ಭಾನುವಾರ, ಸೆಪ್ಟೆಂಬರ್ 26, 2021
23 °C

ಲಾಭಗಳಿಕೆಯ ಒತ್ತಡ: ಸೂಚ್ಯಂಕ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಲಾಭ ಗಳಿಕೆಯ ಒತ್ತಡಕ್ಕೆ ಒಳಗಾಗಿ ದೇಶದ ಷೇರುಪೇಟೆಗಳು ಬುಧವಾರ ಇಳಿಕೆ ಕಂಡವು. ಹೂಡಿಕೆದಾರರು ಬ್ಯಾಂಕಿಂಗ್‌, ಹಣಕಾಸು ಮತ್ತು ಐ.ಟಿ. ವಲಯದ ಷೇರುಗಳನ್ನು ಮಾರಾಟ ಮಾಡಿ ಲಾಭ ಗಳಿಸಿಕೊಳ್ಳಲು ಮುಂದಾಗಿದ್ದರಿಂದ ಸೂಚ್ಯಂಕಗಳು ಇಳಿಕೆ ಕಾಣುವಂತಾಯಿತು. ಇದರಿಂದಾಗಿ ಸೂಚ್ಯಂಕಗಳ ನಾಲ್ಕು ದಿನಗಳ ದಾಖಲೆಯ ಓಟಕ್ಕೆ ತಡೆ ಬಿದ್ದಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 163 ಅಂಶ ಇಳಿಕೆ ಕಂಡು 55,629 ಅಂಶಗಳಿಗೆ ತಲುಪಿತು. ದಿನದ ವಹಿವಾಟಿನ ಒಂದು ಹಂತದಲ್ಲಿ 56,118 ಅಂಶಗಳ ಗರಿಷ್ಠ ಮಟ್ಟವನ್ನೂ ತಲುಪಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 46 ಅಂಶ ಇಳಿಕೆಯಾಗಿ 16,568 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು. ದಿನದ ವಹಿವಾಟಿನ ಒಂದು ಹಂತದಲ್ಲಿ 16,701 ಅಂಶಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿತ್ತು.

ಲಾಭಗಳಿಕೆಯ ವಹಿವಾಟಿನಿಂದಾಗಿ ಬ್ಯಾಂಕಿಂಗ್‌, ರಿಯಲ್‌ ಎಸ್ಟೇಟ್‌ ಮತ್ತು ಲೋಹ ವಲಯದ ಷೇರುಗಳ ಬೆಲೆ ಇಳಿಕೆಆಯಿತು. ಮಿಡ್‌ಕ್ಯಾಪ್‌ ಷೇರುಗಳು ತುಸು ಗಳಿಕೆ ಕಂಡರೂ ಒಟ್ಟಾರೆ ವಹಿವಾಟು ಇಳಿಮುಖವಾಗಿತ್ತು ಎಂದು ಜಿಯೋಜಿತ್ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಬಿಎಸ್‌ಇಯಲ್ಲಿ ಬ್ಯಾಂಕಿಂಗ್‌, ಲೋಹ, ಹಣಕಾಸು, ಐ.ಟಿ. ಮತ್ತು ಕೈಗಾರಿಕಾ ವಲಯದ ಸೂಚ್ಯಂಕಗಳು ಶೇ 0.96ರವರೆಗೂ ಇಳಿಕೆ ಕಂಡಿವೆ. ಬಿಎಸ್‌ಇ ಮಿಡ್‌ಕ್ಯಾಪ್‌ ಸೂಚ್ಯಂಕ ಶೇ 0.26ರಷ್ಟು ಏರಿಕೆ ಕಂಡರೆ, ಸ್ಮಾಲ್‌ ಕ್ಯಾಪ್‌ ಸೂಚ್ಯಂಕ ಶೇ 0.18ರಷ್ಟು ಇಳಿಕೆ ಕಂಡವು.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 11 ಪೈಸೆ ಏರಿಕೆಯಾಗಿ ಒಂದು ಡಾಲರ್‌ಗೆ ₹ 74.24ರಂತೆ ವಿನಿಮಯಗೊಂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು