ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್ ಮೇಲೆ ನಿರೀಕ್ಷೆ: ಸೆನ್ಸೆಕ್ಸ್, ನಿಫ್ಟಿ ಚೇತರಿಕೆ

ಕೇಂದ್ರ ಬಜೆಟ್ 2019
Last Updated 1 ಫೆಬ್ರುವರಿ 2019, 6:55 IST
ಅಕ್ಷರ ಗಾತ್ರ

ಮುಂಬೈ:ಕೇಂದ್ರ ಮಧ್ಯಂತರ ಬಜೆಟ್‌ ಮೇಲಿನ ನಿರೀಕ್ಷೆಯೊಂದಿಗೆ ಶುಕ್ರವಾರ ಬೆಳಿಗ್ಗೆ ಷೇರುಪೇಟೆಯಲ್ಲಿ ವಹಿವಾಟು ಚೇತರಿಕೆ ಕಂಡಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಮಧ್ಯಾಹ್ನ 12.15ರ ವೇಳೆಗೆ121.40 ಅಂಶ ಏರಿಕೆ ದಾಖಲಿಸಿ36,378.09ರಷ್ಟಾಗಿದೆ. ನಿಫ್ಟಿ 34.10 ಅಂಶ ಏರಿಕೆಯಾಗಿ10,865.05 ಆಗಿದೆ. ದಿನ ಆರಂಭದ ವಹಿವಾಟಿನ ವೇಳೆ ಸೆನ್ಸೆಕ್ಸ್ 160 ಅಂಶ ಏರಿಕೆಯೊಂದಿಗೆ 36,448.30 ಆಗಿತ್ತು. ನಿಫ್ಟಿ ಸಹ 57 ಅಂಶ ಏರಿಕೆ ಕಂಡು, 10,869 ಆಗಿತ್ತು.

ಇವತ್ತಿನ ವಹಿವಾಟಿನಲ್ಲಿ ದೇಶೀಯ ಷೇರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಪರಿಣಾಮವಾಗಿ ಭಾರತೀಯ ಷೇರುಗಳ ಮೌಲ್ಯವೂ ಹೆಚ್ಚಾಗಿದೆ.

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಷೇರುಗಳ ವಹಿವಾಟು ಹೆಚ್ಚಾಗಿದ್ದು, ಮೌಲ್ಯವೂ ಏರಿಕೆ ದಾಖಲಿಸಿದೆ. ಆಟೋಮೊಬೈಲ್ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳ ಷೇರುಗಳಿಗೆ ಬೇಡಿಕೆ ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT