ಬುಧವಾರ, ಏಪ್ರಿಲ್ 1, 2020
19 °C
ಜಾಗತಿಕ ಮಾರುಕಟ್ಟೆಗಳಲ್ಲಿ ಅತಿಯಾದ ಮಾರಾಟದ ಒತ್ತಡ

ಕೋವಿಡ್‌ಗೆ ತತ್ತರಿಸಿದ ಷೇರುಪೇಟೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ : ‘ಕೋವಿಡ್‌–19’ ವೈರಸ್‌ ಚೀನಾದಾಚೆಗೂ ವೇಗವಾಗಿ ಹರಡುತ್ತಿದೆ. ಇದರಿಂದಾಗಿ ಸೋಮವಾರ ಜಾಗತಿಕ ಮಾರುಕಟ್ಟೆಯು ಮಾರಾಟದ ಒತ್ತಡಕ್ಕೆ ಸಿಲುಕಿ ನಲುಗಿತ್ತು. ಭಾರತದ ಷೇರುಪೇಟೆ, ಚಿನಿವಾರ ಪೇಟೆ, ಕರೆನ್ಸಿ ಮಾರುಕಟ್ಟೆಗಳು ಅದರ ಪ್ರಭಾವಕ್ಕೆ ಒಳಗಾಗಿ ಭಾರಿ ಕುಸಿತ ಕಂಡವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು 807 ಅಂಶಗಳಷ್ಟು ಭಾರಿ ಕುಸಿತ ಕಂಡು 40,363 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು. ಈ ವರ್ಷದಲ್ಲಿ ಇದುವರೆಗೆ ನಡೆದಿರುವ ದಿನದ ವಹಿವಾಟಿನಲ್ಲಿ ಎರಡನೇ ಗರಿಷ್ಠ ಕುಸಿತ ಇದಾಗಿದೆ. ಫೆಬ್ರುವರಿ 1ರಂದು ಕೇಂದ್ರ ಬಜೆಟ್‌ ಮಂಡನೆಯ ದಿನ ಸೂಚ್ಯಂಕ 987 ಅಂಶ ಕುಸಿತ ಕಂಡಿತ್ತು. 

ಬಿಎಸ್‌ಇ ಮಧ್ಯಮ, ಸಣ್ಣ ಶ್ರೇಣಿ ಸೂಚ್ಯಂಕಗಳು ಶೇ 1.60ರಷ್ಟು ಇಳಿಕೆ ಕಂಡಿವೆ. ಷೇರುಪೇಟೆಯ ದಿನದ ವಹಿವಾಟಿನಲ್ಲಿ ಟಾಟಾ ಸ್ಟೀಲ್‌ ಕಂಪನಿಯ ಷೇರು ಶೇ 6.39ರಷ್ಟು ಗರಿಷ್ಠ ನಷ್ಟ ಕಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 251 ಅಂಶ ಕುಸಿತ ದಾಖಲಿಸಿ 11,829 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

ಶಾಂಘೈ, ಟೋಕಿಯೊ ಮತ್ತುಹಾಂಗ್‌ಕಾಂಗ್‌ನಲ್ಲಿಯೂ ಸೂಚ್ಯಂಕ ಗಳು ಇಳಿಕೆ ಕಂಡವು. ಯುರೋಪ್‌ನಲ್ಲಿ ಆರಂಭದ ವಹಿವಾಟೇ ಇಳಿಮುಖವಾಗಿತ್ತು.

₹ 3.17 ಲಕ್ಷ ಕೋಟಿ ಸಂಪತ್ತು ಕರಗಿತು: ಷೇರುಪೇಟೆಯಲ್ಲಿ ಸೂಚ್ಯಂಕಗಳು ಭಾರಿ ಕುಸಿತ ಕಂಡಿರುವುದರಿಂದ, ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ಒಂದೇ ದಿನ ₹ 3.17 ಲಕ್ಷ ಕೋಟಿ ಕರಗಿದೆ. 

ಷೇರುಪೇಟೆಯ ಬಂಡವಾಳ ಮೌಲ್ಯ ₹ 158.50 ಲಕ್ಷ ಕೋಟಿಗಳಿಂದ ₹ 155.33 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ

ಕಚ್ಚಾ ತೈಲ ದರ ಇಳಿಕೆ: ಕೋವಿಡ್‌ ಹರಡುತ್ತಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೇಡಿಕೆ ಕಡಿಮೆಯಾಗಿದೆ. ಇದರಿಂದ ಸೋಮವಾರ ಕಚ್ಚಾ ತೈಲ ದರ ಶೇ 4ರಷ್ಟು ಇಳಿಕೆ ಕಂಡಿದೆ. ಒಂದು ಬ್ಯಾರೆಲ್‌ಗೆ 56.11 ಡಾಲರ್‌ಗಳಂತೆ ಮಾರಾಟವಾಯಿತು.

ರೂಪಾಯಿ 34 ಪೈಸೆ ಕುಸಿತ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 34 ಪೈಸೆ ಕುಸಿತ ಕಂಡು ಒಂದು ಡಾಲರ್‌ಗೆ ಮೂರು ತಿಂಗಳ ಕನಿಷ್ಠ ಮಟ್ಟವಾದ ₹ 71.98ರಂತೆ ವಿನಿಮಯಗೊಂಡಿತು.

ತೈಲ ದರ ಇಳಿಕೆ: ಕೋವಿಡ್‌ ಹರಡುತ್ತಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೇಡಿಕೆ ಕಡಿಮೆಯಾಗಿದೆ. ಇದರಿಂದ ಸೋಮವಾರ ಕಚ್ಚಾ ತೈಲ ದರ ಶೇ 4ರಷ್ಟು ಇಳಿಕೆ ಕಂಡಿದೆ. ಒಂದು ಬ್ಯಾರೆಲ್‌ಗೆ 56.11 ಡಾಲರ್‌ಗಳಂತೆ ಮಾರಾಟವಾಯಿತು.

ಚಿನ್ನದ ದರ ಗರಿಷ್ಠ ₹ 1,840 ಹೆಚ್ಚಳ: ನವದೆಹಲಿ/ಮುಂಬೈ (ಪಿಟಿಐ): ದೇಶದಾದ್ಯಂತ ಚಿನ್ನದ ದರ 10 ಗ್ರಾಂಗೆ ಗರಿಷ್ಠ ₹ 1,840ರವರೆಗೂ ಏರಿಕೆಯಾಗಿದೆ.

10 ಗ್ರಾಂ ಚಿನ್ನದ ದರ ಮುಂಬೈನಲ್ಲಿ ₹ 1,840ರಂತೆ ಹೆಚ್ಚಾಗಿ
₹ 43,415ರಂತೆ ಮಾರಾಟವಾಯಿತು. ದೆಹಲಿಯಲ್ಲಿ ₹ 953 ರಂತೆ ಏರಿಕೆ ಕಂಡು ₹ 44,472ರಂತೆ ಹಾಗೂ ಬೆಂಗಳೂರಿನಲ್ಲಿ ₹ 919ರಂತೆ ಹೆಚ್ಚಾಗಿ
₹ 43,640ಕ್ಕೆ ತಲುಪಿದೆ.

ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆಯಿಂದಾಗಿ ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ದರ ಭಾರಿ ಏರಿಕೆ ಕಾಣುವಂತಾಯಿತು ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ಹೇಳಿದೆ.

ಬೆಳ್ಳಿ ದರ: ಬೆಳ್ಳಿ ದಾರಣೆ ಕೆ.ಜಿಗೆ ಮುಂಬೈನಲ್ಲಿ ₹ 1,430ರಂತೆ ಹೆಚ್ಚಾಗಿ ₹49,035, ದೆಹಲಿಯಲ್ಲಿ ₹ 586ರಂತೆ ಹೆಚ್ಚಾಗಿ ₹ 49,990ರಂತೆ ಹಾಗೂ ಬೆಂಗಳೂರಿನಲ್ಲಿ ₹ 700ರಂತೆ ಏರಿಕೆಯಾಗಿ ₹ 49,500ರಂತೆ ಮಾರಾಟವಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು