆ. ಎಚ್‌ಯುಎಲ್‌ ಕಂಪನಿಯ ಷೇರಿನ ಮೌಲ್ಯ ಶೇ 3.72ರಷ್ಟು ಇಳಿಕೆ ಕಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT