ನವದೆಹಲಿ (ಪಿಟಿಐ): ದೇಶದ ಅತಿದೊಡ್ಡ ಸಾಫ್ಟ್‌ವೇರ್ ಸೇವಾ ಸಂಸ್ಥೆಯಾಗಿರುವ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್), ಷೇರು ಮರು ಖರೀದಿ ಪ್ರಸ್ತಾವ ಪರಿಶೀಲಿಸಲು ಮುಂದಾಗಿದೆ.

ಇದೇ 15ರಂದು ಸಭೆ ಸೇರಲಿರುವ ಸಂಸ್ಥೆಯ ನಿರ್ದೇಶಕ ಮಂಡಳಿಯು ಈ ಬಗ್ಗೆ ನಿರ್ಧಾರಕ್ಕೆ ಬರಲಿದೆ ಎಂದು ಟಿಸಿಎಸ್, ಮುಂಬೈ ಷೇರುಪೇಟೆಗೆ ತಿಳಿಸಿದೆ. ಈ ಬಗ್ಗೆ ಸಂಸ್ಥೆ ಹೆಚ್ಚಿನ ಮಾಹಿತಿ ನೀಡಿಲ್ಲ. ಹಿಂದಿನ ವರ್ಷ ಸಂಸ್ಥೆಯು ಪ್ರತಿ ಷೇರಿಗೆ ₹ 2,850ರ ದರದಲ್ಲಿ ₹16 ಸಾವಿರ ಕೋಟಿಗಳಷ್ಟು ಮೊತ್ತದ ಷೇರುಗಳನ್ನು ಮರು ಖರೀದಿಸಿತ್ತು. ಷೇರು ಮರು ಖರೀದಿ ಮತ್ತು ಲಾಭಾಂಶ ವಿತರಣೆ ರೂಪದಲ್ಲಿ ಷೇರುದಾರರಿಗೆ ₹ 26,800 ಕೋಟಿಗಳನ್ನು ವಿತರಿಸಿತ್ತು.

ಸಂಸ್ಥೆಯ ಬಳಿ ಇರುವ ಹೆಚ್ಚುವರಿ ನಗದನ್ನು ಷೇರುದಾರರಿಗೆ ವಿತರಿಸಲು ಈ ಷೇರು ಮರು ಖರೀದಿಯು ನೆರವಾಗುತ್ತದೆ. ಇದರಿಂದ ಪ್ರತಿ ಷೇರಿನ ಗಳಿಕೆ ಹೆಚ್ಚುತ್ತದೆ. ದೇಶಿ ಐ.ಟಿ. ಸಂಸ್ಥೆಗಳು ಹೆಚ್ಚುವರಿ ನಗದನ್ನು ಷೇರುದಾರರಿಗೆ ಮರಳಿಸುವ ಒತ್ತಡ ಎದುರಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.