ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆಯ ಮಟ್ಟಕ್ಕೆ ಬಿಎಸ್‌ಇ ಕಂಪನಿಗಳ ಬಂಡವಾಳ ಮೌಲ್ಯ

Last Updated 11 ಜನವರಿ 2022, 16:04 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮುಂಬೈ ಷೇರುಪೇಟೆಯಲ್ಲಿ ನೋಂದಾಯಿತ ಆಗಿರುವ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯವು ಮಂಗಳವಾರ ₹275.20 ಲಕ್ಷ ಕೋಟಿಗೆ ಏರಿಕೆ ಆಗಿದೆ. ಇದು ಈವರೆಗಿನ ದಾಖಲೆಯ ಮೊತ್ತ.

ಸತತ ಮೂರನೆಯ ದಿನವೂ ಗಳಿಕೆಯ ಓಟವನ್ನು ಮುಂದುವರಿಸಿದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ 221 ಅಂಶ ಏರಿಕೆ ಕಂಡು, 60,616 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ಮೂರು ವಹಿವಾಟು ದಿನಗಳಲ್ಲಿ ಸೆನ್ಸೆಕ್ಸ್ ಒಟ್ಟು 1,015 ಅಂಶ ಏರಿಕೆ ದಾಖಲಿಸಿದೆ.

ಮೂರು ದಿನಗಳ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯವು ₹4.05 ಲಕ್ಷ ಕೋಟಿಯಷ್ಟು ಹೆಚ್ಚಳ ಆಗಿದೆ. ಮಂಗಳವಾರದ ವಹಿವಾಟಿನಲ್ಲಿ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 52 ಅಂಶ ಏರಿಕೆ ಕಂಡು 18,055 ಅಂಶಗಳನ್ನು ತಲುಪಿತು.

ಬಿಎಸ್‌ಇ ಇಂಧನ, ಐ.ಟಿ., ರಿಯಾಲ್ಟಿ ವಲಯಗಳಲ್ಲಿ ಏರಿಕೆ ಕಂಡುಬಂತು. ಲೋಹ ವಲಯದ ಸೂಚ್ಯಂಕವು ಶೇ 2ಕ್ಕಿಂತ ಹೆಚ್ಚು ಕುಸಿಯಿತು. ಎಫ್‌ಎಂಸಿಜಿ ಮತ್ತು ಆರೋಗ್ಯಸೇವಾ ವಲಯದ ಸೂಚ್ಯಂಕಗಳು ಕೂಡ ಇಳಿಕೆ ಕಂಡವು.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 11 ಪೈಸೆಯಷ್ಟು ಹೆಚ್ಚಳ ಆಗಿ ₹73.94ರಂತೆ ವಿನಿಮಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT