ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಯಲ್ಲಿ ಚಂಚಲತೆ: ಏರಿ–ಇಳಿದ ಸೆನ್ಸೆಕ್ಸ್, ಕೊಟ್ಯಾಕ್ ಬ್ಯಾಂಕ್ ಷೇರು ಗಳಿಕೆ

Last Updated 2 ಜೂನ್ 2020, 5:43 IST
ಅಕ್ಷರ ಗಾತ್ರ

ಮುಂಬೈ: ಸಕಾರಾತ್ಮ ವಹಿವಾಟಿನೊಂದಿಗೆ ತಿಂಗಳ ಮೊದಲ ವಹಿವಾಟು ಆರಂಭಿಸಿದ ಷೇರುಪೇಟೆಗಳಲ್ಲಿ ಮಂಗಳವಾರ ಚಂಚಲತೆ ಉಂಟಾಗಿದೆ. ಕೊಟ್ಯಾಕ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ, ಟಿಸಿಎಸ್‌ ಹಾಗೂ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳು ಗಳಿಕೆ ದಾಖಲಿಸಿದ್ದು, ಆರಂಭಿಕ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 300 ಅಂಶ ಹೆಚ್ಚಳವಾಗಿತ್ತು.

ಬೆಳಿಗ್ಗೆ 11ಕ್ಕೆ ಸೆನ್ಸೆಕ್ಸ್‌ 215.03 ಅಂಶ (ಶೇ 0.65) ಚೇತರಿಕೆಯಾಗಿ 33,518.55 ಅಂಶ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 62.20 ಅಂಶ (ಶೇ 0.63) ಏರಿಕೆಯಾಗಿ 9,888.35 ಅಂಶ ಮುಟ್ಟಿದೆ.

ಸೆನ್ಸೆಕ್ಸ್‌ ಕಂಪನಿಗಳ ಸಾಲಿನಲ್ಲಿ ಕೊಟ್ಯಾಕ್‌ ಬ್ಯಾಂಕ್‌ ಷೇರು ಅತ್ಯಧಿಕ ಗಳಿಕೆ ದಾಖಲಿಸಿದೆ. ಕೊಟ್ಯಾಕ್‌ ಷೇರು ಬೆಲೆ ಶೇ 7ರ ವರೆಗೂ ಏರಿಕೆಯಾಗಿತ್ತು. ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಸನ್‌ ಫಾರ್ಮಾ, ಹೀರೊ ಮೊಟೊಕಾರ್ಪ್, ಬಜಾಜ್‌ ಫೈನಾನ್ಸ್‌, ಟಾಟಾ ಸ್ಟೀಲ್‌, ಭಾರ್ತಿ ಏರ್‌ಟೆಲ್‌ ಹಾಗೂ ಎಚ್‌ಸಿಎಲ್‌ ಟೆಕ್‌ ಷೇರುಗಳ ಬೆಲೆ ಸಹ ಹೆಚ್ಚಳವಾಗಿವೆ.

ಸೋಮವಾರ ಗಳಿಕೆ ದಾಖಲಿಸಿದ್ದ ಐಟಿಸಿ, ಐಸಿಐಸಿಐ ಬ್ಯಾಂಕ್‌, ಎಸ್‌ಬಿಐ, ಎಲ್‌ಆ್ಯಂಡ್‌ಟಿ ಷೇರುಗಳು ಇಂದು ನಷ್ಟ ಅನುಭವಿಸಿವೆ. ನಿನ್ನೆ ವಹಿವಾಟಿನಲ್ಲಿ ಸೆನ್ಸೆಕ್ಸ್‌ 879.42 ಅಂಶ ಏರಿಕೆಯಾಗಿ 33,302.52 ಅಂಶ ಹಾಗೂ ನಿಫ್ಟಿ 245 ಅಂಶ ಹೆಚ್ಚಳವಾಗಿ 9,826 ಅಂಶ ಮುಟ್ಟಿತ್ತು. ಸೋಮವಾರ ವಿದೇಶಿ ಹೂಡಿಕೆದಾರರು ₹1,575.46 ಕೋಟಿ ಮೌಲ್ಯದ ಷೇರು ಖರೀದಿಸಿದ್ದಾರೆ.

ಮಾನ್ಸೂನ್‌ ಪ್ರವೇಶ, ಲಾಕ್‌ಡೌನ್‌ ಸಡಿಲಿಕೆ ಅಂಶಗಳು ಹೂಡಿಕೆದಾರರಲ್ಲಿ ಉತ್ಸಾಹ ಮುಂದಿದ್ದು, ಆರ್ಥಿಕತೆಗೆ ಚೇತರಿಕೆ ಮೂಡುವ ಭರವಸೆ ಸೃಷ್ಟಿಯಾಗಿದೆ. ಈ ಕಾರಣಗಳಿಂದಾಗಿ ಹೂಡಿಕೆದಾರರು ಷೇರುಪೇಟೆಯಲ್ಲಿ ಖರೀದಿಯತ್ತ ಮುಖ ಮಾಡಿದ್ದಾರೆ.

ಹಾಂಕಾಂಗ್‌, ಟೋಕಿಯೊ ಹಾಗೂ ಸೋಲ್‌ ಷೇರುಪೇಟೆಗಳಲ್ಲಿಗೂ ಸಕಾರಾತ್ಮಕ ವಹಿವಾಟು ಕಂಡು ಬಂದಿದೆ. ಅಂತರರಾಷ್ಟ್ರೀಯ ಕಚ್ಚಾ ತೈಲ ಮಾನದಂಡ ಬ್ರೆಂಟ್‌ ಫ್ಯೂಚರ್ಸ್‌ ಶೇ 0.81ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 38.63 ಅಮೆರಿಕನ್‌ ಡಾಲರ್‌ಗಳಲ್ಲಿ ವಹಿವಾಟು ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT