ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಯಲ್ಲಿ ಚಂಚಲತೆ: ರಿಲಯನ್ಸ್‌ ಚೇತರಿಕೆ, ಯೆಸ್‌ ಬ್ಯಾಂಕ್‌ ಶೇ 29 ಏರಿಕೆ

Last Updated 11 ಮಾರ್ಚ್ 2020, 7:48 IST
ಅಕ್ಷರ ಗಾತ್ರ

ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ ಕಂಡಿದ್ದು, ಬುಧವಾರ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಷೇರು ಗಳಿಕೆ ದಾಖಲಿಸಿದೆ. ಆದರೆ, ಹೂಡಿಕೆದಾರರಲ್ಲಿ ಕೊರೊನಾ ವೈರಸ್‌ ಆತಂಕ ಮುಂದುವರಿದು ಷೇರುಪೇಟೆ ವಹಿವಾಟಿನಲ್ಲಿ ಚಂಚಲತೆ ಸೃಷ್ಟಿಯಾಗಿದೆ.

ಸಕಾರಾತ್ಮ ವಹಿವಾಟಿನ ಪರಿಣಾಮ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌, 354 ಅಂಶ ಏರಿಕೆಯೊಂದಿಗೆ 35,989.07 ಅಂಶ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 83.60 ಅಂಶ ಹೆಚ್ಚಳದೊಂದಿಗೆ 10,535.05 ಅಂಶ ಮುಟ್ಟಿದೆ.

ಸೋಮವಾರ ಕಚ್ಚಾ ತೈಲ ದರ ಇಳಿಕೆಯಿಂದಾಗಿ ಶೇ 12.3ರಷ್ಟು ಕುಸಿತ ಕಂಡಿದ್ದ ರಿಲಯನ್ಸ್‌ ಷೇರು, ಇಂದು ಶೇ 4.12ರಷ್ಟು ಗಳಿಕೆಯೊಂದಿಗೆ ಪ್ರತಿ ಷೇರು ಬೆಲೆ 1,160.10 ಆಗಿದೆ. ಆರ್‌ಬಿಐ ನಿರ್ಬಂಧದಿಂದಾಗಿ ತೀವ್ರ ಕುಸಿತ ಕಂಡಿದ್ದ ಯೆಸ್‌ ಬ್ಯಾಂಕ್‌ ಷೇರು, ಶೇ 28.94ರಷ್ಟು ಏರಿಕೆಯಾಗಿದೆ. ಪ್ರತಿ ಷೇರು ಬೆಲೆ ₹27.40 ಆಗಿದೆ.

ಐಟಿ, ಫಾರ್ಮಾ ಹಾಗೂ ಲೋಹ ವಲಯದ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿವೆ. ಬ್ಯಾಂಕ್‌, ಆಟೊಮೊಬೈಲ್‌ ಹಾಗೂ ಇಂಧನ ವಲಯದ ಷೇರುಗಳು ಗಳಿಕೆ ದಾಖಲಿಸಿವೆ. ಭಾರ್ತಿ ಏರ್‌ಟೆಲ್‌, ಹೀರೊ ಮೊಟೊಕಾರ್ಪ್‌, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಐಸಿಐಸಿಐ ಬ್ಯಾಂಕ್‌ ಸೇರಿದಂತೆ ಕೆಲವು ಕಂಪನಿಗಳ ಷೇರು ಬೆಲೆ ಹೆಚ್ಚಳವಾಗಿದೆ.

ಸೋಮವಾರ ಒಂದೇ ದಿನ 1,941 ಅಂಶ ಕುಸಿತ ಕಂಡಿದ್ದ ಷೇರುಪೇಟೆ ವಹಿವಾಟಿಗೆ ಮಂಗಳವಾರ ಹೋಳಿ ಪ್ರಯುಕ್ತ ಬಿಡುವಿತ್ತು.

ಡಾಲರ್‌ ಎದುರು ರೂಪಾಯಿ ಮೌಲ್ಯ ಚೇತರಿಕೆ ಕಂಡಿದ್ದು, ₹73.58ರಲ್ಲಿ ವಹಿವಾಟು ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT