ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆನ್ಸೆಕ್ಸ್‌ 656 ಅಂಶ ಇಳಿಕೆ

Last Updated 19 ಜನವರಿ 2022, 15:12 IST
ಅಕ್ಷರ ಗಾತ್ರ

ಮುಂಬೈ: ಜಾಗತಿಕ ಷೇರುಪೇಟೆಗಳ ಪ್ರಭಾವಕ್ಕೆ ಒಳಗಾಗಿ ದೇಶಿ ಷೇರುಪೇಟೆಗಳಲ್ಲಿ ಬುಧವಾರ ಸೂಚ್ಯಂಕಗಳು ಇಳಿಕೆ ಕಂಡವು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 656 ಅಂಶ ಇಳಿಕೆ ಕಂಡು 60,098 ಅಂಶಗಳಿಗೆ ಇಳಿಕೆ ಆಯಿತು. ಜನವರಿ 7ರ ನಂತರದ ಕನಿಷ್ಠ ಮಟ್ಟ ಇದಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 174 ಅಂಶ ಇಳಿಕೆ ಕಂಡು 17,938 ಅಂಶಗಳಿಗೆ ತಲುಪಿತು.

ಬಿಎಸ್‌ಇನಲ್ಲಿ ಇನ್ಫೊಸಿಸ್‌ ಷೇರು ಶೇ 2.77ರಷ್ಟು ಗರಿಷ್ಠ ಇಳಿಕೆ ಕಂಡಿತು. ಬಿಎಸ್‌ಇ ಮಿಡ್‌ ಕ್ಯಾಪ್‌ ಶೇ 0.34ರವರೆಗೆ ಇಳಿಕೆ ಕಂಡಿತು. ಬಿಎಸ್‌ಇನಲ್ಲಿ ಐ.ಟಿ. ಸೂಚ್ಯಂಕ ಶೇ 1.95ರಷ್ಟು, ತಂತ್ರಜ್ಞಾನ ಶೇ 1.79ರಷ್ಟು, ಬ್ಯಾಂಕಿಂಗ್‌ ಶೇ 0.52ರಷ್ಟು ಮತ್ತು ದೂರಸಂಪರ್ಕ ಶೇ 0.97ರಷ್ಟು ಇಳಿಕೆ ಕಂಡಿದೆ.

ರೂಪಾಯಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯವು 14 ಪೈಸೆ ಏರಿಕೆ ಕಂಡಿದ್ದು ಒಂದು ಡಾಲರ್‌ಗೆ ₹ 74.44ರಂತೆ ವಿನಿಮಯಗೊಂಡಿತು.

ಕರಗಿದ ಸಂಪತ್ತು: ಎರಡು ದಿನಗಳ ನಕಾರಾತ್ಮಕ ವಹಿವಾಟಿನಿಂದಾಗಿ ಹೂಡಿಕೆದಾರರ ಸಂಪತ್ತು ಮೌಲ್ಯವು ₹ 5.24 ಲಕ್ಷ ಕೋಟಿಯಷ್ಟು ಕರಗಿದೆ. ಇದರಿಂದ ಷೇರುಪೇಟೆ ನೋಂದಾಯಿತ ಕಂಪನಿಗಳ ಬಂಡವಾಳ ಮೌಲ್ಯವು ಬುಧವಾರದ ವಹಿವಾಟಿನಲ್ಲಿ ₹ 274.77 ಲಕ್ಷ ಕೋಟಿಗೆ ಇಳಿಕೆ ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT