ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಯಲ್ಲಿ ಸಾರ್ವಕಾಲಿಕ ದಾಖಲೆ: 51,000 ಅಂಶ ದಾಟಿದ ಸೆನ್ಸೆಕ್ಸ್‌

Last Updated 8 ಫೆಬ್ರುವರಿ 2021, 16:42 IST
ಅಕ್ಷರ ಗಾತ್ರ

ಮುಂಬೈ: ಸೋಮವಾರ ಷೇರುಪೇಟೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದ್ದು, ಇದೇ ಮೊದಲ ಬಾರಿಗೆ 51,000ಕ್ಕೂ ಹೆಚ್ಚು ಅಂಶಗಳಲ್ಲಿಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ದಿನದ ವಹಿವಾಟು ಮುಕ್ತಾಯವಾಗಿದೆ. ಇನ್ಫೊಸಿಸ್‌, ಐಸಿಐಸಿಐ ಬ್ಯಾಂಕ್‌ ಹಾಗೂ ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿಗಳ ಷೇರು ಗಳಿಕೆ ದಾಖಲಿಸಿವೆ.

ಜಾಗತಿಕ ಷೇರುಪೇಟೆಗಳ ಸಕಾರಾತ್ಮ ವಹಿವಾಟು ಪರಿಣಾಮ ದೇಶದ ಷೇರುಪೇಟೆಯ ಮೇಲೂ ಆಗಿದೆ. ದಿನದ ವಹಿವಾಟಿನಲ್ಲಿ ಸಾರ್ವಕಾಲಿಕ ದಾಖಲೆಯಾದ 51,523.38 ಅಂಶಗಳನ್ನು ಮುಟ್ಟಿದ್ದ ಸೆನ್ಸೆಕ್ಸ್‌, ವಹಿವಾಟು ಅಂತ್ಯಕ್ಕೆ 617.14 ಅಂಶಗಳು (ಶೇ 1.22ರಷ್ಟು) ಏರಿಕೆಯಾಗಿ 51,348.77 ಅಂಶಗಳನ್ನು ತಲುಪಿತು.

ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ ಸಹ ಶೇ 1.28ರಷ್ಟು (191.55 ಅಂಶಗಳು) ಹೆಚ್ಚಳದೊಂದಿದೆ ಸಾರ್ವಕಾಲಿಕ ಗರಿಷ್ಠ ಮಟ್ಟ 15,115.80 ಅಂಶಗಳಲ್ಲಿ ದಿನದ ವಹಿವಾಟು ಕೊನೆಯಾಗಿದೆ. ಇಂದು ನಿಫ್ಟಿ 15,159.90 ಅಂಶಗಳ ವರೆಗೂ ಏರಿಕೆಯಾಗಿತ್ತು. ಸತತ ಆರನೇ ದಿನವೂ ಷೇರುಪೇಟೆಯಲ್ಲಿ ಗೂಳಿ ಓಟ ಸಾಗಿದೆ.

ಸೆನ್ಸೆಕ್ಸ್‌ ಸಾಲಿನಲ್ಲಿ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಅತಿ ಹೆಚ್ಚು ಶೇ 7 ಗಳಿಕೆ ದಾಖಲಿಸಿತು. ಬಜಾಜ್‌ ಫಿನ್‌ಸರ್ವ್‌, ಭಾರ್ತಿ ಏರ್‌ಟೆಲ್‌, ಪವರ್‌ಗ್ರಿಡ್‌, ಇನ್ಫೊಸಿಸ್‌ ಹಾಗೂ ಐಸಿಐಸಿಐ ಬ್ಯಾಂಕ್‌ ಷೇರುಗಳು ಶೇ 2ರಿಂದ 4ರವರೆಗೂ ಗಳಿಕೆ ಕಂಡಿವೆ.

ಆದರೆ, ಕೋಟಕ್‌ ಬ್ಯಾಂಕ್‌, ಐಟಿಸಿ, ಬಜಾಜ್‌ ಫೈನಾನ್ಸ್‌, ಎಚ್‌ಯುಎಲ್‌ ಷೇರು ಬೆಲೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT