ಮಂಗಳವಾರ, ಆಗಸ್ಟ್ 3, 2021
26 °C

ಸತತ 5ನೇ ವಹಿವಾಟಿನ ದಿನವೂ ಸೂಚ್ಯಂಕ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಐದನೇ ವಹಿವಾಟಿನ ದಿನವೂ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಏರಿಕೆ ದಾಖಲಿಸಿದೆ.

ಮಂಗಳವಾರದ ವಹಿವಾಟು ತೀವ್ರ ಏರಿಳಿತದಿಂದ ಕೂಡಿತ್ತು. ಹಣಕಾಸು ಕಂಪನಿಗಳ ಷೇರುಗಳಲ್ಲಿನ ಗಳಿಕೆಯ ಫಲವಾಗಿ ಸೂಚ್ಯಂಕವು ಅಂತಿಮವಾಗಿ 187 ಅಂಶ ಏರಿಕೆ ಕಂಡು 36,674 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ 36 ಅಂಶ ಏರಿಕೆ ಕಂಡು 10,799 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ಬಜಾಜ್‌ ಫೈನಾನ್ಸ್ ಗರಿಷ್ಠ ಗಳಿಕೆ (ಶೇ 8) ಕಂಡಿತು. ಇಂಡಸ್‌ ಇಂಡ್‌ ಬ್ಯಾಂಕ್‌, ಇನ್ಫೊಸಿಸ್‌, ಐಸಿಐಸಿಐ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌ ಷೇರುಗಳು ಬೆಲೆ ಏರಿಕೆಯಲ್ಲಿ ನಂತರದ ಸ್ಥಾನದಲ್ಲಿದ್ದವು.

ಜಾಗತಿಕ ಮಾರುಕಟ್ಟೆಗಳಲ್ಲಿನ ನಿರುತ್ಸಾಹದಿಂದ ದೇಶಿ ಹೂಡಿಕೆದಾರರು ವಿಚಲಿತರಾಗಿಲ್ಲ. ವಿದೇಶಿ ನಿಧಿಗಳ ನಿರಂತರ ಹರಿವು ಮತ್ತು ಉತ್ತಮ ಮುಂಗಾರು ಮಳೆಯಂತಹ ಸಕಾರಾತ್ಮಕ ವಿದ್ಯಮಾನಗಳತ್ತ ಅವರು ಗಮನ ಹರಿಸಿದ್ದಾರೆ ಎಂದು ವಹಿವಾಟುದಾರರು ತಿಳಿಸಿದ್ದಾರೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೋಮವಾರ ₹ 348.35 ಕೋಟಿ ಮೊತ್ತದ ಷೇರುಗಳನ್ನು ಖರೀದಿಸಿದ್ದಾರೆ. ಷೇರುಪೇಟೆಯಲ್ಲಿನ ಗಳಿಕೆಗೆ ಕೋವಿಡ್‌ ಪ್ರಕರಣಗಳಲ್ಲಿನ ಹೆಚ್ಚಳವು ಕೆಲಮಟ್ಟಿಗೆ ಕಡಿವಾಣ ವಿಧಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು