ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಗೆ ಎಸ್‌ಬಿಐ ಕಾರ್ಡ್ಸ್: ಆರಂಭದಲ್ಲೇ ಶೇ 13ರಷ್ಟು ಕುಸಿತ

Last Updated 16 ಮಾರ್ಚ್ 2020, 7:13 IST
ಅಕ್ಷರ ಗಾತ್ರ

ನವದೆಹಲಿ:ಎಸ್‌ಬಿಐ ಕಾರ್ಡ್ಸ್‌ ಆ್ಯಂಡ್‌ ಪೇಮೆಂಟ್‌ ಸರ್ವೀಸಸ್‌ಗೆ ಸೋಮವಾರ ಷೇರುಪೇಟೆ ವಹಿವಾಟಿಗೆ ಚಾಲನೆ ದೊರೆತಿದೆ. ಶೇ 13ರಷ್ಟು ಇಳಿಕೆಯೊಂದಿಗೆ ವಹಿವಾಟು ಆರಂಭವಾಗಿದ್ದು, ಹೂಡಿಕೆದಾರರನ್ನು ಇನ್ನಷ್ಟು ಆತಂಕಕ್ಕೆ ದೂಡಿತು.

ಆರಂಭಿಕ ಸಾರ್ವಜನಿಕ ಕೊಡುಗೆಯಲ್ಲಿ (ಐಪಿಒ) ಹಣ ತೊಡಗಿಸಿ ಅಧಿಕ ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದವರಿಗೆ ನಿರಾಶೆ ಉಂಟಾಗಿದೆ. ₹750ರಿಂದ ₹755ರ ನಿಗದಿತ ಬೆಲೆಗೆ ಐಪಿಒ ಮೂಲಕ ಷೇರು ಖರೀದಿಸಿದವರು ಒಮ್ಮೆಗೆ ಶೇ 13ರಷ್ಟು ನಷ್ಟ ಅನುಭವಿಸಿದರು.

ಗರಿಷ್ಠ ₹755ಕ್ಕೆ ಐಪಿಒ ವಿತರಣೆಯಾಗಿತ್ತು. ಆದರೆ, ಮುಂಬೈ ಷೇರುಪೇಟೆಯಲ್ಲಿ ಶೇ 12.84ರಷ್ಟು ಇಳಿಕೆಯೊಂದಿಗೆ ₹658ರಿಂದವಹಿವಾಟಿ ಆರಂಭವಾಯಿತು. ರಾಷ್ಟ್ರೀಯಲ್ಲಿ ಶೇ 12.45ರಷ್ಟು ಇಳಿಕೆಯೊಂದಿಗೆ ₹661ರಲ್ಲಿ ವಹಿವಾಟು ನಡೆಯಿತು.

ಐಪಿಒಗಿಂತಲೂ ಕಡಿಮೆ ದರದಲ್ಲಿ ಎಸ್‌ಬಿಐ ಕಾರ್ಡ್ಸ್‌ಆ್ಯಂಡ್‌ ಪೇಮೆಂಟ್‌ ಸರ್ವೀಸಸ್‌ ಷೇರು ದೊರೆಯುತ್ತಿರುವ ಲಾಭವನ್ನು ಬಹುತೇಕ ಹೂಡಿಕೆದಾರರು ಬಳಸಿಕೊಂಡರು. ವಹಿವಾಟು ಆರಂಭವಾಗಿ ಕೆಲವೇ ನಿಮಿಷಗಳಲ್ಲಿ ಖರೀದಿ ಭರಾಟೆ ನಡೆದು, ಷೇರು ಬೆಲೆ ₹748ರ ವರೆಗೂ ತಲುಪಿತು. ಅನಂತರದಲ್ಲಿ ₹740ರಿಂದ ₹735ರ ವರೆಗೂ ವಹಿವಾಟು ನಡೆದಿದೆ.

ಮುಂಬೈ ಷೇರುಪೇಟೆಯಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯ ₹69,811.44 ಕೋಟಿ ಆಗಿದೆ.

ಐಪಿಒ ಅವಧಿಯಲ್ಲಿ ಎಸ್‌ಬಿಐ ಕಾರ್ಡ್ಸ್‌ಗೆ 22 ಪಟ್ಟು ಅಧಿಕ ಮನವಿ ಸಲ್ಲಿಕೆಯಾಗಿತ್ತು. ಎಸ್‌ಬಿಐ ಕ್ಯಾಪಿಟಲ್‌ ಮಾರ್ಕೆಟ್ಸ್‌, ಕೊಟ್ಯಾಕ್‌ ಮಹೀಂದ್ರಾ ಕ್ಯಾಪಿಟಲ್‌ ಕಂಪನಿ, ಆ್ಯಕ್ಸಿಸ್‌ ಕ್ಯಾಪಿಟಲ್‌, ಡಿಎಸ್‌ಪಿ ಮೆರಿಲ್‌ ಲಿಂಚ್‌, ಎಚ್‌ಎಸ್‌ಬಿಸಿ ಸೆಕ್ಯುರಿಟೀಸ್‌ ಆ್ಯಂಡ್‌ ಕ್ಯಾಪಿಟಲ್‌ ಮಾರ್ಕೆಟ್ಸ್‌ (ಇಂಡಿಯಾ), ನೊಮುರಾ ಫೈನಾಶ್ಯಿಯಲ್‌ ಅಡ್ವೈಸರಿ ಆ್ಯಂಡ್‌ ಸೆಕ್ಯುರಿಟೀಸ್‌ (ಇಂಡಿಯಾ) ಐಪಿಒ ನಿರ್ವಹಣೆ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT